Password: ಭಾರತದಲ್ಲಿ ಜನರು ಅತಿ ಹೆಚ್ಚಾಗಿ‌‌ ಬಳಸೋದು ಇದೇ ಪಾಸ್​ವರ್ಡ್​ಗಳನ್ನಂತೆ! ಅವು ಯಾವುವು ಗೊತ್ತಾ? | The most commonly used in india password is 12345


Password: ಭಾರತದಲ್ಲಿ ಜನರು ಅತಿ ಹೆಚ್ಚಾಗಿ‌‌ ಬಳಸೋದು ಇದೇ ಪಾಸ್​ವರ್ಡ್​ಗಳನ್ನಂತೆ! ಅವು ಯಾವುವು ಗೊತ್ತಾ?

ಪಾಸ್ವರ್ಡ್​

ಕೊವಿಡ್ ಸಾಂಕ್ರಾಮಿಕ ಹರಡುವಿಕೆಯು ಡಿಜಿಟಲ್​ಗೆ ತೀವ್ರವಾಗಿ ಹೊಂದಿಕೊಳ್ಳುವಂತೆ ಮಾಡಿತು. ಆಫೀಸ್ ಕೆಲಸಗಳು, ಆನ್​ಲೈನ್​ ಕ್ಲಾಸ್ ಹೀಗೆ ಎಲ್ಲವೂ ಮನೆಯಲ್ಲಿಯೇ ಕುಳಿತು ಮಾಡುವಂತಹ ಪರಿಸ್ಥಿತಿ ಎದುರಾಯಿತು. ಈಗೆಲ್ಲಾ ಪ್ರತಿಯೊಂದಕ್ಕೂ ಪಾಸ್​ವರ್ಡ್​ ಬೇಕೇಬೇಕು. ನಿಮ್ಮ ಪ್ರೊಫೈಲ್, ಡೀಟೇಲ್ಸ್, ಲೆಕ್ಕಪತ್ರ ಎಲ್ಲವೂ ಲೀಕ್ ಆಗದೇ ಸುರಕ್ಷತೆ ಕಾಯ್ದುಕೊಳ್ಳಲು ಪಾಸ್​ವರ್ಡ್​​ ಅಗತ್ಯವಿದೆ. ಹೀಗಿರುವಾಗ ನಾರ್ಡ್​ಪಾಸ್​ ಸಂಸ್ಥೆಯ ಹೊಸ ಅಧ್ಯಯನವು, ಭಾರತದಲ್ಲಿ ಸಾಮಾನ್ಯವಾಗಿ ಬಳಸುವ ಪಾಸ್​ವರ್ಡ್ ಯಾವುದು ಎಂಬುದನ್ನು ಬಹಿರಂಗಪಡಿಸುತ್ತದೆ. ಸುಲಭವಾಗಿ ಕಂಡುಹಿಡಿಯಲು ಸಾಧ್ಯವಾಗದ ಪಾಸ್​ವರ್ಡ್​ಗಳ ಆಯ್ಕೆಗಳನ್ನು ಹೊಂದಿರಿ ಎಂಬುದರ ಕುರಿತಾಗಿ ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕ ಏಜೆನ್ಸಿಗಳ ಎಚ್ಚರಿಕೆಯ ಹೊರತಾಗಿಯೂ ಸುಲಭದಲ್ಲಿ ಕಂಡುಹಿಡಿಯಬಹುದಾದ ಪಾಸ್​ವರ್ಡ್ಗಳ ಬಳಕೆಯಾಗುತ್ತಿದೆ ಎಂದು ಅಧ್ಯಯನ ತಿಳಿಸಿದೆ.

ಗ್ಲೋಬಲ್ ಪಾಸ್​ವರ್ಡ್ ಮ್ಯಾನೇಜರ್ ನಾರ್ಡ್​ಪಾಸ್​ ದೇಶಾದ್ಯಂತ 50 ಪಾಸ್​ವರ್ಡ್​ಗಳನ್ನು ಪಟ್ಟಿ ಮಾಡಿದೆ. ಭಾರತದಲ್ಲಿ Password ಎಂಬುದನ್ನು ಅತ್ಯಂತ ಸಾಮಾನ್ಯವಾಗಿ ಬಳಸುವ ಪಾಸ್​ವರ್ಡ್. ಈ ನಂತರದಲ್ಲಿ 12345, 123456, 123456789, 12345678, India123, 1234567890, 1234567 ಮತ್ತು abc123 ಎಂದು ತಿಳಿದು ಬಂದಿದೆ.

ನಾರ್ಡ್​ಪಾಸ್​ ಸಂಸ್ಥೆಯ ವರದಿಯ ಪ್ರಕಾರ, India123 ಅನ್ನು ಹೊರತುಪಡಿಸಿ ಈ ಎಲ್ಲಾ ಪಾಸ್​ವರ್ಡ್​ಗಳನ್ನು ಒಂದು ಸೆಕೆಂಡಿಗಿಂತ ಕಡಿಮೆ ಅವಧಿಯಲ್ಲಿ ಕ್ರ್ಯಾಕ್ ಮಾಡಬಹುದು. India123 ಎಂಬ ಪಾಸ್​ವರ್ಡ್​ಅನ್ನು ಭೇದಿಸಲು 17 ನಿಮಿಷಗಳು ತೆಗೆದುಕೊಳ್ಳುತ್ತದೆ. ಪಾಸ್​ವರ್ಡ್ ಕ್ರ್ಯಾಕ್ ಆಗುವ ಸಮಯ ಸೂಚಕವಾಗಿದ್ದರೂ ಪಾಸ್​ವರ್ಡ್ ಬಗ್ಗೆ ಎಷ್ಟು ಜಾಗರೂಕರಾಗಿರಬೇಕು ಎಂಬ ಕಲ್ಪನೆಯನ್ನು ಜನರಿಗೆ ನೀಡುತ್ತದೆ.

ಪಾಸ್​ವರ್ಡ್ ನಾವು ಹೊಂದಿಕೊಂಡ ಡಿಜಿಟಲ್ ಜೀವನಕ್ಕೆ ಗೇಟ್​ವೇ ಇದ್ದಹಾಗೆ ಎಂಬುದನ್ನು ಅರ್ಥ ಮಾಡಿಕೊಳ್ಳಲೇಬೇಕು. ನಾವು ಹೆಚ್ಚು ಸಮಯ ಆನ್​ಲೈನ್​ನಲ್ಲಿ ಕಳೆಯುವುದು ಜೊತೆಗೆ ನಮ್ಮ ಸೈಬರ್ ಸುರಕ್ಷತೆಯನ್ನು ನೋಡಿಕೊಳ್ಳುವುದು ಅಷ್ಟೇ ಮುಖ್ಯ ಎಂದು ನಾರ್ಡ್​ಪಾಸ್​ ಸಿಇಒ ಜೋನಾಸ್ ಕಾಕ್ಲಿರ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ದುರಾದೃಷ್ಟವಾಶಾತ್ ಪಾಸ್​ವರ್ಡ್​ಗಳು ಹೆಚ್ಚು ದುರ್ಬಲವಾಗುತ್ತಲೇ ಇರುತ್ತಿವೆ ಅಂದೆ ಸುಲಭವಾಗುತ್ತಿವೆ. ಜನರು ಇನ್ನೂ ಸರಿಯಾದ ಪಾಸ್​ವರ್ಡ್ ಬಳಕೆ ಮಾಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಸಾಮಾನ್ಯವಾಗಿ ಬಳಸಲ್ಪಟ್ಟ 50 ಪಾಸ್​ವರ್ಡ್​ಗಳನ್ನು ಪಟ್ಟಿಮಾಡಲಾಗಿದೆ. ಜಾಗತಿಕವಾಗಿ ಅತಿ ಹೆಚ್ಚು ಬಳಕೆಯಲ್ಲಿದ್ದು ಮೂರು ಸ್ಥಾನಗಳನ್ನು ಪಡೆದುಕೊಂಡ ಸಾಮಾನ್ಯ ಬಳಕೆಯ ಪಾಸ್​ವರ್ಡ್​ಗಳು ಹೀಗಿವೆ; 123456, 123456789 ಮತ್ತು 12345.

ನಿಮ್ಮ ಡಿಜಿಟಲ್ ಸುಕ್ಷತೆಯ ದೃಷ್ಟಿಯಿಂದ ಪಾಸ್​ವರ್ಡ್ ಹೆಚ್ಚು ಬಲವಾಗಿದ್ದಷ್ಟು ನಿಮಗೆ ಸುರಕ್ಷಿತ. ಹೀಗಿರುವಾಗ ಆನ್ಲೈನ್ ಮೂಲಕವೂ ಪೊಲೀಸ್ ಇಲಾಖೆ ಜನರನ್ನು ಎಚ್ಚರಿಸುವ ಸಂದೇಶವನ್ನು ಸಾರುತ್ತಿವೆ. ಅವುಗಳಲ್ಲಿ ಮುಂಬೈ ಪೊಲೀಸ್ ಇಲಾಖೆ ಕೂಡಾ ಒಂದು. ಜನರಿಗೆ ಪಾಸ್​ವರ್ಡ್ ಬಗ್ಗೆ ಹೆಚ್ಚು ಅರಿವು ಮೂಡಿಸಲು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಕೆಲವು ಪೋಸ್ಟ್​ಗಳು ಈ ಕೆಳಗಿನಂತಿವೆ;

TV9 Kannada


Leave a Reply

Your email address will not be published. Required fields are marked *