Pathan Movie | Box Office Collection: ಬಾಯಿ ಮಾತಿನ ಪ್ರಚಾರದಿಂದಾಗಿ ‘ಪಠಾಣ್’ ಸಿನಿಮಾದ ಗಲ್ಲಾಪೆಟ್ಟಿಗೆ ಭದ್ರವಾಗುತ್ತಿದೆ. ಶಾರುಖ್ ಖಾನ್ ಅವರು ಭರ್ಜರಿಯಾಗಿಯೇ ಕಮ್ಬ್ಯಾಕ್ ಮಾಡಿದ್ದಾರೆ.

ಶಾರುಖ್ ಖಾನ್
ನಟ ಶಾರುಖ್ ಖಾನ್ (Shah Rukh Khan) ಅವರ ಹೊಸ ಇನ್ನಿಂಗ್ಸ್ ಶುರು ಆಗಿದೆ. ಇಂದು (ಜ.25) ಅವರ ವೃತ್ತಿಜೀವನದ ಮೆರುಗು ಹೆಚ್ಚಿದೆ. ಹಲವು ವರ್ಷಗಳಿಂದ ಅವರು ಕಾಯುತ್ತಿದ್ದ ಮೆಗಾ ಹಿಟ್ ಈಗ ಅವರಿಗೆ ಸಿಕ್ಕಿದೆ. ಕಿಂಗ್ ಖಾನ್ ಅಭಿಮಾನಿಗಳು ಎಲ್ಲ ಚಿತ್ರಮಂದಿರಗಳಲ್ಲಿ ಹಬ್ಬ ಮಾಡುತ್ತಿದ್ದಾರೆ. ‘ಪಠಾಣ್’ ಸಿನಿಮಾ (Pathan Movie) ಭರ್ಜರಿ ಯಶಸ್ಸು ಕಂಡಿದ್ದು, ಬಾಕ್ಸ್ ಆಫೀಸ್ ಲೆಕ್ಕ ಕೂಡ ಸಿಕ್ಕಿದೆ. ಅಚ್ಚರಿ ಎಂದರೆ, ಬಿಡುಗಡೆಯಾಗಿ ಕೆಲವೇ ಶೋಗಳು ಪೂರ್ಣಗೊಳ್ಳುವ ಮುನ್ನ ಈ ಚಿತ್ರ ಬರೋಬ್ಬರಿ 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ (Taran Adarsh) ಅವರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಬಾಲಿವುಡ್ನಲ್ಲಿ ಬಿಡುಗಡೆ ಆಗುವ ಎಲ್ಲ ಸಿನಿಮಾಗಳ ಕಲೆಕ್ಷನ್ ಲೆಕ್ಕವನ್ನು ತರಣ್ ಆದರ್ಶ್ ಬಹಿರಂಗಪಡಿಸುತ್ತಾರೆ. ಅವರು ನೀಡುವ ಅಪ್ಡೇಟ್ಗಾಗಿ ನೆಟ್ಟಿಗರು ಕಾದಿರುತ್ತಾರೆ. ಇಂದು ತರಣ್ ಆದರ್ಶ್ ಅವರು ‘ಪಠಾಣ್’ ಸಿನಿಮಾದ ಮಧ್ಯಾಹ್ನದ ಮೂರು ಗಂಟೆವರೆಗಿನ ಬಾಕ್ಸ್ ಆಫೀಸ್ ಅಪ್ಡೇಟ್ ನೀಡಿದ್ದಾರೆ. ಅದರ ಅನ್ವಯ ಭಾರತದಲ್ಲಿ ಕೇವಲ ಮಲ್ಲಿಪ್ಲೆಕ್ಸ್ನಿಂದ 20.35 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.