PBKS vs RR Live Streaming: ಬಲಿಷ್ಠ ರಾಜಸ್ಥಾನಕ್ಕೆ ಪಂಜಾಬ್ ಸವಾಲು; ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ | IPL 2022 PBKS vs RR Live Streaming when and where to watch Punjab Kings vs Rajasthan Royals 7 May


IPL 2022 PBKS vs RR Live Streaming: ಪ್ಲೇ ಆಫ್ ಆಡುವ ಪಂಜಾಬ್ ಕಿಂಗ್ಸ್ ತಂಡದ ಆಸೆ ಇನ್ನೂ ಜೀವಂತವಾಗಿದ್ದು, ಇದಕ್ಕಾಗಿ ಅವರು ಇನ್ನುಳಿದ ತಮ್ಮ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕು.

ಐಪಿಎಲ್ 2022 (IPL 2022)ರಲ್ಲಿ, ಪಂಜಾಬ್ ಕಿಂಗ್ಸ್ ತನ್ನ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ತಂಡವನ್ನು ಸೋಲಿಸಿತು. 8 ವಿಕೆಟ್‌ಗಳ ಆ ಗೆಲುವು ಅವರಿಗೆ ಜೀವಾಳವಾಗಿ ಕೆಲಸ ಮಾಡಿದೆ. ಅದರಲ್ಲಿ ಪಂಜಾಬ್​ ತಂಡದ ಬ್ಯಾಟರ್​ಗಳು ತಂಡಕ್ಕೆ ಉತ್ತಮ ಕೊಡುಗೆ ನೀಡಿದರು. ಶಿಖರ್ ಧವನ್ ಮತ್ತು ಲಿಯಾಮ್ ಲಿವಿಂಗ್‌ಸ್ಟನ್ (Shikhar Dhawan and Liam Livingston) ಅವರ ಫಾರ್ಮ್ ಕೂಡ ಪಂಜಾಬ್​ಗೆ ಪ್ಲಸ್​ ಪಾಯಿಂಟ್ ಆಗಿದೆ. ಇವೆಲ್ಲವೂ ತಂಡದ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಕೆಲಸ ಮಾಡಿವೆ. ಈಗ ಅದೇ ಹೆಚ್ಚಿದ ನೈತಿಕತೆಯೊಂದಿಗೆ, ಈ ತಂಡವು ತನ್ನ ಹಾದಿಯಲ್ಲಿ ಮುಂದಿನ ಅಡಚಣೆಯಾಗಿರುವ ರಾಜಸ್ಥಾನ ರಾಯಲ್ಸ್‌ನ ಸವಾಲನ್ನು ಸಹ ಎದುರಿಸಲಿದೆ.

ಪ್ಲೇ ಆಫ್ ಆಡುವ ಪಂಜಾಬ್ ಕಿಂಗ್ಸ್ ತಂಡದ ಆಸೆ ಇನ್ನೂ ಜೀವಂತವಾಗಿದ್ದು, ಇದಕ್ಕಾಗಿ ಅವರು ಇನ್ನುಳಿದ ತಮ್ಮ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕು. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ತಂಡವನ್ನು ಸೋಲಿಸಿದ್ದರೂ, ಈ ತಂಡದ ಬೌಲರ್‌ಗಳು ಕೊಂಚ ಮಾರಕವಾಗಿರುವುದರಿಂದ ಅವರಿಗೆ ರಾಜಸ್ಥಾನವೇ ದೊಡ್ಡ ಅಡ್ಡಿಯಾಗಿದೆ. ಅಶ್ವಿನ್, ಚಹಾಲ್, ಪ್ರಸಿದ್ಧ್, ಬೋಲ್ಟ್ ಮತ್ತು ಕುಲ್ದೀಪ್ ಸೇನ್ ರಂತಹ ಮಾರಕ ಬೌಲಿಂಗ್​ ವಿಭಾಗವನ್ನು ಮೆಟ್ಟಿ ನಿಲ್ಲುವುದು ಪಂಜಾಬ್​ಗೆ ಈಗ ದೊಡ್ಡ ಸವಾಲಾಗಿದೆ.

ಪಂಜಾಬ್‌ಗೆ ರಾಜಸ್ಥಾನ ದೊಡ್ಡ ಸವಾಲು
ರಾಜಸ್ಥಾನ್ ರಾಯಲ್ಸ್ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ ರಾಜಸ್ಥಾನ್ 6ರಲ್ಲಿ ಗೆಲುವು ಸಾಧಿಸಿದೆ. ಆದರೆ, ಪಂಜಾಬ್ ಕಿಂಗ್ಸ್ ಇಷ್ಟೇ ಪಂದ್ಯಗಳಲ್ಲಿ 5 ಗೆಲುವಿನೊಂದಿಗೆ 7ನೇ ಸ್ಥಾನದಲ್ಲಿದೆ. ಆದರೆ, ಪಂಜಾಬ್ ತಂಡ ರಾಜಸ್ಥಾನವನ್ನು ಸೋಲಿಸುವಲ್ಲಿ ಯಶಸ್ವಿಯಾದರೆ, ದೊಡ್ಡ ಲಾಭ ಪಡೆಯಬಹುದು.

ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ
ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ಯಾವಾಗ ನಡೆಯಲಿದೆ?
ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯವು ಮೇ 7 ರಂದು ಶನಿವಾರ ನಡೆಯಲಿದೆ.

ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ಎಲ್ಲಿ ನಡೆಯಲಿದೆ?
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ನಡೆಯಲಿದೆ.

ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ಯಾವಾಗ ಪ್ರಾರಂಭವಾಗುತ್ತದೆ?
ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದ ಟಾಸ್ ಮಧ್ಯಾಹ್ನ 3 ಗಂಟೆಗೆ ನಡೆಯಲಿದ್ದು, ಮೊದಲ ಇನಿಂಗ್ಸ್ 03:30 ಕ್ಕೆ ಆರಂಭವಾಗಲಿದೆ.

ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದ ನೇರ ಪ್ರಸಾರವನ್ನು ಎಲ್ಲಿ ವೀಕ್ಷಿಸಬಹುದು?
ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನಲ್‌ಗಳಲ್ಲಿ ವಿವಿಧ ಭಾಷೆಗಳಲ್ಲಿ ನೋಡಬಹುದು.

TV9 Kannada


Leave a Reply

Your email address will not be published. Required fields are marked *