Menstrual Cramps: 10ರಲ್ಲಿ 9 ಮಹಿಳೆಯರು ಋತುಚಕ್ರದ ನೋವನ್ನು ಅನುಭವಿಸುತ್ತಾರೆ. ಹೊಟ್ಟೆಯ ಸೆಳೆತವು ಕೆಲವು ಜನರಿಗೆ ತುಂಬಾ ನೋವಿನಿಂದ ಕೂಡಿರುತ್ತದೆ. ಸಾಸಿವೆ ಎಣ್ಣೆ ಹಚ್ಚಿ ಪ್ರತಿದಿನ ಮಸಾಜ್ ಮಾಡಿಕೊಂಡರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ.

ಸಾಂದರ್ಭಿಕ ಚಿತ್ರ
ಋತುಚಕ್ರದ (Period) ಸಂದರ್ಭದಲ್ಲಿ ಉಂಟಾಗುವ ಹೊಟ್ಟೆ ನೋವು ಮಹಿಳೆಯರ ಜೀವವನ್ನೇ ಹಿಂಡಿಬಿಡುತ್ತದೆ. ಮುಟ್ಟಿನ ನೋವಿನಿಂದ ಬಳಲುತ್ತಿರುವವರು ಅದರಿಂದ ಪಾರಾಗಲು ಏನೇನೋ ಮಾಡುತ್ತಾರೆ. ಪ್ರತಿ ತಿಂಗಳೂ ಮಾತ್ರೆ ಸೇವಿಸುವವರು ಕೂಡ ಇದ್ದಾರೆ. ಅಂಕಿಅಂಶಗಳ ಪ್ರಕಾರ, 10ರಲ್ಲಿ 9 ಮಹಿಳೆಯರು ಋತುಚಕ್ರದ ನೋವನ್ನು (Menstrual Cramps) ಅನುಭವಿಸುತ್ತಾರೆ. ಹೊಟ್ಟೆಯ ಸೆಳೆತವು ಕೆಲವು ಜನರಿಗೆ ತುಂಬಾ ನೋವಿನಿಂದ ಕೂಡಿರುತ್ತದೆ.
ಮುಟ್ಟಿನ ನೋವನ್ನು ಕಡಿಮೆ ಮಾಡಲು ಇರುವ ಪರಿಣಾಮಕಾರಿ ಪರಿಹಾರಗಳು ಇಲ್ಲಿವೆ:
ತಾಜಾ ಸುದ್ದಿ
– ಕೆಳ ಹೊಟ್ಟೆಯ ಭಾಗದಲ್ಲಿ ಹಾಟ್ ಬ್ಯಾಗ್ ಇಟ್ಟುಕೊಳ್ಳುವುದು.
– ನಿಯಮಿತವಾಗಿ ಫಿಟ್ನೆಸ್ ಅಭ್ಯಾಸ ರೂಢಿಸಿಕೊಳ್ಳುವುದು.
– ಒಂದೇ ಬಾರಿ ಹೆಚ್ಚು ಆಹಾರ ಸೇವಿಸದಿರುವುದು.
– ಮಲ್ಟಿ ವಿಟಮಿನ್ ಸಪ್ಲಿಮೆಂಟ್ಗಳ ನಿಯಮಿತ ಸೇವನೆಯನ್ನು ಮಾಡುವುದು.
– ಉಪ್ಪು, ಕೆಫೀನ್, ಸಕ್ಕರೆ ಇತ್ಯಾದಿಗಳ ಬಳಕೆಯನ್ನು ಕಡಿಮೆ ಮಾಡುವುದು.
– 1 ಲೋಟ ಬಿಸಿ ನೀರಿಗೆ ಅರ್ಧ ಲಿಂಬೆ ರಸವನ್ನು ಹಿಂಡಿ, ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ ಕುಡಿದರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ.