Personal Loan: ಕಡಿಮೆ ಬಡ್ಡಿ ದರಕ್ಕೆ ಪರ್ಸನಲ್ ಲೋನ್ ನೀಡುತ್ತಿರುವ 9 ಬ್ಯಾಂಕ್​ಗಳಿವು | These 9 Banks Offering Cheaper Interest Rate On Personal Loan


Personal Loan: ಕಡಿಮೆ ಬಡ್ಡಿ ದರಕ್ಕೆ ಪರ್ಸನಲ್ ಲೋನ್ ನೀಡುತ್ತಿರುವ 9 ಬ್ಯಾಂಕ್​ಗಳಿವು

ಸಾಂದರ್ಭಿಕ ಚಿತ್ರ

ಸಾಲಗಾರರ ಸಾಮರ್ಥ್ಯಕ್ಕೆ ಅನುಗುಣವಾಗಿ ಆಯ್ಕೆ ಮಾಡಿದ ಮರುಪಾವತಿ ವೇಳಾಪಟ್ಟಿಯೊಂದಿಗೆ ದೀರ್ಘಾವಧಿಯ ಅಥವಾ ತುರ್ತು ಪರಿಸ್ಥಿತಿಗೆ ಹಣಕಾಸು ಒದಗಿಸಲು ಪರ್ಸನಲ್ ಲೋನ್ ಸುಲಭವಾದ ಪರಿಹಾರವಾಗಿದೆ. ಇದು ಅನ್​ ಸೆಕ್ಯೂರ್ಡ್​ ಸಾಲವಾಗಿದೆ. ಆದ್ದರಿಂದ ಸಾಲ ನೀಡುವವರಿಗೆ ಯಾವುದೇ ಆಧಾರ ಅಗತ್ಯವಿಲ್ಲ. ಇತರ ಸಾಲಗಳಿಗೆ ಹೋಲಿಸಿದರೆ ಬಡ್ಡಿ ದರ ಹೆಚ್ಚಾಗಿರುತ್ತದೆ. ಗರಿಷ್ಠ ಸಾಲ ಮತ್ತು ಬ್ಯಾಂಕ್ ವಿಧಿಸುವ ಬಡ್ಡಿದರಗಳನ್ನು ಕ್ರೆಡಿಟ್ ಸ್ಕೋರ್ ನಿರ್ಧರಿಸುತ್ತದೆ. ಬಡ್ಡಿದರಗಳು ಒಂದು ಬ್ಯಾಂಕ್‌ನಿಂದ ಮತ್ತೊಂದಕ್ಕೆ ಬದಲಾಗುತ್ತವೆ.

ಬಡ್ಡಿ ದರಗಳು
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗಳು ವಾರ್ಷಿಕ ಶೇ 8.90 ಬಡ್ಡಿದರಗಳೊಂದಿಗೆ ಅಗ್ಗದ ವಯಕ್ತಿಕ ಸಾಲವನ್ನು ನೀಡುತ್ತಿವೆ.

ಸಾರ್ವಜನಿಕ ವಲಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಎರಡನೇ ಸ್ಥಾನದಲ್ಲಿದೆ. ವಯಕ್ತಿಕ ಸಾಲಗಳ ಮೇಲೆ ಕನಿಷ್ಠ ಶೇ 8.95ರ ಬಡ್ಡಿಯನ್ನು ತೆಗೆದುಕೊಳ್ಳುತ್ತದೆ.

ಇಂಡಿಯನ್ ಬ್ಯಾಂಕ್ ಶೇ 9.05ರ ಬಡ್ಡಿಗೆ ವಯಕ್ತಿಕ ಸಾಲ ನೀಡುತ್ತಿದೆ.

ಶೇ 9.45ರ ಬಡ್ಡಿ ದರದೊಂದಿಗೆ ಬ್ಯಾಂಕ್ ಆಫ್ ಮಹಾರಾಷ್ಟ್ರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್ ಮತ್ತು ಪಟ್ಟಿಯಲ್ಲಿರುವ ಏಕೈಕ ಖಾಸಗಿ ಬ್ಯಾಂಕ್ ಐಡಿಬಿಐ ಬ್ಯಾಂಕ್ ವೈಯಕ್ತಿಕ ಸಾಲದ ಮೇಲಿನ ಶೇ 9.50ರ ಬಡ್ಡಿಯೊಂದಿಗೆ ಜಂಟಿಯಾಗಿ ಐದನೇ ಸ್ಥಾನವನ್ನು ಪಡೆದುಕೊಂಡಿವೆ.

ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆರನೇ ಸ್ಥಾನದಲ್ಲಿದೆ. ಗ್ರಾಹಕರಿಗೆ ಶೇ 9.60 ಬಡ್ಡಿ ದರದಲ್ಲಿ ವಯಕ್ತಿಕ ಸಾಲಗಳನ್ನು ನೀಡುತ್ತಿದೆ.

ಬ್ಯಾಂಕ್ ಆಫ್ ಬರೋಡಾದಲ್ಲಿ (BoB) ವಯಕ್ತಿಕ ಸಾಲದ ಬಡ್ಡಿ ದರಗಳು ಶೇ 10ರಿಂದ ಪ್ರಾರಂಭವಾಗುತ್ತವೆ.

ಕೊನೆಯ ಮಾತು
ವಯಕ್ತಿಕ ಸಾಲಗಳ ಮರುಪಾವತಿ ಅವಧಿಯು ಸಾಮಾನ್ಯವಾಗಿ ಒಂದರಿಂದ ಐದು ವರ್ಷಗಳ ಮಧ್ಯೆ ಇರುತ್ತದೆ. ಸಾಲದ ಅವಧಿಯು ಹೆಚ್ಚಾದಷ್ಟೂ ಬ್ಯಾಂಕ್ ವಿಧಿಸುವ ಬಡ್ಡಿ ದರ ಹೆಚ್ಚಾಗುತ್ತದೆ.

TV9 Kannada


Leave a Reply

Your email address will not be published. Required fields are marked *