Personality Test: ನೀವು ಕುಳಿತುಕೊಳ್ಳುವ ಭಂಗಿಯಿಂದ ನಿಮ್ಮ ವ್ಯಕ್ತಿತ್ವದ ಗುಣಲಕ್ಷಣ ತಿಳಿಯಿರಿ | Personality Test Know your personality by sitting position


Personality Test: ನೀವು ಕುಳಿತುಕೊಳ್ಳುವ ಭಂಗಿಯಿಂದ ನಿಮ್ಮ ವ್ಯಕ್ತಿತ್ವದ ಗುಣಲಕ್ಷಣ ತಿಳಿಯಿರಿ

ಸೌಜನ್ಯ : ಅಂತರ್ಜಾಲ

Sitting Position : ಪಡೆದ ಸರ್ಟಿಫಿಕೇಟ್​ಗಳಷ್ಟೇ ಉದ್ಯೋಗ ದೊರಕಿಸಿಕೊಡಲಾರವು ಎಂಬುದು ಸದ್ಯದ ಸತ್ಯ. ವ್ಯಕ್ತಿಯಲ್ಲಿರುವ ಕೌಶಲ, ಸ್ವಭಾವ, ನಡೆವಳಿಕೆಯೇ ಈಗ ಹೆಚ್ಚು ಪ್ರಸ್ತುತ. ಹಾಗಾಗಿ ಇಂಥ ವ್ಯಕ್ತಿತ್ವ ಪರೀಕ್ಷೆಗಳಿಗೆ ಈಗ ಹೆಚ್ಚು ಮಾನ್ಯತೆ ಇದೆ.

Sitting Position : ಏನೆಲ್ಲ ಪದವಿಗಳನ್ನು ಗಳಿಸಿದ್ದರೂ ಇಂದಿನ ದಿನಮಾನಗಳಲ್ಲಿ ನಮ್ಮ ವ್ಯಕ್ತಿತ್ವ ಎನ್ನುವುದು ಬಹುಮುಖ್ಯ ಅಂಶವಾಗಿದೆ. ಯಾರು ಎಂಥ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ವರ್ಷಗಳಿಂದ ಹಲವಾರು ಸಂಶೋಧನೆಗಳು ನಡೆಯುತ್ತಲೇ ಇವೆ. ಫೇಸ್ ರೀಡಿಂಗ್ ಅಥವಾ ಮೂಗು ನೋಡಿ ವ್ಯಕ್ತಿತ್ವ ಕಂಡುಹಿಡಿಯುವುದು, ಇಷ್ಟಪಡುವ ಬಣ್ಣಗಳಿಂದ ಸ್ವಭಾವ ಪತ್ತೆ ಹಚ್ಚುವುದು, ರಕ್ತದ ಗುಂಪಿನಿಂದ ವ್ಯಕ್ತಿಯ ಗುಣಲಕ್ಷಣ ಅರಿತುಕೊಳ್ಳುವುದು ಹೀಗೆ. ಪಡೆದ ಸರ್ಟಿಫಿಕೇಟ್​ಗಳಷ್ಟೇ ಉದ್ಯೋಗ ದೊರಕಿಸಿಕೊಡಲಾರವು ಎಂಬುದು ಸದ್ಯದ ಸತ್ಯ. ವ್ಯಕ್ತಿಯಲ್ಲಿರುವ ಕೌಶಲ, ಸ್ವಭಾವ, ನಡೆವಳಿಕೆಯೇ ಈಗ ಹೆಚ್ಚು ಪ್ರಸ್ತುತ. ಹಾಗಾಗಿ ಇಂಥ ವ್ಯಕ್ತಿತ್ವ ಪರೀಕ್ಷೆಗಳಿಗೆ ಜನ ಆಕರ್ಷಿತರಾಗುತ್ತಿದ್ದಾರೆ. ಉದ್ಯೋಗ ಸ್ಥಳದಲ್ಲಿ ಸಂದರ್ಶಕರು ಅಭ್ಯರ್ಥಿಯ ವ್ಯಕ್ತಿತ್ವ ಅರಿತುಕೊಳ್ಳುವಲ್ಲಿ ಇಂಥ ಕ್ರಮಗಳು ಸುಲಭಸಾಧ್ಯವೂ ಆಗುತ್ತಿದೆ. ಇತ್ತೀಚೆಗೆ ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ, ಕುಳಿತುಕೊಳ್ಳುವ ಭಂಗಿಯಿಂದ ವ್ಯಕ್ತಿಯ ಆಂತರ್ಯವನ್ನು ಅರಿಯಬಹುದಾಗಿದೆ ಎಂಬ ಶೋಧನೆ ಬೆಳಕಿಗೆ ಬಂದಿದೆ.

1. ನೇರವಾಗಿ ಮೊಣಕಾಲನ್ನಿರಿಸುವುದು (Knees Straight)
ಸಂದರ್ಶನಗಳಲ್ಲಿ ಮೊಣಕಾಲುಗಳನ್ನು ಲಂಬಕೋನಾಕೃತಿಯಲ್ಲಿ ನೇರ ಇರಿಸಿ ಕೂರುವ ವ್ಯಕ್ತಿಗೆ ತನ್ನಲ್ಲಿರುವ ಕೌಶಲ ಮತ್ತು ಕೆಲಸ ಮಾಡುವ ಸಾಮರ್ಥ್ಯದ ಬಗ್ಗೆ ಆತ್ಮವಿಶ್ವಾಸವಿದೆ ಎಂದರ್ಥ. ಜೊತೆಗೆ ಆರೋಗ್ಯಕರ ಮತ್ತು ಸಕಾರಾತ್ಮಕ ದೃಷ್ಟಿಕೋನವೂ ಇವರಲ್ಲಿ ಇರುವುದರಿಂದ ಅಭದ್ರತೆ ಇವರನ್ನು ಹೆಚ್ಚಾಗಿ ಕಾಡಲಾರದು ಎಂದು ಗ್ರಹಿಸಲಾಗುತ್ತದೆ. ಇಂಥವರು ಬುದ್ಧಿವಂತರು, ತರ್ಕಬದ್ಧವಾಗಿ ಯೋಚಿಸುವವರು, ಆಲೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವವರು, ದೈನಂದಿನ ಜೀವನದಲ್ಲಿ ಸಮಯಪ್ರಜ್ಞೆ ಉಳ್ಳವರಾಗಿರುತ್ತಾರೆ. ಯಾವುದೇ ಸ್ಥಳಕ್ಕೆ, ಸಭೆಗೆ ಅಥವಾ ಸಂದರ್ಶನಕ್ಕೆ ತಡವಾಗಿ ಸೂಕ್ತ ಸಮಯದಲ್ಲಿ ಹಾಜರಿರುತ್ತಾರೆ. ಮನೆ, ಕಚೇರಿ ಸ್ಥಳವನ್ನು ಅಚ್ಚುಕಟ್ಟಾಗಿ ಇರಿಸಿಕೊಳ್ಳುತ್ತಾರೆ. ಸಾಕಷ್ಟು ಪ್ರಾಮಾಣಿಕರಾದ ಇವರು ನೇರವಾಗಿ ಮಾತನಾಡುವ ಸ್ವಭಾವದವರು. ಭಾವನೆಳನ್ನು ನಿಯಂತ್ರಣದಲ್ಲಿರಿಸಿಕೊಳ್ಳುವ ಇವರು ಯಾವುದೇ ರೀತಿಯ ಸಂಘರ್ಷಕ್ಕೆ ಇಳಿಯರು ಅಥವಾ ಪ್ರತಿಕೂಲ ಸನ್ನಿವೇಶಗಳಲ್ಲಿ ತಾವೇ ಶಾಂತವಾಗಿ ಉಳಿಯುತ್ತಾರೆ.

TV9 Kannada


Leave a Reply

Your email address will not be published.