Petrol Price on November 25: ಈ ರಾಜ್ಯದಲ್ಲಿ ಇಂದು ಪೆಟ್ರೋಲ್ ಬೆಲೆ ಹೆಚ್ಚಳ; ಇಂದಿನ ಡೀಸೆಲ್ ದರ ಹೀಗಿದೆ – Petrol Price on November 25 Diesel Price Today Check Latest Fuel Price in Bengaluru Mumbai other Cities Kannada News


Fule Price Today: ನವೆಂಬರ್ 1ರಿಂದ ತೈಲ ಕಂಪನಿಗಳು ಪ್ರತಿ ಲೀಟರ್ ತೈಲಕ್ಕೆ 40 ಪೈಸೆ ಪರಿಹಾರವನ್ನು ನೀಡುವ ನಿರೀಕ್ಷೆಯಿತ್ತು. ಆದರೆ, ಕಂಪನಿಗಳು ಇದನ್ನು ಮಾಡಲಿಲ್ಲ.

Petrol Price on November 25: ಈ ರಾಜ್ಯದಲ್ಲಿ ಇಂದು ಪೆಟ್ರೋಲ್ ಬೆಲೆ ಹೆಚ್ಚಳ; ಇಂದಿನ ಡೀಸೆಲ್ ದರ ಹೀಗಿದೆ

ಪೆಟ್ರೋಲ್ ಮತ್ತು ಡೀಸೆಲ್ ದರ

Fuel Price on November 25: ಕಳೆದ 24 ಗಂಟೆಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಆದರೆ, ಸರ್ಕಾರಿ ತೈಲ ಕಂಪನಿಗಳು ಇಂದು ಬೆಳಿಗ್ಗೆ ಹಲವೆಡೆ ಪೆಟ್ರೋಲ್ (Petrol Price) ಮತ್ತು ಡೀಸೆಲ್ (Diesel Price) ಚಿಲ್ಲರೆ ಬೆಲೆಯನ್ನು ಬದಲಾಯಿಸಿವೆ. ಲಕ್ನೋದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗಿದೆ. ಆದರೆ, ದೆಹಲಿ-ಮುಂಬೈ ಸೇರಿದಂತೆ ದೇಶದ ನಾಲ್ಕೂ ಮಹಾನಗರಗಳಲ್ಲಿ ಇಂದಿಗೂ ತೈಲ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಸರ್ಕಾರಿ ತೈಲ ಕಂಪನಿಗಳು ಬಿಡುಗಡೆ ಮಾಡಿದ ದರದ ಪ್ರಕಾರ, ಇಂದು ಬೆಳಿಗ್ಗೆ ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ (ನೋಯ್ಡಾ-ಗ್ರೇಟರ್ ನೋಯ್ಡಾ) ಪೆಟ್ರೋಲ್ ಲೀಟರ್‌ಗೆ 5 ಪೈಸೆ ಅಗ್ಗವಾಗಿ 96.60 ರೂ ಮತ್ತು ಡೀಸೆಲ್ ಲೀಟರ್‌ಗೆ 89.77 ರೂ. ಘಾಜಿಯಾಬಾದ್‌ನಲ್ಲಿ ಪೆಟ್ರೋಲ್ 32 ಪೈಸೆ ಕುಸಿದು ಲೀಟರ್‌ಗೆ 96.26 ರೂ.ಗೆ ಮಾರಾಟವಾದರೆ, ಡೀಸೆಲ್ ಲೀಟರ್‌ಗೆ 30 ಪೈಸೆ ಇಳಿಕೆಯಾಗಿ 89.47 ರೂ. ಯುಪಿ ರಾಜಧಾನಿ ಲಕ್ನೋದಲ್ಲಿ ಇಂದು ಪೆಟ್ರೋಲ್ ದರ 13 ಪೈಸೆ ಏರಿಕೆಯಾಗಿದ್ದು, ಲೀಟರ್‌ಗೆ 96.57 ರೂ.ಗೆ ಏರಿಕೆಯಾಗಿದೆ ಮತ್ತು ಡೀಸೆಲ್ ಲೀಟರ್‌ಗೆ 12 ಪೈಸೆ ಏರಿಕೆಯಾಗಿ 89.76 ರೂ.ಗೆ ತಲುಪಿದೆ. ಮತ್ತೊಂದೆಡೆ ಇಂದು ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಪೆಟ್ರೋಲ್ ಬೆಲೆ 21 ಪೈಸೆ ಇಳಿಕೆಯಾಗಿ ಲೀಟರ್‌ಗೆ 107.59 ರೂ ಆಗಿದ್ದರೆ, ಡೀಸೆಲ್ ಲೀಟರ್‌ಗೆ 20 ಪೈಸೆ ಇಳಿಕೆಯಾಗಿ 94.36 ರೂ. ಆಗಿದೆ.

ಭಾರತದ ಪ್ರಮುಖ ನಗರಗಳಲ್ಲಿ 6 ತಿಂಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರವಾಗಿದೆ. OPEC ರಾಷ್ಟ್ರಗಳು ಕಚ್ಚಾ ಉತ್ಪಾದನೆಯಲ್ಲಿ ಕಡಿತದ ಘೋಷಣೆ ಮಾಡಿದ ನಂತರ ಕಚ್ಚಾ ತೈಲದಲ್ಲಿ ಏರಿಳಿತಗಳಾಗಿತ್ತು. ನವೆಂಬರ್ 1ರಿಂದ ತೈಲ ಕಂಪನಿಗಳು ಪ್ರತಿ ಲೀಟರ್ ತೈಲಕ್ಕೆ 40 ಪೈಸೆ ಪರಿಹಾರವನ್ನು ನೀಡುವ ನಿರೀಕ್ಷೆಯಿತ್ತು. ಆದರೆ, ಕಂಪನಿಗಳು ಇದನ್ನು ಮಾಡಲಿಲ್ಲ. ದೇಶಿಯ ಮಾರುಕಟ್ಟೆಯಲ್ಲಿ ಸುಮಾರು 6 ತಿಂಗಳಿನಿಂದ ಪೆಟ್ರೋಲ್ -ಡೀಸೆಲ್ ಬೆಲೆ ಸ್ಥಿರವಾಗಿದೆ. ಇದು ಜನಸಾಮಾನ್ಯರಿಗೆ ನೆಮ್ಮದಿ ತಂದಿದೆ.

TV9 Kannada


Leave a Reply

Your email address will not be published.