Petrol Price on November 9: ಬೆಂಗಳೂರು, ಚೆನ್ನೈ ಸೇರಿ ಭಾರತದ ಪ್ರಮುಖ ನಗರಗಳ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ – Petrol Price on November 9 Check Latest Petrol Rate and Diesel Price Today in Bengaluru Mumbai other Cities Fuel Price


ಕಳೆದ 5 ತಿಂಗಳಿನಿಂದ ದೇಶಾದ್ಯಂತ ಇಂಧನದ ಬೆಲೆಗಳು ಸ್ಥಿರವಾಗಿವೆ. ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಇಂಧನದ ಬೆಲೆಗಳ ಪರಿಷ್ಕರಣೆಯನ್ನು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಮಾಡುತ್ತವೆ.

Petrol Price on November 9: ಬೆಂಗಳೂರು, ಚೆನ್ನೈ ಸೇರಿ ಭಾರತದ ಪ್ರಮುಖ ನಗರಗಳ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ

ಪೆಟ್ರೋಲ್ ದರ

Fuel Price on November 9: ಭಾರತದಲ್ಲಿ ಇಂದು ಕೂಡ ಪೆಟ್ರೋಲ್ (Petrol Price) ಮತ್ತು ಡೀಸೆಲ್ ಬೆಲೆ (Diesel Price) ಯಥಾಸ್ಥಿತಿ ಕಾಯ್ದುಕೊಂಡಿದೆ. 2 ದಿನಗಳ ಹಿಂದೆ, ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 100 ರೂ. ತಲುಪಿತ್ತು. ಆದರೆ ಮತ್ತೊಮ್ಮೆ ಅದರಲ್ಲಿ ಕುಸಿತ ಕಂಡುಬಂದಿದೆ. ಆಗಸ್ಟ್-ಸೆಪ್ಟೆಂಬರ್‌ನಲ್ಲಿ ದಾಖಲೆಯ ಕುಸಿತದ ನಂತರ, ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ಕಳೆದ 5 ತಿಂಗಳಿನಿಂದ ದೇಶಾದ್ಯಂತ ಇಂಧನದ ಬೆಲೆಗಳು ಸ್ಥಿರವಾಗಿವೆ. ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಇಂಧನದ ಬೆಲೆಗಳ ಪರಿಷ್ಕರಣೆಯನ್ನು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಮಾಡುತ್ತವೆ.

ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 8 ರೂ. ಮತ್ತು ಡೀಸೆಲ್‌ಗೆ 6 ರೂ. ಕಡಿತಗೊಳಿಸಿದ್ದರಿಂದ ಮೇ ತಿಂಗಳ ಅಂತ್ಯದಲ್ಲಿ ಇಂಧನದ ಬೆಲೆಗಳಲ್ಲಿ ದೇಶಾದ್ಯಂತ ಏರಿಳಿತ ಕಂಡುಬಂದಿತ್ತು. ಇಂದು ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ…

ಪರಿಷ್ಕೃತ ದರಗಳ ಪ್ರಕಾರ, ಭಾರತದ ಪ್ರಮುಖ ಮೆಟ್ರೋಪಾಲಿಟನ್ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆಗಳು ಹೀಗಿವೆ…

ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ಕ್ರಮವಾಗಿ 96.72 ಮತ್ತು 89.62 ರೂ. ಆಗಿದೆ.
ಮುಂಬೈನಲ್ಲಿ ಪೆಟ್ರೋಲ್‌ಗೆ 106.31 ರೂ ಮತ್ತು ಡೀಸೆಲ್‌ಗೆ 94.27 ರೂ.
ಚೆನ್ನೈ ಪೆಟ್ರೋಲ್ 102.63 ರೂ. ಮತ್ತು ಡೀಸೆಲ್ ಲೀಟರ್‌ಗೆ 94.24 ರೂ.
ಕೋಲ್ಕತ್ತಾ ಪೆಟ್ರೋಲ್ 106.03 ರೂ. ಮತ್ತು ಡೀಸೆಲ್ ಲೀಟರ್‌ಗೆ 92.76 ರೂ.
ನೋಯ್ಡಾದಲ್ಲಿ ಪೆಟ್ರೋಲ್ 96.57 ರೂ. ಮತ್ತು ಡೀಸೆಲ್ ಲೀಟರ್‌ಗೆ 89.96 ರೂ.
ಲಕ್ನೋದಲ್ಲಿ ಪೆಟ್ರೋಲ್ 96.57 ರೂ. ಮತ್ತು ಡೀಸೆಲ್ ಲೀಟರ್‌ಗೆ 89.76 ರೂ.
ಜೈಪುರದಲ್ಲಿ ಪೆಟ್ರೋಲ್ 108.48 ರೂ. ಮತ್ತು ಡೀಸೆಲ್ ಲೀಟರ್‌ಗೆ 93.72 ರೂ.
ತಿರುವನಂತಪುರದಲ್ಲಿ ಪೆಟ್ರೋಲ್ 107.71 ರೂ. ಮತ್ತು ಡೀಸೆಲ್ ಲೀಟರ್‌ಗೆ 96.52 ರೂ.
ಪಾಟ್ನಾದಲ್ಲಿ ಪೆಟ್ರೋಲ್ 107.24 ರೂ. ಮತ್ತು ಡೀಸೆಲ್ ಲೀಟರ್‌ಗೆ 94.04 ರೂ.
ಬೆಂಗಳೂರಿನಲ್ಲಿ ಪೆಟ್ರೋಲ್ 101.94 ರೂ. ಮತ್ತು ಡೀಸೆಲ್ ಲೀಟರ್‌ಗೆ 87.89 ರೂ.
ಹೈದರಾಬಾದ್‌ನಲ್ಲಿ ಪೆಟ್ರೋಲ್ 109.66 ರೂ. ಮತ್ತು ಡೀಸೆಲ್ ಲೀಟರ್‌ಗೆ 97.82 ರೂ. ಆಗಿದೆ.

TV9 Kannada


Leave a Reply

Your email address will not be published.