Petrol Price Today: ಎಷ್ಟಿದೆ ಇಂದು ಪೆಟ್ರೋಲ್​-ಡೀಸೆಲ್​ ಬೆಲೆ?, ಎಸ್​ಎಂಎಸ್ ಮೂಲಕವೇ ತೈಲ ಬೆಲೆ ತಿಳಿಯುವ ವಿಧಾನ ಹೇಗೆ? ಇಲ್ಲಿದೆ ಮಾಹಿತಿ​ | Petrol and Diesel Prices Remain Steady check here to know today Price


Petrol Price Today: ಎಷ್ಟಿದೆ ಇಂದು ಪೆಟ್ರೋಲ್​-ಡೀಸೆಲ್​ ಬೆಲೆ?, ಎಸ್​ಎಂಎಸ್ ಮೂಲಕವೇ ತೈಲ ಬೆಲೆ ತಿಳಿಯುವ ವಿಧಾನ ಹೇಗೆ? ಇಲ್ಲಿದೆ ಮಾಹಿತಿ​

ಪ್ರಾತಿನಿಧಿಕ ಚಿತ್ರ

Petrol Diesel Price Today |ಭಾರತದ ತೈಲ ಕಂಪನಿಗಳು ಇಂದು ಬೆಳಗ್ಗೆ ಪೆಟ್ರೋಲ್​-ಡೀಸೆಲ್​ ಬೆಲೆಯನ್ನು ಬಿಡುಗಡೆ ಮಾಡಿದ್ದು,ಇಂದು ಕೂಡ ಇಂಧನಗಳ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ಎರಡೂವರೆ ತಿಂಗಳುಗಳಿಂದಲೂ ತೈಲಗಳ ಬೆಲೆ ಸ್ಥಿರವಾಗಿಯೇ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಏರಿಳಿತವಾಗುತ್ತಿದ್ದರೂ, ಅದು ಪೆಟ್ರೋಲ್​-ಡೀಸೆಲ್​ ಬೆಲೆಯ ಮೇಲೆ ಯಾವುದೇ ಪ್ರಭಾವ ಬೀರುತ್ತಿಲ್ಲ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್​ ಪ್ರತಿ ಲೀಟರ್​ಗೆ 95.41 ರೂಪಾಯಿಯೇ ಇದ್ದು, ಡೀಸೆಲ್​ ಪ್ರತಿ ಲೀಟರ್​ಗೆ 86.67 ರೂ.ಇದೆ. ತೈಲ ಕಂಪನಿಗಳು ಪ್ರತಿದಿನ ಬೆಳಗ್ಗೆಯೇ ವಿವಿಧ ಪ್ರಮುಖ ನಗರಗಳ ಪೆಟ್ರೋಲ್​-ಡೀಸೆಲ್​ ಬೆಲೆಯನ್ನು ಬಿಡುಗಡೆ ಮಾಡುತ್ತವೆ.  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲಕ್ಕೆ ಇರುವ ಬೆಲೆ ಆಧಾರದಲ್ಲಿ ಪೆಟ್ರೋಲ್​-ಡೀಸೆಲ್​ ಬೆಲೆ ನಿರ್ಧರಿಸಲಾಗುತ್ತದೆ.  

ನವೆಂಬರ್​​ಗೂ ಮೊದಲು ದೇಶದಲ್ಲಿ ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆಯಾಗುತ್ತಲೇ ಇತ್ತು. ಆದರೆ ದೀಪಾವಳಿಗೂ ಮುನ್ನಾದಿನ ಅಂದರೆ ನವೆಂಬರ್ 4ರಂದು ಕೇಂದ್ರ ಸರ್ಕಾರ ಪೆಟ್ರೋಲ್​-ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿತ್ತು. ಅದಾದ ಮೇಲೆ ಹಲವು ರಾಜ್ಯಸರ್ಕಾರಗಳೂ ಕೂಡ ವ್ಯಾಟ್​ (VAT) ಕಡಿತಗೊಳಿಸಿವೆ. ಹೀಗಾಗಿ ಅಂದಿನಿಂದಲೂ ಪೆಟ್ರೋಲ್​-ಡೀಸೆಲ್​ ಬೆಲೆ ಮಹಾನಗರಗಳಲ್ಲಿ ಸ್ಥಿರವಾಗಿಯೇ ಇವೆ.  ಹಾಗಿದ್ದಾಗ್ಯೂ ಕೂಡ ದೇಶದ 25ಕ್ಕೂ ಪ್ರಮುಖ ನಗರಗಳಲ್ಲಿ ಪೆಟ್ರೋಲ್​ ಬೆಲೆ 100 ರೂಪಾಯಿ ಮೇಲೆ ಇದೆ.

ಎಷ್ಟಿದೆ ಮಹಾನಗರಗಳಲ್ಲಿ ಇಂದು ಇಂಧನ ದರ?

ಭಾರತದ ಯಾವುದೇ ನಗರಗಳಲ್ಲೂ ಇಂದು ತೈಲಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್​ ಬೆಲೆ 100.58 ರೂ. ಮತ್ತು ಡೀಸೆಲ್​ ಬೆಲೆ 85.01 ರೂ. ಇದ್ದರೆ, ಮೈಸೂರಿನಲ್ಲಿ ಪೆಟ್ರೋಲ್​ ದರ 100.08 ರೂ., ಡೀಸೆಲ್​ ದರ 84.56 ರೂ. ಆಗಿದೆ. ಹಾಗೇ ಮಂಗಳೂರಿನಲ್ಲಿ ಪೆಟ್ರೋಲ್​ 99.76 ರೂ. ಮತ್ತು ಡೀಸೆಲ್​ 84.24 ರೂ.ಗೆ ಮಾರಾಟವಾಗುತ್ತಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಡೀಸೆಲ್​ ಬೆಲೆ ಪ್ರತಿ ಲೀಟರ್​ಗೆ 86.67 ರೂ. ಇದ್ದರೆ, ಪೆಟ್ರೋಲ್​ ದರ 95.41 ರೂ.ಆಗಿದೆ. ಮುಂಬೈ ಮಹಾನಗರಿಯಲ್ಲೂ ಸಹ ಯಾವುದೇ ಬದಲಾವಣೆಯಾಗಿಲ್ಲ. ಇಲ್ಲಿ ಪೆಟ್ರೋಲ್​ ದರ 109.98 ರೂ. ಮತ್ತು ಡೀಸೆಲ್​ ದರ 94.14 ರೂ. ಆಗಿದೆ. ಹಾಗೇ, ಚೆನ್ನೈನಲ್ಲಿ ಪೆಟ್ರೋಲ್​ ದರ 101.40 ರೂ. ಇದೆ.  ಡೀಸೆಲ್​ ದರ 91.43 ರೂ. ಆಗಿದೆ. ರಾಷ್ಟ್ರದ ಸುಮಾರು 27 ಮಹಾನಗರಗಳಲ್ಲಿ ಪೆಟ್ರೋಲ್​ ದರ 100 ರೂ.ಗಡಿ ದಾಟಿದೆ.

ನೀವೇ ಚೆಕ್​ ಮಾಡಿಕೊಳ್ಳಬಹುದು

ನಿಮ್ಮ ನಗರದಲ್ಲಿರುವ ಪೆಟ್ರೋಲ್​-ಡೀಸೆಲ್​ ಬೆಲೆಯನ್ನು ಗ್ರಾಹಕರೇ ಎಸ್​ಎಂಎಸ್ ಮೂಲಕ ಪಡೆದುಕೊಳ್ಳಬಹುದು. ಇಂಡಿಯನ್ ಆಯ್ಲ್​ ಕಂಪನಿ ಗ್ರಾಹಕರು RSP <space> (Dealer Code of Petrol Pump -ಡೀಲರ್ ಕೋಡ್​ ಹಾಕಿ ) ಎಂದು  9224992249 ನಂಬರ್​ಗೆ ಎಸ್​ಎಂಎಸ್​ ಕಳಿಸಬೇಕು. ನಂತರ ಬಿಪಿಸಿಎಲ್​ ಗ್ರಾಹಕರು ಇದೇ ಮಾದರಿಯಲ್ಲಿ 9223112222 ಕ್ಕೆ ಮತ್ತು ಎಚ್​ಪಿಸಿಎಲ್​ ಗ್ರಾಹಕರು HPPrice ಎಂದು ಬರೆದು, ಕೋಡ್ ಹಾಕಿ 9222201122ಕ್ಕೆ ಕಳಿಸಬೇಕು.

TV9 Kannada


Leave a Reply

Your email address will not be published. Required fields are marked *