Pink Leopard: ಭಾರತದಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡ ಅಪರೂಪದ ಗುಲಾಬಿ ಚಿರತೆ! | Viral News Pink leopard spotted rajasthan ranakpur for the first time history in india


Pink Leopard: ಭಾರತದಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡ ಅಪರೂಪದ ಗುಲಾಬಿ ಚಿರತೆ!

ಗುಲಾಬಿ ಚಿರತೆ

ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಜಸ್ಥಾನದ ಪಾಳಿ ಜಿಲ್ಲೆಯ ರಣಕ್​ಪುರ ಪ್ರದೇಶದಲ್ಲಿ ಸ್ಥಳೀಯರು ಅಪರೂಪದ ಗುಲಾಬಿ ಚಿರತೆಯನ್ನು ಗುರಿತಿಸಿದ್ದಾರೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಗುಲಾಬಿ ಚಿರತೆ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತದಲ್ಲಿ ಚಿರತೆ ಸಾಮಾನ್ಯವಾಗಿ ಮಸುಕಾದ ಹಳದಿ ಬಣ್ಣ ಅಥವಾ ಹಳದಿ- ಕಂದು ಬಣ್ಣವನ್ನು ಹೊಂದಿರುತ್ತದೆ. ಪತ್ತೆಯಾದ ಗುಲಾಬಿ ಚಿರತೆ ಕೆಂಪು ಕಂದು ಮಿಶ್ರಿತ ಚರ್ಮವನ್ನು ಹೊಂದಿದೆ. 

ರಣಕ್​ಪುರ ಮತ್ತು ಕುಂಭಲ್​ಗಢದ ಸ್ಥಳೀಯರು ಈ ಹಿಂದೆ ಈ ಚಿರತೆಯನ್ನು ನೋಡಿರುವುದಾಗಿ ಹೇಳಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ. ಉದಯಪುರ ಮೂಲದ ವ್ಯನ್ಯಜೀವಿ ಸಂರಕ್ಷಣಾಧಿಕಾರಿ ಮತ್ತು ಛಾಯಾಗ್ರಾಹಕ ಹಿತೇಶ್ ಮೋಟ್ವಾನಿ ಅವರು ನಾಲ್ಕು ದಿನದ ಹುಡುಕಾಟದ ನಂತರ ಚಿರತೆಯ ಫೋಟೋಗಳನ್ನು ಸೆರೆ ಹಿಡಿದಿದ್ದಾರೆ. ಚಿರತೆಯ ವಯಸ್ಸು ಐದರಿಂದ ಆರು ವರ್ಷವಿರಬಹುದು ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಕುಂಭಲ್​ಗಢ ಅರಣ್ಯ ಪ್ರದೇಶವು ರಾಜಸ್ಥಾನದ ರಾಜ್ಸಮಂದ್ ಜಿಲ್ಲೆಯಲ್ಲಿದೆ. ಇದು 600 ಚದರ ಕಿಲೋಮೀಟರ್​ಗಳಷ್ಟು ವ್ಯಾಪಿಸಿದೆ. ಭಾರತೀಯ ಚಿರತೆ, ತೋಳ, ಪಟ್ಟೆ ಕತ್ತೆಕಿರುಬ, ಗೋಲ್ಡನ್ ನರಿ ಹೀಗೆ ವಿವಿಧ ಜಾತಿಯ ಪ್ರಾಣಿಗಳ ವಾಸನೆಲೆಯಾಗಿದೆ. ಇದೇ ಮೊದಲಿ ಬಾರಿಗೆ ಭಾರತದಲ್ಲಿ ಗುಲಾಬಿ ಚಿರತೆ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ 2012ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಗುಲಾಬಿ ಬಣ್ಣದ ಕೋಟ್​ನಲ್ಲಿ ಚುಕ್ಕೆಗಳಿರುವ ಚಿರತೆ ಕಾಣಿಸಿಕೊಂಡಿರುವುದು ವರದಿಯಾಗಿತ್ತು.

ಇದನ್ನೂ ಓದಿ:

Viral News: ಕಿಡ್ನಿ ಸ್ಟೋನ್ ಬದಲು ಕಿಡ್ನಿಯನ್ನೇ ತೆಗೆದ ವೈದ್ಯ; 11 ಲಕ್ಷ ರೂ. ಪರಿಹಾರ ನೀಡಲು ಆಸ್ಪತ್ರೆಗೆ ಆದೇಶ

Viral News: 47 ಲಕ್ಷ ರೂ. ಜೊತೆ ಆಟೋ ಚಾಲಕನೊಂದಿಗೆ ಕೋಟ್ಯಧಿಪತಿಯ ಹೆಂಡತಿ ಪರಾರಿ!

TV9 Kannada


Leave a Reply

Your email address will not be published. Required fields are marked *