Play: ಅಂಕಪರದೆ; ಎಂಎಸ್​ಕೆ ಪ್ರಭು ಅವರ ‘ಬೆತ್ತಲೆ ಅರಸನ ರಾಜರಹಸ್ಯ’ ತಿಳಿಯಲು ನಾಳೆ ಮೈಸೂರಿನ ‘ನಟನ’ಕ್ಕೆ ಬನ್ನಿ | Ankaparade Bettale Raajana Rahasya Play by Kusuma Ayarahalli Directed by Mandya Ramesh Natana


Play: ಅಂಕಪರದೆ; ಎಂಎಸ್​ಕೆ ಪ್ರಭು ಅವರ ‘ಬೆತ್ತಲೆ ಅರಸನ ರಾಜರಹಸ್ಯ’ ತಿಳಿಯಲು ನಾಳೆ ಮೈಸೂರಿನ ‘ನಟನ’ಕ್ಕೆ ಬನ್ನಿ

‘ಬೆತ್ತಲೆ ರಾಜನ ರಹಸ್ಯ’ ನಾಟಕದ ದೃಶ್ಯ

ಅಂಕಪರದೆ | Ankaparade: ನುಡಿ ಪುಸ್ತಕದವರು ಮಾಡಿರುವ “ಮರೆಯಲಾರದ ಕತೆಗಳು” ಸರಣಿಯನ್ನು ಕೊಂಡಿದ್ದೆ. ಅದರಲ್ಲಿ ಎಂಎಸ್ ಕೆ ಪ್ರಭು ಅವರ ಕತೆಗಳ ಒಂದು ಪುಸ್ತಕವೂ ಇತ್ತು. ಅದರೊಳಗೆ ಅನೇಕ ಸೊಗಸಾದ ಅಚ್ಚರಿ ಹುಟ್ಟಿಸುವ, ಹೊಸ ಶೈಲಿಯ ಕತೆಗಳಿದ್ದವು. ತೆಂಗಿನಮರದ ಉದ್ದದ ಮನುಷ್ಯ, ಮುಖಾಬಿಲೆಯಂತಾ ಯೋಚನೆಗೆ ಹಚ್ಚುವ ಕತೆಗಳು. ಅದರೊಂದಿಗೇ ಇದ್ದ ಕತೆ “ಬೆತ್ತಲೆ ಅರಸನ ರಾಜರಹಸ್ಯ” ಈ ಕತೆಗೇ ಒಂದು ನಾಟಕೀಯತೆ ಇತ್ತು. ಕತೆಯನ್ನು ಓದುವಾಗ ದೃಶ್ಯಗಳು ಕಣ್ಮುಂದೆ ಹಾಯುತ್ತಿದ್ದವು. ರಂಗ ನನ್ನ ಕಣ್ಣೆದುರಿದ್ದ ಹಾಗೆ.  ಎಂಎಸ್‍ಕೆ ಪ್ರಭು ಸ್ವತಃ ನಾಟಕಕಾರರೂ ಆಗಿದ್ದರಿಂದ ಕತೆಯಲ್ಲಿ ನಾಟಕದ ಅಂಶಗಳು ಇಣುಕಿರಬಹುದು. ಆಮೇಲೆ ಅವರ ಸಮಗ್ರ ಕತೆಗಳನ್ನು ಓದಿದೆ. ಜೊತೆಗೆ ಕತೆಯನ್ನೊಮ್ಮೆ ಓದಿ, ಇದನ್ನು ನಾಟಕ ಮಾಡಬಹುದೆನಿಸುತ್ತದೆ ಅಂತ ಮಂಡ್ಯ ರಮೇಶ್ ಅವರಿಗೆ ಕೊಟ್ಟೆ. ಅವರು ಬಹಳ ಹಿಂದೆ ಆ ಕತೆಯನ್ನು ಓದಿದ್ದವರೇ. ಮರುಓದಿದಾಗ ಥಟ್ಟನೇ ನಾಟಕ ಮಾಡಬಹುದು. ನೀವೇ ಬರೆದುಕೊಡಿ ಅಂದುಬಿಟ್ಟರು.

ಕುಸುಮಾ ಆಯರಹಳ್ಳಿ, ಲೇಖಕಿ

*

ನಾಟಕ ಬರೆಯೋದೇನು ಸುಮ್ಮನೆ ಮಾತಾ? ಕತೆಯಾದರೆ ಬೇಕಾದ್ದು ಬರೀಬಹುದು. ಆದರೆ ನಾಟಕ ನಮ್ಮ ಕಲ್ಪನೆಯನ್ನು ರಂಗದ ಪಾತ್ರಧಾರಿಗಳಿಗೆ, ಸರಕಿಗೆ, ಹೊಂದಿಸುತ್ತಾ ನಿರೂಪಿಸಬೇಕಾದ ಬೇರೆಯದೇ ರೀತಿಯ ಬರವಣಿಗೆ. ಎಷ್ಟು ಹೆದರಿ ಕೂತೆ ಅಂದರೆ ಒಂದು ವರ್ಷ ಮತ್ತೆ ಆ ಸುದ್ದಿಯೇ ಎತ್ತಲಿಲ್ಲ. ರಮೇಶ್ ಸರ್ ಯಾವಾಗ ಸಿಕ್ಕರೂ ಯಾರಿಗಾದ್ರೂ ಪರಿಚಯಿಸೋವಾಗ “ನಮಗೊಂದು ನಾಟಕ ಬರ್ಕೊಡ್ತಾ ಇದಾರೆ” ಅಂತ ಹೇಳಿ ಅರೆಜೀವ ಮಾಡಿಬಿಡೋರು. ನನಗೂ ನಾಚಿಕೆಯಾಗೋದು. ಅಷ್ಟರಲ್ಲಿ ಲಾಕ್‍ಡೌನ್​, ಕೊರೊನಾ ಆಗಿ ರಂಗವೂ ಸ್ವಲ್ಪ ಹೊತ್ತು ವಿರಮಿಸಿತ್ತು.

ಇದ್ದಕ್ಕಿದ್ದಂತೆ ನಾನೇ ಒಂದು ದಿನ ಫೋನಿಸಿ ಇನ್ನೊಂದು ವಾರದಲ್ಲಿ ಬರೀತೀನಿ ಅಂದೆ. ಸೀರಿಯಲ್‍ಗೆ ಬರೆಯೋ ನಮ್ ಹಣೇಬರವೇ ಇಷ್ಟು. ಒದ್ಕೊಂಡು ಬರೋ ಒತ್ತಡದ ಹೊರತು ನಮ್ ಕೈ ಓಡಲ್ಲ, ಕತೆಯೊಂದು ನಾಟಕವಾಗುವಾಗ ದೃಶ್ಯಗಳನ್ನು ಕಟ್ಟುವಾಗ ಅಲ್ಲಿಲ್ಲದ ಕೆಲವನ್ನು ಸೇರಿಸಬೇಕಾಗುತ್ತದೆ. ಇರುವ ಕೆಲವನ್ನು ಬಿಡಬೇಕಾಗುತ್ತದೆ. ಕತೆಯಲ್ಲಿ ರಾಜನೊಂದಿಗೆ ಕಾರುಬಾರಿ ಮಾತ್ರವೇ ಇರುತ್ತಾನೆ. ಆದರೆ ಇಡೀ ನಾಟಕ ಕತೆಯ ಹಾಗೆ ಅವನ ಸ್ವಗತದಲ್ಲಿ ಮಾತಾಡಿದರೆ ಚೆನ್ನಾಗಿರುವುದಿಲ್ಲ. ಹಾಗಾಗಿ ಕತೆಯ ಅವನ ಸ್ವಗತದ ಮಾತುಗಳಿಗೆ ಇನ್ನೊಂದು ಮಂತ್ರಿಯ ಪಾತ್ರವನ್ನು ಸೃಷ್ಟಿಸಲಾಯ್ತು. ಬರೆದಾಗಿ ರಮೇಶ್ ಅವರಿಗೆ ಕೊಟ್ಟು, ಎಕ್ಸಾಂ ಬರೆದು ರಿಸಲ್ಟಿಗೆ ಕಾಯುವವಳ ಹಾಗಿದ್ದೆ. ಅವರು ಒಪ್ಪಿದ ಮೇಲೆ ಸಮಾಧಾನವೂ… ನಂಬಿಕೆಯೂ.

TV9 Kannada


Leave a Reply

Your email address will not be published.