ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬೆಡ್​ ಹಾಗೂ ಆಕ್ಸಿಜನ್​ ಸಮಸ್ಯೆ ಉದ್ಭವಿಸಿದೆ. ಈ ನಡುವೆ ಹಲವು ಉದ್ಯಮಿಗಳು ಸೋಂಕಿತರ ನೆರವಿಗೆ ಆಗಮಿಸುತ್ತಿದ್ದು, ಮೈಕ್ರೊಸಾಫ್ಟ್​ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯ ನಡೆಲ್ಲಾ ಪಿಎಂ ಕೇರ್​ ಫಂಡ್​ಗೆ 2 ಕೋಟಿ ನೆರವು ನೀಡಿದ್ದಾರೆ.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ದು ಅವರು ಈ ಕುರಿತ ಮಾಹಿತಿ ಹಂಚಿಕೊಂಡಿದ್ದು. ಮೈಕ್ರೋಸಾಫ್ಟ್​​ ಸಿಇಒ ಸತ್ಯ ನಡೆಲ್ಲಾ ದಂಪತಿ ಪಿಎಂ ಕೇರ್​​ ಫಂಡ್​ಗೆ 2 ಕೋಟಿ ನೆರವು ನೀಡಿದ್ದಾರೆ. ಆ ಮೂಲಕ ಕೊರೊನಾ ಸಂಕಷ್ಟದಲ್ಲಿ ನೆರವಾಗಿದ್ದಾರೆ. ಇದು ನಿಜಕ್ಕೂ ತಾಯಿ ನಾಡಿನ ಬಗ್ಗೆ ಅವರಿಗೆ ಇರುವ ಉದಾತ್ತ ಗೌರವವನ್ನು ಸೂಚಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗಷ್ಟೇ ಭಾರತದಲ್ಲಿ ಕೊರೊನಾ ಎರಡನೇ ಅಲೆಯ ತೀವ್ರತೆ ಕುರಿತು ಟ್ವೀಟ್​ ಮಾಡಿದ್ದ ಸತ್ಯ ನಡೆಲ್ಲಾ, ಸದ್ಯದ ಭಾರತ ಪರಿಸ್ಥಿತಿ ನೋಡಿ ನಾನು ಎದೆಗುಂದಿದ್ದೇನೆ. ಅಮೆರಿಕಾ ಸರ್ಕಾರ ಸಹಾಯ ಮಾಡುವುದಕ್ಕೆ ಮುಂದಾಗಿದೆ ಅವರಿಗೆ ಕೃತಜ್ಞತೆ. ಕೋವಿಡ್​ ಪರಿಹಾರ ಕಾರ್ಯಗಳಿಗೆ ನೆರವಾಗಲು ಮೈಕ್ರೋಸಾಫ್ಟ್​ ತಂತ್ರಜ್ಞಾನ ಹಾಗೂ ಸಂಪನ್ಮೂಲವನ್ನು ಬಳಸಿಕೊಳ್ಳಲು ಬೆಂಬಲಿಸುತ್ತೇನೆ ಎಂದು ಹೇಳಿದ್ದರು.

The post PM CARES​​ ನಿಧಿಗೆ ₹2 ಕೋಟಿ ದೇಣಿಗೆ ಕೊಟ್ಟ ಮೈಕ್ರೊಸಾಫ್ಟ್​​ ಸಿಇಓ ದಂಪತಿ appeared first on News First Kannada.

Source: newsfirstlive.com

Source link