ನವದೆಹಲಿ: ಆಸ್ಟ್ರೇಲಿಯಾ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್ PM-CARES ಗೆ 50,000 ಡಾಲರ್(37,36,040) ಹಣ ನೀಡುವ ಮೂಲಕ ಭಾರತದ ಕೊರೊನಾ ಹೋರಾಟಕ್ಕೆ ತಮ್ಮ ಸಹಾಯಹಸ್ತ ನೀಡಿದ್ದಾರೆ. ಪ್ಯಾಟ್ ಕಮ್ಮಿನ್ಸ್ ಸದ್ಯ ಕೆಕೆಆರ್ ಪರ ಆಡುತ್ತಿದ್ದಾರೆ.

ಈ ಕುರಿತು ಟ್ವಿಟರ್​ನಲ್ಲಿ ಬರೆದುಕೊಂಡಿರುವ ಪ್ಯಾಟ್ ಕಮ್ಮಿನ್ಸ್..

ಭಾರತದಲ್ಲಿ ನನ್ನನ್ನು ಜನರು ಹಲವು ವರ್ಷಗಳಿಂದ ಬಹಳ ಪ್ರೀತಿಯಿಂದ ಕಾಣುತ್ತಿದ್ದಾರೆ. ಇಲ್ಲಿನ ಜನರು ಬೇರೆಲ್ಲೂ ಕಾಣದಷ್ಟು ಉತ್ತಮ ಗುಣ ಸ್ವಭಾವ ಹೊಂದಿದವರು.

ಕೊರೊನಾ ನಡುವೆ ಇಲ್ಲಿ ಐಪಿಎಲ್​ ನಡೆಸುವುದೋ ಬೇಡವೋ ಎಂಬ ಚರ್ಚೆ ನಡೆಯುತ್ತಿತ್ತು. ಭಾರತೀಯ ಸರ್ಕಾರ ಜನರು ಲಾಕ್​ಡೌನ್​ನಲ್ಲಿ ಇರುವಾಗ ಸ್ವಲ್ಪವಾದರೂ ಮನರಂಜನೆ ಸಿಗಲೆಂದು ಐಪಿಎಲ್​ ನಡೆಸಲು ನಿರ್ಧರಿಸಿದ್ದಾಗಿ ನನಗೆ ಸಲಹೆ ಸಿಕ್ಕಿತ್ತು.

ಆಟಗಾರನಾಗಿ ನಾವು ಲಕ್ಷಾಂತರ ಜನರನ್ನು ಉತ್ತಮವಾದುದಕ್ಕೆ ತಲುಪಲು ವೇದಿಕೆ ಅವಕಾಶ ಮಾಡಿಕೊಡುತ್ತದೆ. ನಾನು ಪಿಎಂ ಕೇರ್ಸ್​ಗೆ ಅದ್ರಲ್ಲೂ ಆಕ್ಸಿಜನ್ ಖರೀದಿಗಾಗಿ ನೆರವು ನೀಡಿದ್ದೇನೆ. ಈ ಮೂಲಕ ನಾನು ಇತರೆ ಐಪಿಎಲ್​ ಆಟಗಾರರು ಹಾಗೂ ಜಗತ್ತಿನ ಬೇರೆ ಯಾವುದೇ ವ್ಯಕ್ತಿ ಭಾರತದ ಉತ್ತಮ ಗುಣವನ್ನು ಅನುಭವಿಸಿದವರು ನೆರವು ನೀಡಲೆಂದು ಉತ್ತೇಜಿಸುತ್ತೇನೆ.

ಈ ಸಮಯದಲ್ಲಿ ಅಸಹಾಯಕ ಎಂದುಕೊಳ್ಳುವುದು ಸುಲಭ.. ಈ ಹಿಂದೆ ನನಗೂ ಹಾಗೆ ಅನ್ನಿಸಿದೆ. ಆದರೆ ನಾನು ಸಾರ್ವಜನಿಕ ಮನವಿ ಮಾಡಿಕೊಳ್ಳುವ ಮೂಲಕ ನಮ್ಮ ಭಾವನೆಯನ್ನು ಕ್ರಿಯೆಯಾಗಿ ಬದಲಿಸುವ ಮೂಲಕ ಜನರ ಬದುಕಿನಲ್ಲಿ ಬೆಳಕು ತರಬಹುದೆಂದು ಭಾವಿಸುತ್ತೇನೆ.

ನನ್ನ ನೆರವು ತುಂಬಾ ದೊಡ್ಡದೇನಲ್ಲ ಎಂಬುದು ನನಗೆ ತಿಳಿದಿದೆ. ಆದರೆ ಇದು ಯಾರಿಗಾದರೂ ಸಹಾಯಕಾರಿಯಾಗುತ್ತದೆಂದು ನಂಬಿದ್ದೇನೆ ಎಂದು ಬರೆದುಕೊಂಡಿದ್ದಾರೆ.

The post PM-CARES ಗೆ ₹37 ಲಕ್ಷ ನೆರವು ನೀಡಿದ ಆಸ್ಟ್ರೇಲಿಯಾ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್ appeared first on News First Kannada.

Source: News First Kannada
Read More