PM Kisan: ಪಿಎಂ ಕಿಸಾನ್ ಕಂತು ಖಾತೆಗೆ ಜಮೆ ಆಗಿಲ್ಲವೆ? ಹಾಗಿದ್ದಲ್ಲಿ ಹೀಗೆ ಮಾಡಿ | If You Have Not Received PM Kisan Scheme 11th Installment Know How To Raise Complaint


PM Kisan: ಪಿಎಂ ಕಿಸಾನ್ ಕಂತು ಖಾತೆಗೆ ಜಮೆ ಆಗಿಲ್ಲವೆ? ಹಾಗಿದ್ದಲ್ಲಿ ಹೀಗೆ ಮಾಡಿ

ಸಾಂದರ್ಭಿಕ ಚಿತ್ರ

ಒಂದು ವೇಳೆ ನೀವು ಪಿಎಂ ಕಿಸಾನ್ ಯೋಜನೆಯ 11ನೇ ಕಂತನ್ನು ಪಡೆಯದಿದ್ದಲ್ಲಿ ದೂರು ನೀಡಬೇಕಿದ್ದರೆ ಈ ರೀತಿಯ ಕ್ರಮಗಳನ್ನು ಅನುಸರಿಸಿ.

ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಡಿ 10 ಕೋಟಿ ರೈತರಿಗೆ ಸುಮಾರು 21,000 ಕೋಟಿ ರೂಪಾಯಿಗಳನ್ನು ವರ್ಗಾಯಿಸುವ ಮೂಲಕ 11ನೇ ಕಂತು ಆರ್ಥಿಕ ಪ್ರಯೋಜನವನ್ನು ಬಿಡುಗಡೆ ಮಾಡಿದೆ. ಈ ಪ್ರಮುಖ ಯೋಜನೆಯಡಿ ಪ್ರತಿ ವರ್ಷಕ್ಕೆ ರೂ. 6000 ಮೊತ್ತವನ್ನು ತಲಾ ರೂ. 2,000 ರಂತೆ ಮೂರು ಕಂತುಗಳಲ್ಲಿ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಜನರು ಕಂತುಗಳನ್ನು ಸ್ವೀಕರಿಸದಿರಬಹುದು. ಆದ್ದರಿಂದ ನೀವು ಯೋಜನೆಗೆ ಅರ್ಹರಾಗಿದ್ದರೆ ಮತ್ತು 11ನೇ ಕಂತಿನಲ್ಲಿ 2,000 ರೂಪಾಯಿಗಳನ್ನು ಸ್ವೀಕರಿಸದಿದ್ದರೆ ಸರ್ಕಾರದ ಸಹಾಯವಾಣಿ ಸಂಖ್ಯೆಗಳಲ್ಲಿ ದೂರು ಸಲ್ಲಿಸಬಹುದು.

ನೀವು ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ – 011-24300606ಗೆ ಕರೆ ಮಾಡಬಹುದು. ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಬಹುದು – 18001155266. ಅಲ್ಲದೇ ಇಮೇಲ್ ಆಯ್ಕೆಯೂ ಇದೆ. [email protected]ಗೆ ಮೇಲ್ ಮಾಡುವ ಮೂಲಕ ಪಿಎಂ ಕಿಸಾನ್ ಯೋಜನೆಯ 11ನೇ ಕಂತಿಗೆ ಹಣವನ್ನು ಸ್ವೀಕರಿಸದ ಕಾರಣವನ್ನು ನೀವು ಕೇಳಬಹುದು.

ಇಮೇಲ್ ಐಡಿ: [email protected] ಮತ್ತು [email protected]

ಸಹಾಯವಾಣಿ ಸಂಖ್ಯೆ: 011-24300606,155261

ಟೋಲ್-ಫ್ರೀ ಸಂಖ್ಯೆ: 1800-115-526

ಅಲ್ಲದೆ, ಮೊತ್ತವನ್ನು ಸ್ವೀಕರಿಸದಿರಲು ಪ್ರಮುಖ ಕಾರಣಗಳಲ್ಲಿ ಇ-ಕೆವೈಸಿ ಆಗಿರಬಹುದು. ಮೇ 31, 2022ರ ಮೊದಲು ಎಲ್ಲ ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳು ಇ-ಕೆವೈಸಿ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.

PM Kisan FAQಗಳ ಪ್ರಕಾರ, “ಯೋಜನೆಯಡಿ ನೋಂದಾಯಿಸಲಾದ ರೈತರು ಯಾವುದೇ ಕಾರಣಕ್ಕಾಗಿ 4- ತಿಂಗಳಿಗೆ ಒಮ್ಮೆ ಯಾವುದೇ ಕಂತುಗಳನ್ನು ಸ್ವೀಕರಿಸದಿದ್ದರೆ ನಂತರ ಅದನ್ನು ಸ್ವೀಕರಿಸಲು ಸಾಧ್ಯವಾಗುತ್ತದೆಯೇ? ಹೌದು, ನಿರ್ದಿಷ್ಟವಾಗಿ 4-ತಿಂಗಳ ಅವಧಿಯಲ್ಲಿ ಸಂಬಂಧಪಟ್ಟ ರಾಜ್ಯ/ ಕೇಂದ್ರಾಡಳಿತ ಸರ್ಕಾರಗಳಿಂದ ಪಿಎಂ-ಕಿಸಾನ್ ಪೋರ್ಟಲ್‌ನಲ್ಲಿ ಹೆಸರುಗಳನ್ನು ಅಪ್‌ಲೋಡ್ ಮಾಡಿದ ಫಲಾನುಭವಿಗಳು, ಆ ಅವಧಿಯ ಪ್ರಯೋಜನವನ್ನು ಆ 4-ತಿಂಗಳ ಅವಧಿಯಿಂದಲೇ ಜಾರಿಗೆ ತರಲು ಅರ್ಹರಾಗಿರುತ್ತಾರೆ.

ಯಾವುದೇ ಕಾರಣಕ್ಕಾಗಿ ಆ 4-ತಿಂಗಳ ಅವಧಿಗೆ ಸಂಬಂಧಿಸಿದ ಕಂತುಗಳ ಪಾವತಿಯನ್ನು ಮತ್ತು ನಂತರದ ಕಂತುಗಳನ್ನು ಸ್ವೀಕರಿಸದಿದ್ದರೆ, ಅದು ಕೂಡ ಹೊರಗಿಡುವ ಮಾನದಂಡದೊಳಗೆ ಬೀಳುವ ನಿರಾಕರಣೆ ಕಾರಣದಿಂದಾಗಿ ಮಾತ್ರ. ಆದರೆ ಯಾವಾಗ ವಿಳಂಬದ ಕಾರಣವನ್ನು ತೆಗೆದುಹಾಕಲಾಗುತ್ತದೋ/ಪರಿಹರಿಸಲಾಗುತ್ತದೋ ಆಗ ಎಲ್ಲ ಬಾಕಿ ಕಂತುಗಳ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *