ಭಾರತವು ಒಂದು ದೊಡ್ಡ ಸಂಪ್ರದಾಯ, ಸೈದ್ಧಾಂತಿಕ ಸ್ಥಾಪನೆ, ಸಂಸ್ಕೃತಿಯ ಗುಚ್ಛ ಮತ್ತು ದೇಶವಾಗಿರುವುದರಿಂದ ಇದು ಸಂಭವಿಸುತ್ತದೆ. ಇದು ವಸುಧೈವ ಕುಟುಂಬಕಂ ಕುರಿತು ಹೇಳುವ ಪರಮೋಚ್ಚ ಚಿಂತನೆಯಾಗಿದೆ. ಅದು ಇತರಿಗೆ ಕೆಡುಕನ್ನುಂಟು ಮಾಡಿ ಉನ್ನತಿಯ ಕನಸು ಕಾಣುವುದಿಲ್ಲ. ಭಾರತ ಇಡೀ ಪ್ರಪಂಚದ ಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕೆನಡಾದ ಮಾರ್ಕಾಮ್ ನ ಸನಾತನ ಮಂದಿರ ಸಾಂಸ್ಕೃತಿಕ ಕೇಂದ್ರದಲ್ಲಿ ಸರ್ದಾರ್ ಪಟೇಲ್ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನುದ್ದೇಶಿಸಿ ಮೋದಿ ಮಾತನಾಡಿದ್ದಾರೆ. ಒಬ್ಬ ಭಾರತೀಯನು ಪ್ರಪಂಚದ ಯಾವುದೇ ಭಾಗದಲ್ಲಿ ಹಲವು ತಲೆಮಾರುಗಳವರೆಗೆ ವಾಸಿಸಬಹುದು. ಆದರೆ ಅವನ ಭಾರತೀಯತೆ ಮತ್ತು ಭಾರತದ ಮೇಲಿನ ಭಕ್ತಿ ಸ್ವಲ್ಪವೂ ಕಡಿಮೆಯಾಗುವುದಿಲ್ಲ. ಅವರು ಯಾವುದೇ ರಾಷ್ಟ್ರದಲ್ಲಿ ನೆಲೆಸಿದ್ದರೂ, ಅವರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾರೆ. ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಭಾರತದಿಂದ ಅವರ ಪೂರ್ವಜರು ನಡೆಸಿದ ಕರ್ತವ್ಯ ಪ್ರಜ್ಞೆಯು ಅವರ ಹೃದಯದ ಮೂಲೆಯಲ್ಲಿ ಇದ್ದೇ ಇರುತ್ತದೆ. ಸನಾತನ ಮಂದಿರದಲ್ಲಿರುವ ಸರ್ದಾರ್ ವಲ್ಲಭಭಾಯಿ ಅವರ ಪ್ರತಿಮೆಯು ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಬಲಪಡಿಸುವುದಲ್ಲದೆ ಎರಡು ದೇಶಗಳ ನಡುವಿನ ಬಾಂಧವ್ಯದ ಸಂಕೇತವೂ ಆಗಲಿದೆ ಎಂದಿದ್ದಾರೆ ಮೋದಿ
My remarks at a programme being organised by Sanatan Mandir Cultural Centre in Canada. https://t.co/KcJiIfgW46
— Narendra Modi (@narendramodi) May 1, 2022
(ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)