ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ
ದೆಹಲಿ: ಇತ್ತೀಚೆಗೆ ಭಾರೀ ಚರ್ಚೆ, ವಿವಾದಕ್ಕೆ ತುತ್ತಾಗಿದ್ದ ಕೃಷಿ ಸಂಬಂಧಿತ (farm laws) ಮೂರೂ ಮಸೂದೆಗಳನ್ನು ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ. ನಮ್ಮ ನಿರ್ಣಯದಲ್ಲಿಯೇ ಎಲ್ಲೋ ತಪ್ಪು ಆಗಿರಬಹುದು. ಹಾಗಾಗಿ ನಾನು ದೇಶವಾಸಿಗಳಲ್ಲಿ ಕ್ಷಮೆ ಕೋರುವೆ. ತನ್ಮೂಲಕ ಮೂರೂ ಕೃಷಿ ಮಸೂದೆಗಳನ್ನು ಇದೇ ತಿಂಗಳು ಸಂಸತ್ತಿನಲ್ಲಿ ವಾಪಸ್ ತೆಗೆದುಕೊಳ್ಳುವೆ. ರೈತ ಬಂಧುಗಳು ತಮ್ಮ ತಮ್ಮ ಹೊಲ, ತೋಟಗಳಿಗೆ ವಾಪಸ್ ಹೋಗಿ, ಕೃಷಿಯಲ್ಲಿ ತೊಡಗಿರಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಲು ರೈತರ ನಿರಂತರ ಹೋರಾಟ ಹಿನ್ನೆಲೆ ಕಾಯ್ದೆಗಳು ವಾಪಸ್ ತೆಗೆದುಕೊಳ್ಳಲಾಗುವುದು. 3 ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯುತ್ತಿದ್ದೇವೆ. ಅದಕ್ಕಾಗಿ ಸಮಿತಿ ರಚಿಸುತ್ತೇವೆ. ಇದರಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ರೈತರು ಮತ್ತು ಕೃಷಿ ತಜ್ಞರು ಇರಲಿದ್ದಾರೆ ಎಂದು ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ 9 ಗಂಟೆಗೆ (ನವೆಂಬರ್ 19) ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಹಲವು ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ಮೋದಿ, ನಂತರ ಝಾನ್ಸಿಯಲ್ಲಿ ‘ರಾಷ್ಟ್ರ ರಕ್ಷಾ ಸಮರ್ಪಣ್ ಪರ್ವ’ನಲ್ಲಿ ಭಾಗವಹಿಸಿದ್ದಾರೆ (PM Modi Announcement). ಈ ವೇಳೆ ಅವರು ಭಾರತದಲ್ಲೇ ತಯಾರಿಸಲಾದ ರಕ್ಷಣಾ ಸಾಮಗ್ರಿಗಳನ್ನು ಸೇನೆಗೆ ಹಸ್ತಾಂತರಿಸಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮುನ್ನ ಪ್ರಧಾನಿ ಇಂದು ಬೆಳಗ್ಗೆ 9ಕ್ಕೆ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಇದೇ ವೇಳೆ ಗುರು ನಾನಕ್ ಅವರ ಜಯಂತಿ ಆಚರಣೆಯೂ ನಡೆದಿದೆ.