PM Modi Birthday: ಇಂದು ಪ್ರಧಾನಿ ನರೇಂದ್ರ ಮೋದಿ 72ನೇ ಜನ್ಮದಿನ; ದೇಶಾದ್ಯಂತ ಬಿಜೆಪಿಯಿಂದ ವಿವಿಧತೆಯಲ್ಲಿ ಏಕತೆ, ರಕ್ತದಾನ, ಸ್ವಚ್ಛತಾ ಅಭಿಯಾನ ಆಯೋಜನೆ | PM Narendra Modi Birthday: BJP makes plans to celebrate Unity in Diversity Blood Donation Swachata Abhiyan Today


PM Narendra Modi 72nd Birthday: ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಹುಟ್ಟುಹಬ್ಬವನ್ನು ಆಚರಿಸಲು ಬಿಜೆಪಿ ದೇಶಾದ್ಯಂತ ‘ವೈವಿಧ್ಯತೆಯಲ್ಲಿ ಏಕತೆ’, ರಕ್ತದಾನ ಅಭಿಯಾನ, ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಿದೆ.

PM Modi Birthday: ಇಂದು ಪ್ರಧಾನಿ ನರೇಂದ್ರ ಮೋದಿ 72ನೇ ಜನ್ಮದಿನ; ದೇಶಾದ್ಯಂತ ಬಿಜೆಪಿಯಿಂದ ವಿವಿಧತೆಯಲ್ಲಿ ಏಕತೆ, ರಕ್ತದಾನ, ಸ್ವಚ್ಛತಾ ಅಭಿಯಾನ ಆಯೋಜನೆ

ಪ್ರಧಾನಿ ನರೇಂದ್ರ ಮೋದಿ

Image Credit source: Zee News

ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಜನ್ಮದಿನ. ಈ ದಿನದಂದು ದೇಶಾದ್ಯಂತ ಬಿಜೆಪಿಯಿಂದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಭಾರತದ ಎಲ್ಲ ರಾಜ್ಯಗಳಲ್ಲೂ ಇಂದು ‘ರಕ್ತದಾನ ಅಮೃತ ಮಹೋತ್ಸವ’ ಆರಂಭವಾಗಲಿದೆ. ಹಾಗೇ, ಪ್ರಧಾನಿ ಮೋದಿಯವರ ಉಡುಗೊರೆಗಳ ಇ-ಹರಾಜು ಇಂದಿನಿಂದ ಆರಂಭವಾಗಲಿದೆ. ಪಿಎಂ ಮೋದಿ ಅವರಿಗೆ ನೀಡಿದ ಉಡುಗೊರೆಗಳು ಮತ್ತು ಸ್ಮರಣಿಕೆಗಳ ಇ-ಹರಾಜು ಇಂದು (ಸೆಪ್ಟೆಂಬರ್ 17) ನರೇಂದ್ರ ಮೋದಿ ಅವರ 72ನೇ ಹುಟ್ಟುಹಬ್ಬದಂದು ಪ್ರಾರಂಭವಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಹುಟ್ಟುಹಬ್ಬವನ್ನು ಆಚರಿಸಲು ಬಿಜೆಪಿ ದೇಶಾದ್ಯಂತ ‘ವೈವಿಧ್ಯತೆಯಲ್ಲಿ ಏಕತೆ’, ರಕ್ತದಾನ ಅಭಿಯಾನ, ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಿದೆ. ಬಿಜೆಪಿಯಿಂದ ‘ಸೇವಾ ಅಭಿಯಾನ’ ಇಂದು ಪ್ರಾರಂಭವಾಗಲಿದ್ದು, ಅಕ್ಟೋಬರ್ 2ರಂದು ಮುಕ್ತಾಯಗೊಳ್ಳಲಿದೆ.

TV9 Kannada


Leave a Reply

Your email address will not be published.