PM Modi Rally: ಗುಜರಾತ್​ನ ಸೌರಾಷ್ಟ್ರದಲ್ಲಿ ಮೂರು ದಿನಗಳ ಕಾಲ ರ‍್ಯಾಲಿ ನಡೆಸಲಿರುವ ಪ್ರಧಾನಿ ಮೋದಿ – PM Narendra Modi will address the rallies in South Gujarat on Nov 20 ahead of Assembly Elections Check Details in kannada


Gujarat polls: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಸೌರಾಷ್ಟ್ರದಲ್ಲಿ ನವೆಂಬರ್ 20-22ರ ವರೆಗೆ ಸತತ ಮೂರು ದಿನಗಳ ಕಾಲ ರ‍್ಯಾಲಿಗಳನ್ನು ನಡೆಸಲಿದ್ದಾರೆ

PM Modi Rally: ಗುಜರಾತ್​ನ ಸೌರಾಷ್ಟ್ರದಲ್ಲಿ ಮೂರು ದಿನಗಳ ಕಾಲ ರ‍್ಯಾಲಿ ನಡೆಸಲಿರುವ ಪ್ರಧಾನಿ ಮೋದಿ

ಗುಜರಾತ್​ನ ಸೌರಾಷ್ಟ್ರದಲ್ಲಿ ಮೂರು ದಿನಗಳ ಕಾಲ ರ‍್ಯಾಲಿ ನಡೆಸಲಿರುವ ಪ್ರಧಾನಿ ಮೋದಿ

ಗುಜರಾತ್ ವಿಧಾನಸಭಾ ಚುನಾವಣೆ: ಆಡಳಿತಾರೂಢ ಭಾರತೀಯ ಜನತಾ ಪಕ್ಷ (BJP) ರಾಜ್ಯದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದು, ಯಾವುದೇ ಆಡಳಿತ ವಿರೋಧಿ ಅಲೆ ಇಲ್ಲ ಎಂಬುದನ್ನು ತೋರಿಸಲು ಹಾಗೂ ಮತ್ತೊಮ್ಮೆ ರಾಜ್ಯದಲ್ಲಿ ಗದ್ದುಗೆ ಏರಲು ಎಲ್ಲಿಲ್ಲದ ಕಸರತ್ತು ನಡೆಸುತ್ತಿದೆ. ಅದರಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮುಂದಿನ ಹದಿನೈದು ದಿನಗಳಲ್ಲಿ ರಾಜ್ಯಾದ್ಯಂತ ಸುಮಾರು 25 ರ‍್ಯಾಲಿಗಳನ್ನು ನಡೆಸಲಿದ್ದಾರೆ. ಪಕ್ಷದ ಚಾಣಕ್ಯ ಎಂದೆನಿಸಿಕೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕೂಡ ರ‍್ಯಾಲಿಗಳಲ್ಲಿ ಭಾಗಿಯಾಗಲಿದ್ದಾರೆ. ಗುಜರಾತ್‌ನ ಸೌರಾಷ್ಟ್ರದಲ್ಲಿ ನವೆಂಬರ್ 20-22ರ ವರೆಗೆ ಸತತ ಮೂರು ದಿನಗಳ ಕಾಲ ಮೋದಿ ಅವರು ರ‍್ಯಾಲಿಗಳನ್ನು ನಡೆಸಲಿದ್ದಾರೆ.

ಈ ರ‍್ಯಾಲಿಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನವೆಂಬರ್ 20 ರಂದು ಸೌರಾಷ್ಟ್ರದಲ್ಲಿ ಮೂರು, ನವೆಂಬರ್ 21 ರಂದು ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರದಲ್ಲಿ ಎರಡು ಮತ್ತು ನವೆಂಬರ್ 22 ರಂದು ಸೌರಾಷ್ಟ್ರದಲ್ಲಿ ಎರಡು ರ‍್ಯಾಲಿಗಳನ್ನು ಪ್ರಧಾನಿ ನಡೆಸಲಿದ್ದಾರೆ.

ರಾಜ್ಯದ 182 ವಿಧಾನಸಭಾ ಸ್ಥಾನಗಳ ಪೈಕಿ 48 ಕ್ಷೇತ್ರಗಳು ಈ ಪ್ರದೇಶದಲ್ಲಿದ್ದು, ಡಿಸೆಂಬರ್ 1 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಪಾಟಿದಾರ್ ಚಳವಳಿಯಿಂದ ಸಿಕ್ಕ ಬೆಂಬಲದ ಆಧಾರದ ಮೇಲೆ ಕಾಂಗ್ರೆಸ್ ಇಲ್ಲಿ 28 ಸ್ಥಾನಗಳನ್ನು ಗೆದ್ದಿತ್ತು. ಆದರೆ ಬಿಜೆಪಿ ಶಾಸಕರ ಸಂಖ್ಯೆ 30 ರಿಂದ 19ಕ್ಕೆ ಇಳಿದಿದೆ. ಪಕ್ಷವು ರಾಜ್ಯ ಚುನಾವಣೆಯಲ್ಲಿ ಗೆದ್ದಿದ್ದರೂ ಕಾಂಗ್ರೆಸ್ ಭದ್ರಕೋಟೆಯನ್ನು ಮುರಿಯಲು ಸಾಧ್ಯವಾಗಿರಲಿಲ್ಲ.

TV9 Kannada


Leave a Reply

Your email address will not be published.