PM SHRI Scheme: ಏನಿದು ಪಿಎಂ ಶ್ರೀ ಯೋಜನೆ?; ಮೇಲ್ದರ್ಜೆಗೇರಲಿರುವ 14,500 ಶಾಲೆಗಳು ಯಾವುವು? | PM SHRI Scheme: PM Narendra Modi says 14500 schools will be upgraded under new PM SHRI Yojana


ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನ್ವಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 14,500 ಶಾಲೆಗಳನ್ನು ಮರುಅಭಿವೃದ್ಧಿಗೊಳಿಸಲಾಗುವುದು.

PM SHRI Scheme: ಏನಿದು ಪಿಎಂ ಶ್ರೀ ಯೋಜನೆ?; ಮೇಲ್ದರ್ಜೆಗೇರಲಿರುವ 14,500 ಶಾಲೆಗಳು ಯಾವುವು?

ಸಾಂದರ್ಭಿಕ ಚಿತ್ರ

ನವದೆಹಲಿ: ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಪಿಎಂ ಶ್ರೀ (PM SHRI Scheme) ಎಂಬ ಹೊಸ ಯೋಜನೆಯನ್ನು ಘೋಷಿಸಿದ್ದಾರೆ. ಹೊಸದಾಗಿ ಪ್ರಾರಂಭಿಸಲಾದ PM SHRI ಯೋಜನೆ ಅಡಿಯಲ್ಲಿ 14,500 ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಹಾಗೇ, ಅವುಗಳನ್ನು ಪಿಎಂ ಶ್ರೀ ಶಾಲೆಗಳಾಗಿ ಮೇಲ್ದರ್ಜೆಗೇರಿಸಲಾಗುವುದು. ಈ ಪಿಎಂ ಶ್ರೀ ಶಾಲೆಗಳು ಶಿಕ್ಷಣವನ್ನು ನೀಡುವ ಆಧುನಿಕ ಮತ್ತು ಸಮಗ್ರ ವಿಧಾನವನ್ನು ಹೊಂದಿರುತ್ತದೆ. “ಆವಿಷ್ಕಾರ ಆಧಾರಿತ, ಕಲಿಕಾ ಕೇಂದ್ರಿತ ಬೋಧನೆಯ ವಿಧಾನಕ್ಕೆ ಒತ್ತು ನೀಡಲಾಗುವುದು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪಿಎಂ-ಶ್ರೀ ಯೋಜನೆ ಎಂದರೇನು?:
ಕೇಂದ್ರ ಶಿಕ್ಷಣ ಸಚಿವಾಲಯದ ಪ್ರಕಾರ, ಈ ಯೋಜನೆಯನ್ನು PM SHRI ಶಾಲೆಗಳು (PM ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ) ಎಂದು ಕರೆಯಲಾಗುತ್ತದೆ. ಇದರ ಅಡಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನ್ವಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 14,500 ಶಾಲೆಗಳನ್ನು ಮರುಅಭಿವೃದ್ಧಿಗೊಳಿಸಲಾಗುವುದು. ಶಿಕ್ಷಣ ಸಚಿವಾಲಯವು ಆಯೋಜಿಸಿದ ಸಮ್ಮೇಳನದಲ್ಲಿ ಈ ಯೋಜನೆಯನ್ನು ಮೊದಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಿಕ್ಷಣ ಸಚಿವರೊಂದಿಗೆ ಚರ್ಚಿಸಲಾಯಿತು.

TV9 Kannada


Leave a Reply

Your email address will not be published.