Ponniyin Selvan ವೇದಿಕೆಯಲ್ಲೂ ಪುನೀತ್​ ಬಗ್ಗೆ ಮಾತಾಡಿದ ಖ್ಯಾತ ನಟಿ ತ್ರಿಷಾ | Trisha Krishnan talks about Puneeth Rajkumar during Ponniyin Selvan pre release event in Bengaluru



Trisha Krishnan | Puneeth Rajkumar: ಪುನೀತ್​ ರಾಜ್​ಕುಮಾರ್​ ಬಗ್ಗೆ ತ್ರಿಷಾ ಮಾತನಾಡಿದ್ದಾರೆ. ಒಟ್ಟಿಗೆ ಕೆಲಸ ಮಾಡಿದ ಆ ದಿನಗಳನ್ನು ಅವರು ನೆನಪು ಮಾಡಿಕೊಂಡಿದ್ದಾರೆ.

TV9kannada Web Team


| Edited By: Madan Kumar

Sep 23, 2022 | 8:34 AM




ಕನ್ನಡದ ಸಿನಿಮಾ ಪ್ರೇಕ್ಷಕರಿಗೆ ನಟಿ ತ್ರಿಷಾ ಕೃಷ್ಣನ್​ (Trisha Krishnan) ಚಿರಪರಿಚಿತರು. ಪುನೀತ್​ ರಾಜ್​ಕುಮಾರ್​ ಜೊತೆ ಅವರು ‘ಪವರ್​ ಸ್ಟಾರ್​’ ಸಿನಿಮಾದಲ್ಲಿ ನಟಿಸಿದ್ದರು. ‘ದ್ವಿತ್ವ’ ಚಿತ್ರದಲ್ಲೂ ಅವರು ಅಪ್ಪು ಜೊತೆ ತೆರೆ ಹಂಚಿಕೊಳ್ಳಬೇಕಿತ್ತು. ಆದರೆ ಅಷ್ಟರಲ್ಲೇ ಪುನೀತ್​ ಇಹಲೋಕ ತ್ಯಜಿಸಿದರು. ಅವರ ನೆನಪು ಎಲ್ಲರ ಮನದಲ್ಲೂ ಶಾಶ್ವತವಾಗಿದೆ. ತ್ರಿಷಾ ಈಗ ‘ಪೊನ್ನಿಯಿನ್​ ಸೆಲ್ವನ್’ (Ponniyin Selvan) ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಪ್ರಚಾರಕ್ಕಾಗಿ ಅವರು ಗುರುವಾರ (ಸೆ.22) ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಅವರು ಪುನೀತ್​ ರಾಜ್​ಕುಮಾರ್​ (Puneeth Rajkumar) ಬಗ್ಗೆ ಮಾತನಾಡಿದ್ದಾರೆ. ಆ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ‘ನಿಮ್ಮನ್ನು ಮಿಸ್​ ಮಾಡಿಕೊಳ್ಳುತ್ತೇನೆ ಪುನೀತ್​ ಸರ್​’ ಎಂದು ತ್ರಿಷಾ ಹೇಳಿದ್ದಾರೆ.

 

TV9 Kannada


Leave a Reply

Your email address will not be published.