Poor Gut Health: ಕರುಳು ಸರಿಯಾಗಿ ಕಾರ್ಯನಿರ್ವಹಿಸತ್ತಿಲ್ಲ ಎಂದು ತಿಳಿಯುವುದು ಹೇಗೆ? | Warning Signs You Have Poor Gut Health And Tips To Improve It


Poor Gut Health:ಮನುಷ್ಯನ ಜೀರ್ಣ ವ್ಯವಸ್ಥೆಗೆ ಪ್ರಮುಖವಾಗಿ ಬೇಕಾಗಿರುವುದು ಕರುಳು, ಒಂದೊಮ್ಮೆ ಕರುಳಿ(Gut)ನ ಸಮಸ್ಯೆ ಉಂಟಾದರೆ ಇಡೀ ಜೀರ್ಣವ್ಯವಸ್ಥೆಯೇ ಹಾಳಾಗುತ್ತದೆ.

ಮನುಷ್ಯನ ಜೀರ್ಣ ವ್ಯವಸ್ಥೆಗೆ ಪ್ರಮುಖವಾಗಿ ಬೇಕಾಗಿರುವುದು ಕರುಳು, ಒಂದೊಮ್ಮೆ ಕರುಳಿ(Gut)ನ ಸಮಸ್ಯೆ ಉಂಟಾದರೆ ಇಡೀ ಜೀರ್ಣವ್ಯವಸ್ಥೆಯೇ ಹಾಳಾಗುತ್ತದೆ. ಸೋಂಕು, ರಕ್ತ ಸರಬರಾಜು ಕೆಟ್ಟದಾಗಿರುವುದು ಮತ್ತು ಪರಾವಲಂಬಿಯಿಂದಾಗಿ ಕರುಳಿನಲ್ಲಿ ಉರಿಯೂತವು ಉಂಟಾಗುವುದು. ಇದನ್ನು ನೋಡಿಕೊಂಡು ಕೊಲೈಟಿಸ್​ನ್ನು ವಿವಿಧ ರೀತಿಯಲ್ಲಿ ವಿಂಗಡಿಸಲಾಗುತ್ತದೆ.

ನಿಮ್ಮ ಜೀವನಶೈಲಿಯೇ ಕರುಳಿನ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ, ಒಂದೊಮ್ಮೆ ನಿಮ್ಮ ಕರುಳು ಸರಿಯಾಗಿ ಕೆಲಸ ಮಾಡದೇ ಇದ್ದರೆ ಅತಿಸಾರ, ಗ್ಯಾಸ್ಟ್ರಿಕ್, ವಾಕರಿಕೆ, ಹೊಟ್ಟೆಯಲ್ಲಿ ನೋವು ಸೇರಿದಂತೆ ಹಲವು ತೊಂದರೆಗಳಾಗಬಹುದು ಇದರಿಂದ ನಿಮ್ಮ ಮಾನಸಿಕ ಆರೋಗ್ಯದ ಮೇಲೂ ಕೂಡ ಪರಿಣಾಮ ಬೀರುತ್ತದೆ.

ಈ ಲಕ್ಷಣಗಳು ಕಾಣಿಸಿಕೊಂಡರೆ ನಿಮ್ಮ ಕರುಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರ್ಥ

ಚರ್ಮದ ಕಿರಿಕಿರಿ: ಕರುಳಿನ ಆರೋಗ್ಯ ಸರಿ ಇಲ್ಲದಿದ್ದರೆ ಅಲರ್ಜಿಯುಂಟಾಗಿ ತುರಿಕೆಯಾಗುತ್ತದೆ.
ನಿದ್ರಾಹೀನತೆ: ನಿಮಗೆ ಕರುಳಿನ ಸಮಸ್ಯೆ ಕಾಡುತ್ತಿದ್ದರೆ, ನಿದ್ರಾ ಹೀನತೆ ಮೊದಲ ಲಕ್ಷಣವಾಗಿರುತ್ತದೆ.
ವಿಪರೀತ ತಲೆ ನೋವು: ಕರುಳು ಸರಿಯಾಗಿ ಕೆಲಸ ಮಾಡದಿದ್ದರೆ ವಿಪರೀತ ತಲೆ ನೋವು ಉಂಟಾಗುತ್ತದೆ, ವಾಕರಿಕೆ ಇರುತ್ತದೆ.

ಔಷಧಿಯಿಂದ ಕಾಡುವ ಕೊಲೈಟಿಸ್
ಕೆಲವು ಜನರಲ್ಲಿ ಮಾತ್ರೆಗಳ ಅತಿಯಾಗಿ ಸೇವನೆಯಿಂದಾಗಿ ಕರುಳಿನಲ್ಲಿ ಉರಿಯೂತ ಕಾಣಿಸಿಕೊಳ್ಳುವುದು. ಕೊಲೈಟಿಸ್ ನ್ನು ಮಾತ್ರೆಗಳಲ್ಲಿ ಇರುವಂತಹ ಎನ್ ಎಸ್ ಎಐಡಿ ಬರುವುದು. ವಯಸ್ಸಾದವರು ಮತ್ತು ದೀರ್ಘಕಾಲದಿಂದ ಎನ್ ಎಸ್ ಎಐಡಿ ಬಳಸುವಂತಹ ಜನರಲ್ಲಿ ಔಷಧಿ ಸಂಬಂಧ ಕೊಲೈಟಿಸ್ ಕಂಡುಬರುವುದು.

ಕರುಳಿನ ಉರಿಯೂತಕ್ಕೆ ಕೆಲವು ಕಾರಣಗಳು
ವೈರಸ್, ಬ್ಯಾಕ್ಟೀರಿಯಾ ಮತ್ತು ಪರಾವಲಂಬಿಯಿಂದಾಗಿ ಕೊಲೈಟಿಸ್ ಸೋಂಕು ಉಂಟಾಗುವುದು. ಕಲುಷಿತ ನೀರು, ಆಹಾರ ಸಂಬಂಧಿ ಕಾಯಿಲೆ ಅಥವಾ ಸ್ವಚ್ಛತೆ ಇಲ್ಲದೆ ಇರುವುದರಿಂದಲೂ ಸೋಂಕಿನಿಂದ ಕೊಲೈಟಿಸ್ ಬರುವುದು ಇದೆ.

ಕರುಳಿನ ಸೋಂಕಿಗೆ ಚಿಕಿತ್ಸೆ
ಆಹಾರ ಕ್ರಮದಲ್ಲಿ ಬದಲಾವಣೆ ಮತ್ತು ಔಷಧಿಯಿಂದ ಹೆಚ್ಚಿನ ಕೊಲೈಟಿಸ್ ಸಮಸ್ಯೆ ನಿವಾರಣೆ ಆಗುವುದು. ಕೆಲವೊಂದು ಲಕ್ಷಣಗಳನ್ನು ಉಂಟು ಮಾಡುವಂತಹ ಕರುಳಿನ ಉರಿಯೂತವನ್ನು ಕಡಿಮೆ ಮಾಡುವುದು ಈ ಚಿಕಿತ್ಸೆಯ ಗುರಿಯಾಗಿದೆ.
ಕರುಳಿನ ಸೋಂಕಿಗೆ ವಿವಿಧ ರೀತಿಯ ಚಿಕಿತ್ಸೆಗಳು ಇವೆ. ಕೆಲವೊಂದು ರೀತಿಯ ಆಹಾರದ ಅಡ್ಡಪರಿಣಾಮದಿಂದ ಹಿಡಿದು ಔಷಧಿಯ ಅಡ್ಡಪರಿಣಾಮವು ಆಗಿರಬಹುದು. ವೈದ್ಯರು ನಿಮಗೆ ಕೆಲವು ಆಹಾರವನ್ನು ಸೇವಿಸದಂತೆ ಸೂಚಿಸಬಹುದು ಅಥವಾ ಔಷಧಿ ಬದಲಾಯಿಸಬಹುದು.

ಕರುಳು ಸಮಸ್ಯೆ ನಿವಾರಣೆ ಹೇಗೆ?

-ಆಂಟಿಬಯೋಟಿಕ್​ಗಳ ಬಳಕೆ ಕಡಿಮೆ ಮಾಡಿ

-ಡಯಟ್ ವ್ಯವಸ್ಥೆಯನ್ನು ಬದಲಾಯಿಸಿ

-ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ

-ನಿತ್ಯ ವ್ಯಾಯಾಮ ಮಾಡಿ

-ದೇಹವನ್ನು ಹೈಡ್ರೇಟ್​ ಆಗಿಡಿ

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *