ಹೆರಿಯ ನಂತರ ನಟಿ ಆಲಿಯಾ ಭಟ್ ಫಿಟ್ನೆಸ್ನಲ್ಲಿ ತೊಡಗಿಸಿಕೊಂಡಿದ್ದು, ಇದೀಗಾ ವರ್ಕ್ ಔಟ್ ವಿಡಿಯೋ ಹಂಚಿಕೊಂಡಿದ್ದಾರೆ. ಆರೋಗ್ಯಕರ ಆಹಾರ ಕ್ರಮ ಹಾಗೂ ಮಾನಸಿಕವಾಗಿಯೂ ಆರೋಗ್ಯವಾಗಿರಲು ಒತ್ತಡದ ಜೀವನದಿಂದ ಸ್ವಲ್ಪ ಬಿಡುವು ತೆಗೆದುಕೊಳ್ಳಲು ಬಯಸುತ್ತೇನೆ ಎಂದು ಆಲಿಯಾ ಹೇಳಿಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ
ಹೆರಿಯ ನಂತರ ನಟಿ ಆಲಿಯಾ ಭಟ್ ಫಿಟ್ನೆಸ್ನಲ್ಲಿ ತೊಡಗಿಸಿಕೊಂಡಿದ್ದು, ಇದೀಗಾ ವರ್ಕ್ ಔಟ್ ವಿಡಿಯೋ ಹಂಚಿಕೊಂಡಿದ್ದಾರೆ. ಮಗಳು ರಾಹಾ ಕಪೂರ್ಗೆ ಜನ್ಮ ನೀಡಿದ ನಂತರ ದೈಹಿಕ ಹಾಗೂ ಮಾನಸಿಕವಾಗಿ ಸಾಕಷ್ಟು ಬದಲಾವಣೆಗಳನ್ನು ಕಂಡಿದ್ದೇನೆ. ಆರೋಗ್ಯಕರ ಆಹಾರ ಕ್ರಮ ಹಾಗೂ ಮಾನಸಿಕವಾಗಿಯೂ ಆರೋಗ್ಯವಾಗಿರಲು ಒತ್ತಡದ ಜೀವನದಿಂದ ಸ್ವಲ್ಪ ಬಿಡುವು ತೆಗೆದುಕೊಳ್ಳಲು ಬಯಸುತ್ತೇನೆ ಎಂದು ಆಲಿಯಾ ಹೇಳಿಕೊಂಡಿದ್ದಾರೆ. ಹೆರಿಗೆಯ ನಂತರ ಪ್ರತಿಯೊಂದು ಮಹಿಳೆಯೂ ಬಯಸುವ ಹಾಗೆಯೇ ನಾನು ಕೂಡ ತೂಕ ಇಳಿಸಲು ಬಯಸುತ್ತೇನೆ, ಆದರೆ ಯಾವಾತ್ತೂ ನಿಮ್ಮ ದೇಹದ ಬಗ್ಗೆ ಅಸಮಾಧಾನ ಇಟ್ಟುಕೊಳ್ಳಬೇಡಿ. ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲ, ಈ ಸಮಯದಲ್ಲಿ ಮಾನಸಿಕವಾಗಿಯೂ ಆರೋಗ್ಯವಾಗಿರುವುದು ತುಂಬಾ ಅಗತ್ಯ ಎಂದು ಬಾಂಬೆ ಟೈಮ್ಸ್ಗೆ ಹೇಳಿಕೊಂಡಿದ್ದಾರೆ.
ಪ್ರಸವದ ನಂತರ ಸುರಕ್ಷಿತವಾಗಿ ತೂಕವನ್ನು ಕಳೆದುಕೊಳ್ಳಲು ಸಲಹೆ ಇಲ್ಲಿವೆ:
ಪ್ರಸವದ ನಂತರ ಆರೋಗ್ಯಕರ ರೀತಿಯಲ್ಲಿ ತೂಕ ಕಳೆದುಕೊಳ್ಳಲು ಡಾ. ಬೋರ್ಚಾರ್ಡ್ ನೀಡಿರುವ ಸಲಹೆಗಳು ಈ ಕೆಳಗಿನಂತಿವೆ.
ತಾಜಾ ಸುದ್ದಿ
ಸಮತೋಲಿತ ಆಹಾರ ಕ್ರಮ ರೂಡಿಸಿ:
ನೀವು ಸಾಮಾನ್ಯವಾಗಿ ಸೇವಿಸುವ ಆಹಾರ ಕ್ರಮದೊಂದಿಗೆ ಹಣ್ಣು ಹಾಗೂ ನಾರಿನಾಂಶವಿರುವ ಆಹಾರವನ್ನು ಸೇವಿಸಿ. ಆವಕಾಡೊ, ಚಿಯಾ ಬೀಜಗಳು ಅಥವಾ ಆಲಿವ್ ಎಣ್ಣೆಯಂತಹ ಕೊಬ್ಬಿನ ಆರೋಗ್ಯಕರ ಹಾಗೂ ದೇಹಕ್ಕೆ ತಂಪು ನೀಡುವ ಆಹಾರ ಕ್ರಮವನ್ನು ರೂಡಿಸಿಕೊಳ್ಳಿ.