Power Cut: ಬೆಂಗಳೂರಿನ ಜಯನಗರ, ಚಂದ್ರಾ ಲೇಔಟ್, ಉತ್ತರಹಳ್ಳಿ ಸೇರಿ ಹಲವೆಡೆ ಇಂದು ಕರೆಂಟ್ ಇರಲ್ಲ | Power Cut Bengaluru to face power cuts on Sunday Check areas and timings BESCOM


Power Cut: ಬೆಂಗಳೂರಿನ ಜಯನಗರ, ಚಂದ್ರಾ ಲೇಔಟ್, ಉತ್ತರಹಳ್ಳಿ ಸೇರಿ ಹಲವೆಡೆ ಇಂದು ಕರೆಂಟ್ ಇರಲ್ಲ

ಪವರ್ ಕಟ್

ಬೆಂಗಳೂರು: ಬೆಂಗಳೂರಿನಲ್ಲಿ ಒಂದೆಡೆ ಭಾರೀ ಮಳೆಯಾಗುತ್ತಿದ್ದು, ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇದರ ನಡುವೆ ಸಿಲಿಕಾನ್ ಸಿಟಿಯಲ್ಲಿ ಪವರ್ ಕಟ್ ಸಮಸ್ಯೆ ಕೂಡ ತಲೆದೋರಿದೆ. ಬೆಂಗಳೂರಿನಲ್ಲಿ ಬೆಸ್ಕಾಂನಿಂದ (BESCOM) ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಇಂದು ಜಯನಗರ, ನಾಗಾವರ, ದೊಮ್ಮಸಂದ್ರ ರಸ್ತೆ, ಬಿಇಎಲ್ ಲೇಔಟ್, ಉಳ್ಳಾಲ, ಉತ್ತರಹಳ್ಳಿ, ನಾಗರಬಾವಿ, ಚಂದ್ರಾ ಲೇಔಟ್ ಮುಂತಾದೆಡೆ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ಪವರ್ ಕಟ್ ಇರಲಿದೆ.

ಇಂದು (ಭಾನುವಾರ) ಬೆಂಗಳೂರಿನ ದಕ್ಷಿಣ ವಲಯದಲ್ಲಿ ಮೈಕೋ ಲೇಔಟ್ ಪೊಲೀಸ್ ಠಾಣೆಯ ಸುತ್ತಮುತ್ತ, ಬಿಟಿಎಂ ಲೇಔಟ್ 16ನೇ ಮುಖ್ಯ ರಸ್ತೆ, KPRC ಲೇಔಟ್, ಜಯನಗರ ಈಸ್ಟ್ ಎಂಡ್ ಮುಖ್ಯ ರಸ್ತೆ, ಗೊಟ್ಟಿಗೆರೆ, ಶಾಂತಿನಿಕೇತನ ಲೇಔಟ್, ನ್ಯೂ ಹಾರಿಜನ್ ಕಾಲೇಜು ರಸ್ತೆ, ವಿವೇಕಾನಂದ ಲೇಔಟ್, ಕೃಪಾನಿಧಿ ಕಾಲೇಜು ರಸ್ತೆ, ಕುಂದಲಹಳ್ಳಿ, ತಾವರೆಕೆರೆ ಮುಖ್ಯರಸ್ತೆ, ಮಡಿವಾಳ ಗ್ರಾ.ಪಂ. ರಸ್ತೆ ಹಾಗೂ ಚಿಕ್ಕ ಆಡುಗೋಡಿಯಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಬೆಂಗಳೂರಿನ ಪೂರ್ವ ವಲಯದಲ್ಲಿ ಉಮರ್‌ನಗರ, ಚಾಣಕ್ಯ ಲೇಔಟ್, ನಾಗಾವರ, ಕೆ. ನಾರಾಯಣಪುರ, ದೊಮ್ಮಸಂದ್ರ ರಸ್ತೆ, ಕೃಪಾನಿಧಿ ಕಾಲೇಜು ರಸ್ತೆ, ಗೌತಮಪುರ, ಕೇಂಬ್ರಿಡ್ಜ್ ಲೇಔಟ್, ಜೋಗುಪಾಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಪೈ ಲೇಔಟ್, ವರ್ತೂರು ರಸ್ತೆ, ಹೊಯ್ಸಳನಗರ ಮತ್ತು ಕೋಡಿಹಳ್ಳಿ 2ನೇ ಮುಖ್ಯ ರಸ್ತೆಯ ಭಾಗಗಳಲ್ಲಿ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ವಿದ್ಯುತ್ ಕಡಿತ ಉಂಟಾಗಲಿದೆ.

ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಬಿಇಎಲ್ ಲೇಔಟ್ 1 ಮತ್ತು 2ನೇ ಹಂತ, ಉಳ್ಳಾಲ ನಗರ, ಮಾರುತಿನಗರ, ರಾಬಿನ್ ಥಿಯೇಟರ್ ಸರ್ಕಲ್, ಟಿ.ಪಿ.ಮುಖ್ಯ ರಸ್ತೆ, ಬಿಎಚ್‌ಇಎಲ್ ಲೇಔಟ್, ಉತ್ತರಹಳ್ಳಿ, ಪ್ರಶಾಂತನಗರ, ನಾಗರಬಾವಿ 9ನೇ ಬ್ಲಾಕ್, ಕಾಮಾಕ್ಷಿಪಾಳ್ಯ, ವೃಷಭಾವತಿ ನಗರ, ಸುಂಕದಕಟ್ಟೆ ಮತ್ತು ಚಂದ್ರಾ ಲೇಔಟ್ ಭಾಗಗಳಲ್ಲಿ ಬೆಳಗ್ಗೆ ಮತ್ತು ಸಂಜೆ 5ರವರೆಗೆ ಪವರ್ ಕಟ್ ಇರಲಿದೆ.

ಬೆಂಗಳೂರಿನ ಉತ್ತರ ವಲಯದಲ್ಲಿ ಟಿ. ದಾಸರಹಳ್ಳಿ, ನೃಪತುಂಗ ರಸ್ತೆ, ಮಲ್ಲಸಂದ್ರ, ಬಾಬಾ ನಗರ, ಆರ್‌ಟಿ ನಗರ, ಕೊಡಿಗೇಹಳ್ಳಿ, ಎಂಎಸ್‌ ಪಾಳ್ಯ ವೃತ್ತ, ಏರ್‌ಫೋರ್ಸ್‌ ರಸ್ತೆ, ಹೆಸರಘಟ್ಟ, ಮಾವಳ್ಳಿಪುರ ಮತ್ತು ಮಂಜುನಾಥನಗರದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕರೆಂಟ್ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

TV9 Kannada


Leave a Reply

Your email address will not be published. Required fields are marked *