Power Cut: ಬೆಂಗಳೂರಿನ ಬನಶಂಕರಿ, ಸದಾಶಿವನಗರ ಸೇರಿ ಬಹುತೇಕ ಏರಿಯಾಗಳಲ್ಲಿ ಇಂದು ಪವರ್ ಕಟ್ | Power Cut Bengaluru to face power cuts from February 4 to February 6 BESCOM Electricity Supply


Power Cut: ಬೆಂಗಳೂರಿನ ಬನಶಂಕರಿ, ಸದಾಶಿವನಗರ ಸೇರಿ ಬಹುತೇಕ ಏರಿಯಾಗಳಲ್ಲಿ ಇಂದು ಪವರ್ ಕಟ್

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಬೆಂಗಳೂರಿನ ಹಲವು ಏರಿಯಾಗಳಲ್ಲಿ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಇಂದಿನಿಂದ ಫೆ. 6ರವರೆಗೆ ಪವರ್ ಕಟ್ ಇರಲಿದೆ. ಇಂದಿನಿಂದ 3 ದಿನ ಬೆಂಗಳೂರಿನಾದ್ಯಂತ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ತಿಳಿಸಿದೆ. ಸಿಲಿಕಾನ್ ಸಿಟಿಯ ಜಯನಗರ, ಜೆ.ಪಿ. ನಗರ, ಕುಮಾರಸ್ವಾಮಿ ಲೇಔಟ್, ಬನಶಂಕರಿ, ಸದಾಶಿವನಗರ, ಬಸವನಗುಡಿ, ಎಸ್​ಬಿಎಂ ಕಾಲೋನಿ, ವಿದ್ಯಾಪೀಠ ಸೇರಿದಂತೆ ಬಹುತೇಕ ಏರಿಯಾಗಳಲ್ಲಿ ಇಂದು ಕರೆಂಟ್ ಇರುವುದಿಲ್ಲ.

ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಜಯನಗರ 4ನೇ ಬ್ಲಾಕ್, ವಿನಾಯಕನಗರ, ನಂಜಪ್ಪ ಸರ್ಕಲ್, ಗೌಡನಪಾಳ್ಯ, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ವಸಂತ ವಲ್ಲಬ ನಗರ, ಕುವೆಂಪು ನಗರ ಮುಖ್ಯರಸ್ತೆ, ವಸತಪುರ, ಜೆಪಿ ನಗರ 6ನೇ ಹಂತ, ಪುಟ್ಟೇನಹಳ್ಳಿ ಭಾಗಗಳು, ಬನಶಂಕರಿ 2ನೇ ಹಂತ, ಜೆಪಿ ನಗರ 2ನೇ ಹಂತ, ಜೆ.ಪಿ. ನಗರ 3 ನೇ ಹಂತ, ಜೆಪಿ ನಗರ 4 ನೇ ಹಂತ, ಜೆಪಿ ನಗರ 5 ನೇ ಹಂತ, ಡಾಲರ್ಸ್ ಲೇಔಟ್, ಇಟ್ಟಮಡು, ಬನಶಂಕರಿ 5 ನೇ ಹಂತ, ವಿವೇಕ ನಗರ, ನಾಗಸಂದ್ರ, ಕೆಇಬಿ ಲೇಔಟ್, ಕುಂದಲಹಳ್ಳಿ ಗ್ರಾಮ, ಐಟಿಪಿಎಲ್ ಮುಖ್ಯ ರಸ್ತೆ, ದೊಡ್ಡ ನೆಕುಂದಿ, ಅಂಬೇಡ್ಕರ್ ನಗರ, ಮಲ್ಲಸಂಧ್ರಪುರ ರಸ್ತೆ, ಬಿಡಿಎ 9ನೇ ಹಂತ, ರಾಘವನಪಾಳ್ಯ, ವಸಂತ ವಲ್ಲಭ ನಗರ ಮತ್ತು ಪರಪ್ಪನ ಅಗ್ರಹಾರ ಮುಖ್ಯರಸ್ತೆಯಲ್ಲಿ ಕರೆಂಟ್ ಇರುವುದಿಲ್ಲ.

ಉತ್ತರ ವಲಯದಲ್ಲಿ ಬೆಳಗ್ಗೆ 9.30ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಗಾಯತ್ರಿನಗರ, ಓಕಳಿಪುರಂ 2ನೇ ಹಂತ, ನಾಗಪ್ಪ ಬ್ಲಾಕ್, ಮುನೇಶ್ವರ ಬ್ಲಾಕ್, ಸದಾಶಿವನಗರ, ತ್ರಿವೇಣಿ ರಸ್ತೆ, ನ್ಯೂ ಬಿಇಎಲ್ ರಸ್ತೆ, ಪ್ರಕಾಶ್ ನಗರದ ಕೆಲವು ಭಾಗಗಳು, ಕಾವೇರಿ ಲೇಔಟ್, ಲಕ್ಷ್ಮೀಪುರ ಗ್ರಾಮ, ಸಂಪಿಗೆ ರಸ್ತೆ, ಟಾಟಾನಗರ, ದೇವಿ ನಗರ, ಲೊಟ್ಟೆಗೋಳಹಳ್ಳಿ, ಸಾಯಿನಗರ 2ನೇ ಹಂತ, ಸಂಪಿಗೆಹಳ್ಳಿ, ಹಾರೋಹಳ್ಳಿ, ಕೆಂಚನಹಳ್ಳಿ, ನಾಗದೇಸನಹಳ್ಳಿ, ಗೆಂಟಗಾನಹಳ್ಳಿ, ಮೂಡನಹಳ್ಳಿ, ಕೆಎಚ್‌ಬಿ ಕ್ವಾರ್ಟರ್ಸ್, ರಂಕಾ ನಗರ, ಶೆಟ್ಟಿಹಳ್ಳಿ, ಮಲ್ಲಸಂದ್ರ, ಹೆಸರಘಟ್ಟ ಮುಖ್ಯರಸ್ತೆ, ಭುವನೇಶ್ವರಿ ನಗರ, ಟಿ ದಾಸರಹಳ್ಳಿ, ಮಹಾಲಕ್ಷ್ಮಿ ಪುರಂ ಮತ್ತು ಮೋದಿ ಆಸ್ಪತ್ರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಪವರ್ ಕಟ್ ಇರಲಿದೆ.

ಬೆಂಗಳೂರು ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸ್ವಾಮಿ ವಿವೇಕಾನಂದ ರಸ್ತೆ, ದೊಮ್ಮಲೂರು ಗ್ರಾಮ, ಹೊಯ್ಸಳ ನಗರ ರಸ್ತೆ, ಮುಕುಂದ ಥಿಯೇಟರ್ ಹತ್ತಿರ, ಉಮರ್ ನಗರ, ಚಾಣಕ್ಯ ಲೇಔಟ್, ನಾಗವಾರ, ಗೆದ್ದಲಹಳ್ಳಿ ಮತ್ತು ಚನ್ನಸಂದ್ರದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಬೆಳಗ್ಗೆ 9.30ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಹಂಪಿನಗರ, ವಿಎಚ್‌ಬಿಸಿಎಸ್ ಲೇಔಟ್, ಎಲ್‌ಐಸಿ ಕಾಲೋನಿ, ಕಿರ್ಲೋಸ್ಕರ್ ಕಾಲೋನಿ 2 ನೇ ಹಂತ, ಕೆಎಚ್‌ಬಿ ಕಾಲೋನಿ, ಬಸವೇಶ್ವರನಗರದ ಕೆಲವು ಭಾಗಗಳು, ಶಾರದ ಕಾಲೋನಿ, ಹೆಗ್ಗನಹಳ್ಳಿ ಕ್ರಾಸ್, ಕಾಮಾಕ್ಷಿಪಾಳ್ಯ, ರಾಜೀವ್ ಗಾಂಧಿ ನಗರ, ಬೈರವೇಶ್ವರ ನಗರ, ಪ್ರಶಾಂತ ನಗರ, ಮುದಲಪಾಳ್ಯ, ಮುದಲಪಾಳ್ಯ, ಮುದಲಪಾಳ್ಯ, ಪಿ.ಬಿ. ಭಾಗಗಳು ಬಸವನಗುಡಿ, ವಿದ್ಯಾಪೀಠ, ಅನ್ನಪೂರ್ಣೇಶ್ವರಿ ಲೇಔಟ್, ಟಿಜಿ ಪಾಳ್ಯ, ವಿದ್ಯಾಮಾನ ನಗರ, ಕೆಂಗೇರಿ ಮುಖ್ಯ ರಸ್ತೆ, ಬಿಡಿಎ ಏರಿಯಾ ಬ್ಲಾಕ್ -1, ಉತ್ತರಹಳ್ಳಿ ರಸ್ತೆ, ಕೋಡಿಪಾಳ್ಯ, ಕುವೆಂಪು ಮುಖ್ಯರಸ್ತೆ, ಗಂಗಾನಗರ, ಬಿಇಎಲ್ 1ನೇ ಹಂತ ಮತ್ತು ಬಿಇಎಲ್ 2ನೇ ಹಂತದಲ್ಲಿ ಕರೆಂಟ್ ಇರುವುದಿಲ್ಲ.

ಫೆಬ್ರವರಿ 5ರಂದು ಪವರ್ ಕಟ್ ಇರುವ ಏರಿಯಾಗಳು:
ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಈ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕೆಆರ್ ರಸ್ತೆ, 8ನೇ ಬ್ಲಾಕ್ ಜಯನಗರ, ವಿನಾಯಕನಗರ, ಟೌನ್ ಹಾಲ್, ರವೀಂದ್ರ ಕಲಾಕ್ಷೇತ್ರ, ಬಿಕಿಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಜೆಪಿ ನಗರ 1ನೇ ಹಂತ, ಸಾರಕ್ಕಿ ಮಾರುಕಟ್ಟೆ, ತ್ಯಾಗರಾಜನಗರ ಮುಖ್ಯರಸ್ತೆ, ಪಾಪಯ್ಯ ಗಾರ್ಡನ್, ಬನಶಂಕರಿ 3ನೇ ಬಡಾವಣೆ, ಬನಶಂಕರಿ 3ನೇ ಬ್ಲಾಕ್ ಪೀಡಿತ ಪ್ರದೇಶಗಳು. ಅಚ್ಚುಕಟ್ಟು, ಕತ್ರಿಗುಪ್ಪೆ, ಕಾಕತಿಯನಗರ, ಮಾರತಹಳ್ಳಿ, ಹೊಂಗಸಂದ್ರ, ಬೊಮ್ಮನಹಳ್ಳಿ, ಸಂತೃಪ್ತಿ ನಗರ, ನೃಪತುಂಗನನಗರ, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ ಮತ್ತು ದೊಡ್ಡತೋಗೂರು.

ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಪ್ರಕಾಶನಗರ, ರಾಮಮೋಹನಪುರ, ವೈಯಾಲಿಕಾವಲ್, ಯಶವಂತಪುರ, ಮಾಡೆಲ್ ಕಾಲೋನಿ, ಗುರುಮೂರ್ತಿ ರೆಡ್ಡಿ ಕಾಲೋನಿ, ಅಂಬೇಡ್ಕರ್ ನಗರ, ಪೈಪ್ ಲೈನ್ ರಸ್ತೆ, ನ್ಯೂ ಬಿಇಎಲ್ ರಸ್ತೆ, ಆದಿತ್ಯ ನಗರ, ಎಂಎಸ್ ಪಾಳ್ಯ, ಅಕ್ಷಯನಗರ, ದೊಡ್ಡಬೆಟಹಳ್ಳಿ, ತಿಂಡ್ಲು ಮುಖ್ಯರಸ್ತೆ, ರಾಘವೇಂದ್ರ ಬಿ ಕಾಲೋನಿ, ಕೆ.ಈ.ಡ.ಬಿ. ನಗರ, ಜಕ್ಕೂರು ಮುಖ್ಯ ರಸ್ತೆ ಮತ್ತು ಕಲಾಸ್ತ್ರೀನಗರದಲ್ಲಿ ಕರೆಂಟ್ ಇರುವುದಿಲ್ಲ.

ಬೆಂಗಳೂರಿನ ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕಸ್ತೂರಿ ನಗರ, ಟಿಸಿ ಪಾಳ್ಯ ರಸ್ತೆ, ಆರ್‌ಕೆ ಮಠದ ರಸ್ತೆ, ಹಲಸೂರು ಮೆಟ್ರೋ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಬೆಳ್ಳಾಳಿ ಗ್ರಾಮ, ಕಾಫಿ ಬೋರ್ಡ್ ಲೇಔಟ್, ಅಂಬೇಡ್ಕರ್ ನಗರ ಗುಟ್ಟ, ವೈಟ್‌ಫೀಲ್ಡ್ ಮುಖ್ಯ ರಸ್ತೆ, ಗುಂಜೂರು, ಗುಂಜೂರು ಮುಖ್ಯರಸ್ತೆ, ಅಯ್ಯಪ್ಪನಗರ, ಗೋಕುಲ ವಿಸ್ತರಣೆ ಮತ್ತು ಹೂಡಿಯಲ್ಲಿ ಪವರ್ ಕಟ್ ಇರಲಿದೆ.

ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸುಬ್ಬಣ್ಣ ಗಾರ್ಡನ್, ವಿಎಚ್‌ಬಿಸಿಎಸ್, ಕೆನರಾ ಬ್ಯಾಂಕ್ ಕಾಲೋನಿ, ಅನುಭವ ನಗರ, ಕಿರ್ಲೋಸ್ಕರ್ ಕಾಲೋನಿ 1 ನೇ ಹಂತ, ಹಾವನೂರು ವೃತ್ತ, ಮಂಜುನಾಥನಗರ, ಶಾರದ ಕಾಲೋನಿ, ಮೀನಾಕ್ಷಿನಗರ, ಸುಂಕದಕಟ್ಟೆ, ರಾಜೀವ್ ಗಾಂಧಿ ನಗರ, ಬೈರವೇಶ್ವರ ನಗರ, ಪ್ರಶಾಂತ ನಗರ, ಮುದಲಪಾಳ್ಯ, ಮುದಲಪಾಳ್ಯ ಉಳ್ಳಾಲ ನಗರ, ದೊಡ್ಡ ಬಸ್ತಿ ಮುಖ್ಯರಸ್ತೆ, ಮಲ್ಲತ್ತಳ್ಳಿ ಲೇಔಟ್, ದ್ವಾರಕಾಬಸ ರಸ್ತೆ ಮತ್ತು ಭವಾನಿನಗರದಲ್ಲಿ ಪವರ್ ಕಟ್ ಇರಲಿದೆ.

TV9 Kannada


Leave a Reply

Your email address will not be published.