Power Cut: ಬೆಂಗಳೂರಿನ ಹಲವೆಡೆ ಇಂದು ಕರೆಂಟ್ ಇರಲ್ಲ; ಪವರ್ ಕಟ್ ಇರುವ ಏರಿಯಾಗಳಿವು | Power Cut: Bengaluru to face power cuts on February 19 Bangalore Power Cut Areas Full list


Power Cut: ಬೆಂಗಳೂರಿನ ಹಲವೆಡೆ ಇಂದು ಕರೆಂಟ್ ಇರಲ್ಲ; ಪವರ್ ಕಟ್ ಇರುವ ಏರಿಯಾಗಳಿವು

ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಇಂದು ವಿದ್ಯುತ್ ಪೂರೈಕೆಯಲ್ಲಿ (Electricity Supply) ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ನಿರ್ವಹಣೆ ಮತ್ತು ಮೇಲ್ದರ್ಜೆಗೇರಿಸುವ ಕಾಮಗಾರಿಯಿಂದ ಇಂದು ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ಪವರ್ ಕಟ್ (Power Cut) ಇರಲಿದೆ ಎಂದು ಬೆಸ್ಕಾಂ (BESCOM) ತಿಳಿಸಿದೆ. ಬೆಂಗಳೂರಿನ ಜಯನಗರ, ಇಸ್ರೋ ಲೇಔಟ್, ಸಾರಕ್ಕಿ ಮಾರುಕಟ್ಟೆ, ಟೀಚರ್ಸ್ ಕಾಲೋನಿ, ಭುವನೇಶ್ವರಿ ನಗರ, ವಿದ್ಯಾಪೀಠ ರಸ್ತೆ ಮುಂತಾದ ಏರಿಯಾಗಳಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ ಕರೆಂಟ್ ಇರುವುದಿಲ್ಲ.

ಬೆಂಗಳೂರಿನ ದಕ್ಷಿಣ ವಲಯ: ಇಂದು ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ಪವರ್ ಕಟ್ ಇರುವ ಪ್ರದೇಶಗಳೆಂದರೆ ಕೆ.ಆರ್.ರಸ್ತೆ, ಜಯನಗರ 8ನೇ ಬ್ಲಾಕ್, ಜಾರಗನಹಳ್ಳಿ, ಕೃಷ್ಣ ದೇವರಾಯ ನಗರ, ವೈವಿ ಅಣ್ಣಯ್ಯ ರಸ್ತೆ, ಬಿಕಿಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಕಾಶಿನಗರ ಕೆರೆ, ಇಸ್ರೋ ಲೇಔಟ್, ಜೆಪಿ ನಗರ 1ನೇ ಹಂತ, ಶಾಕಾಂಬರಿ ನಗರ, ಸಾರಕ್ಕಿ ಮಾರುಕಟ್ಟೆ, ಚುಂಚಗಟ್ಟಾ ಗ್ರಾಮ, ಸುಪ್ರಜಾ ನಗರ, ಗಣಪತಿ ಪುರ, ಓಲ್ಡ್ ಬ್ಯಾಂಕ್ ಕಾಲೋನಿ, ಟೀಚರ್ಸ್ ಕಾಲೋನಿ, ಗಣಪತಿಪುರ, ಕೋಣನಕುಂಟೆ ಕೈಗಾರಿಕಾ ಪ್ರದೇಶ, ಲಕ್ಷ್ಮಿ ನಗರ, ಶಿವಶಕ್ತಿ ನಗರ, ದೊಡ್ಮನೆ ಕೈಗಾರಿಕಾ ಪ್ರದೇಶ ಎಸ್.ಜಿ.ಪಾಳ್ಯ, ಭವಾನಿ ನಗರ, ಹೊರ ವರ್ತುಲ ರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ, ಭೋಗನಹಳ್ಳಿ ಮುಖ್ಯರಸ್ತೆ, ಪಾಣತ್ತೂರು ಮುಖ್ಯರಸ್ತೆ, ದೊಡ್ಡ ನೆಕುಂದಿ, ಸುಭಾಷ್ ನಗರ, ಸಂತೃಪ್ತಿ ನಗರ, ಸೇವಾಶ್ರಮ ನಗರ, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ದೊಡ್ಡತೊಗೂರು, ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದ ಪ್ರದೇಶ ಮತ್ತು ಕೆಐಎಡಿಬಿ ಲೇಔಟ್​ನಲ್ಲಿ ಪವರ್ ಕಟ್ ಇರಲಿದೆ.

ಉತ್ತರ ವಲಯ: ಬೆಂಗಳೂರಿನ ಸ್ವತಂತ್ರ ಪಾಳ್ಯ ಮುಖ್ಯರಸ್ತೆ, ಯಶವಂತಪುರ, ಅಂಬೇಡ್ಕರ್ ನಗರ, ನ್ಯೂ ಬಿಇಎಲ್ ರಸ್ತೆ, ಮಂಜುನಾಥ್ ನಗರ, ಹುರಳಿ ಚಿಕ್ಕನಹಳ್ಳಿ, ಟಿಬಿ ಕ್ರಾಸ್, ಹೆಸರಘಟ್ಟ, ದಾಸೇನಹಳ್ಳಿ, ವಿನಾಯಕ ನಗರ, ಎಂಎಸ್ ಪಾಳ್ಯ, ವರದರಾಜ ನಗರ, ಕೊಡಿಗೇಹಳ್ಳಿ, ಟಾಟಾನಗರ, ದೇವಿನಗರ, ಲೊಟ್ಟೆಗೊಲ್ಲಹಳ್ಳಿ. , ತಿಂಡ್ಲು, ಸಾಯಿನಗರ 2ನೇ ಹಂತ, ಸಂಭ್ರಮ ಕಾಲೇಜು, ಬಿಎಚ್‌ಇಎಲ್ ಲೇಔಟ್, ಪಂಪಾ ವಿಸ್ತರಣೆ, ಕೆಂಪಾಪುರ, ಹೆಗಡೆ ನಗರ, ಭುವನೇಶ್ವರಿ ನಗರ ಮತ್ತು ಕನಕನಗರದಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಪೂರ್ವ ವಲಯ: ಬೆಂಗಳೂರು ಪೂರ್ವ ವಲಯದ ಕೋಡಿಹಳ್ಳಿ, ಹನುಮಂತಯ್ಯ ಗಾರ್ಡನ್, ಜೋಗುಪಾಳ್ಯ, ಇಲ್ಪೆ ತೋಪು ಹತ್ತಿರ, ಚಾಣಕ್ಯ ಲೇಔಟ್, ನಾಗವಾರ, ಭುವನೇಶ್ವರಿ ರಸ್ತೆ, ಅಂಬೇಡ್ಕರ್ ನಗರ, ಗಾಯತ್ರಿ ಲೇಔಟ್, ಬೇತೆಲ್ ನಗರ ಮತ್ತು ಸ್ವತಂತ್ರ ನಗರದಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತಗೊಳಿಸಲಾಗುವುದು.

ಪಶ್ಚಿಮ ವಲಯ: ಬೆಂಗಳೂರಿನ ಬಸವೇಶ್ವರನಗರ, ಅಗ್ರಹಾರದಾಸರಹಳ್ಳಿ ಸ್ಲಂ, ಅಗ್ರಹಾರದಾಸರಹಳ್ಳಿ, ಕೆಎಚ್‌ಬಿ 2ನೇ ಹಂತ, ಲಕ್ಷ್ಮಣನಗರ, ಹನುಮಂತರಾಯನ ಪಾಳ್ಯ, ವಿದ್ಯಾಪೀಠ ರಸ್ತೆ, ಸಿಂಡಿಕೇಟ್ ಬ್ಯಾಂಕ್ ಲೇಔಟ್, ಹೊಸಹಳ್ಳಿ ರಸ್ತೆ, ತರಳು ಎಸ್ಟೇಟ್, ವಾಸುದೇವಪುರ, ನಲ್ಲಲದೊಡ್ಡಿ, ನಲ್ಲಲದೊಡ್ಡಿ, ಉಳ್ಳಾಲದೊಡ್ಡಿ, ಬಿಡಿಎ ಏರಿಯಾ ಬ್ಲಾಕ್ -1, ಬಿಇಎಲ್ 1ನೇ ಹಂತ, ಬಿಇಎಲ್ 2ನೇ ಹಂತ, ಅಂಬೇಡ್ಕರ್ ನಗರ ಮತ್ತು ಬಿಡಿಎ ಕಾಲೋನಿಯಲ್ಲಿ ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

TV9 Kannada


Leave a Reply

Your email address will not be published. Required fields are marked *