Prabhas: ರಾವಣನ ಪ್ರತಿಕೃತಿ ಸುಡಲು ಮುಂದಾದ ಪ್ರಭಾಸ್​; ಯಾಕೀ ನಿರ್ಧಾರ? | Prabhas to burn effigy In Delhi ahead of Adipurush Movie Release


ಪ್ರಭಾಸ್ ಅವರು ‘ಆದಿ ಪುರುಷ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ದೊಡ್ಡ ಬಜೆಟ್​ನಲ್ಲಿ ಸಿದ್ಧಾವಾಗುತ್ತಿರುವ ಈ ಸಿನಿಮಾದಲ್ಲಿ ಅವರು ರಾಮನ ಪಾತ್ರ ಮಾಡಿದ್ದಾರೆ.

ಸಾರ್ವಜನಿಕವಾಗಿ ಕಾಣಿಸಿಕೊಂಡ ಸಂದರ್ಭದಲ್ಲಿ ಸೆಲೆಬ್ರಿಟಿಗಳು ತಮ್ಮ ಸಿನಿಮಾ ಪ್ರಚಾರ ಮಾಡಲು ಹೆಚ್ಚು ಆದ್ಯತೆ ನೀಡುತ್ತಾರೆ. ಯಾವುದೇ ವಿಚಾರ ಎತ್ತಿದರೂ ಅದಕ್ಕೆ ತಾವು ನಟಿಸುತ್ತಿರುವ ಸಿನಿಮಾದ ಟಚ್ ನೀಡುತ್ತಾರೆ. ತಮ್ಮ ಚಿತ್ರದ ಪ್ರಚಾರಕ್ಕಾಗಿ ಹಲವು ಶೋಗಳಿಗೆ ತೆರಳುತ್ತಾರೆ. ನಟ ಪ್ರಭಾಸ್ ಕೂಡ ಇದಕ್ಕೆ ಹೊರತಾಗಿಲ್ಲ. ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಇರುವ ಅವರು ಸಮಯ ಸಿಕ್ಕಾಗೆಲ್ಲ ತಮ್ಮ ಚಿತ್ರಗಳ ಪ್ರಚಾರ ಮಾಡುತ್ತಿದ್ದಾರೆ. ಈ ಬಾರಿ ಪ್ರಭಾಸ್ ಅವರು ರಾವಣನ ಪ್ರತಿಕೃತಿ ಸುಡಲು ಮುಂದಾಗಿದ್ದಾರೆ. ಅಚ್ಚರಿ ಎಂದರೆ ಇದಕ್ಕೂ ಸಿನಿಮಾ ಟಚ್ ಇದೆ.

ಪ್ರಭಾಸ್ ಅವರು ‘ಆದಿ ಪುರುಷ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ದೊಡ್ಡ ಬಜೆಟ್​ನಲ್ಲಿ ಸಿದ್ಧಾವಾಗುತ್ತಿರುವ ಈ ಸಿನಿಮಾದಲ್ಲಿ ಅವರು ರಾಮನ ಪಾತ್ರ ಮಾಡಿದ್ದಾರೆ. ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಹಲವು ಕಡೆಗಳಲ್ಲಿ ರಾವಣನ ಪ್ರತಿಕೃತಿ ಸುಡುವ ಸಂಪ್ರದಾಯ ಚಾಲ್ತಿಯಲ್ಲಿದೆ. ಇದಕ್ಕೆ ಕಾರಣವೂ ಇದೆ. ರಾವಣ ಕೆಟ್ಟವನು. ಹೀಗಾಗಿ ಸಮಾಜದ ದುಷ್ಟಶಕ್ತಿಗಳು ನಾಶವಾಗಲಿ ಎಂದು ಸಾಂಕೇತಿಕವಾಗಿ ರಾವಣನ ಪ್ರತಿಕೃತಿ ಸುಡಲಾಗುತ್ತದೆ. ರಾಮನ ಪಾತ್ರ ಮಾಡಿರುವುದರಿಂದ ಪ್ರಭಾಸ್ ಅವರು ರಾವಣನ ಪ್ರತಿಕೃತಿ ಸುಡಲು ಮುಂದಾಗಿದ್ದಾರೆ.

ದೆಹಲಿಯಲ್ಲಿ ಲವ್​ ಕುಶ್ ರಾಮ್​ಲೀಲಾ ಸಮಿತಿ ಪ್ರತಿವರ್ಷ ದಸರಾ ಆಚರಿಸುತ್ತದೆ. 10 ದಿನಗಳ ಕಾಲ ಈ ಆಚರಣೆ ಇರುತ್ತದೆ. ಕೊನೆಯ ದಿನ ರಾವಣನ ಪ್ರತಿಕೃತಿ ದಹನ ಮಾಡಲಾಗುತ್ತದೆ. ಈ ಬಾರಿ ಪ್ರಭಾಸ್ ಅವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ರಾವಣನ ಪ್ರತಿಕೃತಿಯನ್ನು ಅವರೇ ದಹನ ಮಾಡಲಿದ್ದಾರೆ. ಸೆಪ್ಟೆಂಬರ್ 26ರಿಂದ ಅಕ್ಟೋಬರ್ 5ರವರೆಗೆ ಕಾರ್ಯಕ್ರಮ ನಡೆಯಲಿದೆ.

ಲವ್​ ಕುಶ್ ರಾಮ್​ಲೀಲಾ ಸಮಿತಿಯ ಮುಖ್ಯಸ್ಥ ಅರ್ಜುನ್​ ಕುಮಾರ್ ಅವರು ಈ ಬಗ್ಗೆ ಎಎನ್​ಐಗೆ ಮಾಹಿತಿ ನೀಡಿದ್ದಾರೆ. ‘ಪ್ರಭಾಸ್ ಅವರು ‘ಆದಿಪುರುಷ್​’ ಚಿತ್ರದಲ್ಲಿ ರಾಮನ ಪಾತ್ರ ಮಾಡಿದ್ದಾರೆ. ಈ ಕಾರಣಕ್ಕೆ ರಾವಣನ ಸುಡಲು ಅವರು ಸೂಕ್ತ ವ್ಯಕ್ತಿ ಎನಿಸಿತು. ಹೀಗಾಗಿ, ಅವರಿಗೆ ಆಹ್ವಾನ ನೀಡಿದ್ದೇವೆ. ಪ್ರತಿ ವರ್ಷದಂತೆ ಈ ಬಾರಿಯೂ ರಾವಣ, ಕುಂಭಕರ್ಣ ಹಾಗೂ ಇಂದ್ರಜಿತ್​ ಪ್ರತಿಕೃತಿ ಇರುತ್ತದೆ. ಬಾಣದ ತುದಿಗೆ ಬೆಂಕಿ ಅಂಟಿಸಿಕೊಂಡು ಬಿಲ್ಲಿನಿಂದ ಬಾಣವನ್ನು ಬಿಟ್ಟು ಪ್ರತಿಕೃತಿಯನ್ನು ಪ್ರಭಾಸ್ ಸುಡುತ್ತಾರೆ’ ಎಂದಿದ್ದಾರೆ ಅವರು.

TV9 Kannada


Leave a Reply

Your email address will not be published.