Prashanth Neel Birthday: ಬೆಂಗಳೂರಿಗೆ ಬಂದು ಪ್ರಶಾಂತ್​ ನೀಲ್​ ಬರ್ತ್​ಡೇ ಪಾರ್ಟಿಯಲ್ಲಿ ಭಾಗಿಯಾದ ಪ್ರಭಾಸ್​ | Prashanth Neel Birthday: Prabhas and Yash attend Prashanth Neel Birthday party in Bengaluru


Prashanth Neel Birthday: ಬೆಂಗಳೂರಿಗೆ ಬಂದು ಪ್ರಶಾಂತ್​ ನೀಲ್​ ಬರ್ತ್​ಡೇ ಪಾರ್ಟಿಯಲ್ಲಿ ಭಾಗಿಯಾದ ಪ್ರಭಾಸ್​

ಪ್ರಶಾಂತ್ ನೀಲ್, ಪ್ರಭಾಸ್, ಯಶ್, ವಿಜಯ್ ಕಿರಗಂದೂರು

Prashanth Neel | Prabhas: ಪ್ರಭಾಸ್​, ಯಶ್​, ವಿಜಯ್​ ಕಿರಗಂದೂರು ಮುಂತಾದವರು ಸೇರಿಕೊಂಡು ಪ್ರಶಾಂತ್​ ನೀಲ್​ ಅವರ ಬರ್ತ್​ಡೇ ಸೆಲೆಬ್ರೇಟ್​ ಮಾಡಿದ್ದಾರೆ. ಈ​ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

ನಿರ್ದೇಶಕ ಪ್ರಶಾಂತ್​ ನೀಲ್​ (Prashanth Neel) ಅವರು ಈಗ ಕನ್ನಡಕ್ಕೆ ಮಾತ್ರ ಸೀಮಿತವಲ್ಲ. ದೇಶಾದ್ಯಂತ ಅವರ ಖ್ಯಾತಿ ಹಬ್ಬಿದೆ. ಪರಭಾಷೆಯ ಸ್ಟಾರ್​ ಕಲಾವಿದರ ಜೊತೆ ಅವರು ಸಿನಿಮಾ ಮಾಡುತ್ತಿದ್ದಾರೆ. ಈ ಪರಿ ಹವಾ ಮಾಡಿರುವ ಪ್ರಶಾಂತ್​ ನೀಲ್​ ಅವರಿಗೆ ಇಂದು (ಜೂನ್​ 4) ಜನ್ಮದಿನದ ಸಂಭ್ರಮ. ಅವರ ಬರ್ತ್​ಡೇ (Prashanth Neel Birthday) ಪಾರ್ಟಿಯನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಯ ವಿಜಯ್​ ಕಿರಗಂದೂರು, ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ನಟ ಯಶ್​ ಸೇರಿದಂತೆ ಅನೇಕರು ಈ ಪಾರ್ಟಿಯಲ್ಲಿ ಭಾಗಿ ಆಗಿದ್ದಾರೆ. ಪ್ರಶಾಂತ್ ನೀಲ್ ಅವರ ಹುಟ್ಟುಹಬ್ಬಕ್ಕಾಗಿ ಟಾಲಿವುಡ್​ ಸ್ಟಾರ್​ ನಟ ಪ್ರಭಾಸ್​ (Prabhas) ಅವರು ಹೈದರಾಬಾದ್​ನಿಂದ ಬೆಂಗಳೂರಿಗೆ ಬಂದಿದ್ದಾರೆ ಎಂಬುದು ವಿಶೇಷ. ಸದ್ಯ ಬರ್ತ್​ಡೇ ಸೆಲೆಬ್ರೇಷನ್​ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಎಲ್ಲರೂ ಪ್ರಶಾಂತ್​ ನೀಲ್​ ಅವರಿಗೆ ಶುಭ ಕೋರುತ್ತಿದ್ದಾರೆ.

‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾ ಹಿಟ್​ ಆದಾಗಲೇ ಪ್ರಶಾಂ​ತ್​ ನೀಲ್​ ಮೇಲೆ ಪರಭಾಷೆ ಮಂದಿ ಕಣ್ಣಿಟ್ಟರು. ಪ್ರಭಾಸ್​ ಜೊತೆ ‘ಸಲಾರ್​’ ಸಿನಿಮಾ ಮಾಡುವ ಅವಕಾಶ ಅವರಿಗೆ ಸಿಕ್ಕಿತು. ಈ ಚಿತ್ರದಿಂದಾಗಿ ಪ್ರಭಾಸ್​ ಮತ್ತು ಪ್ರಶಾಂತ್​ ನೀಲ್​ ನಡುವೆ ಸಖತ್​ ಆತ್ಮೀಯತೆ ಬೆಳೆದಿದೆ. ತಮ್ಮ ಸಿನಿಮಾದ ನಿರ್ದೇಶಕನ ಬರ್ತ್​ಡೇ ಮಾಡಲು ಅವರು ಹೈದರಾಬಾದ್​ನಿಂದ ಬೆಂಗಳೂರಿಗೆ ಬಂದಿದ್ದಾರೆ. ಈ ವಿಷಯವನ್ನು ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಯು ಸೋಶಿಯಲ್​ ಮೀಡಿಯಾ ಮೂಲಕ ತಿಳಿಸಿದೆ.

‘ಕೆಜಿಎಫ್​: ಚಾಪ್ಟರ್​ 2​’ ಸಿನಿಮಾಗೆ 50 ಡೇಸ್​ ಸಂಭ್ರಮ:

ಪ್ರಶಾಂತ್​ ನೀಲ್​ ಅವರ ಹುಟ್ಟುಹಬ್ಬದ ಸಲುವಾಗಿ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ತಂಡದವರು ಒಂದೆಡೆ ಸೇರಿದ್ದಾರೆ. ಈ ಚಿತ್ರ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ನಿರ್ದೇಶಕರ ಬರ್ತ್​ಡೇ ಸೆಲೆಬ್ರೇಷನ್​ ಜೊತೆಯಲ್ಲಿ ‘ಕೆಜಿಎಫ್​ 2’ ಚಿತ್ರದ 50 ಡೇಸ್​ ಸಂಭ್ರಮವನ್ನೂ ಆಚರಿಸಲಾಗಿದೆ. ವಿಶೇಷವಾದ ಕೇಕ್​ ಕತ್ತರಿಸುವ ಮೂಲಕ ಖುಷಿ ಹಂಚಲಾಗಿದೆ. ಈ ಕಾರಣದಿಂದ ಪ್ರಶಾಂತ್​ ನೀಲ್​ ಅವರಿಗೆ ಹುಟ್ಟುಹಬ್ಬ ಸ್ಪೆಷಲ್​ ಎನಿಸಿದೆ. ಸದ್ಯ ಅವರ ಕೈಯಲ್ಲಿ ಮಹತ್ವದ ಪ್ರಾಜೆಕ್ಟ್​ಗಳಿಗೆ. ಜ್ಯೂ. ಎನ್​ಟಿಆರ್​ ನಟನೆಯ ಹೊಸ ಚಿತ್ರಕ್ಕೆ ಅವರು ನಿರ್ದೇಶನ ಮಾಡಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *