Pregnancy: ಬೇಸಿಗೆಯಲ್ಲಿ ಗರ್ಭಿಣಿಯರು ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಸಲಹೆಗಳು | Tips for stay cool in summer during pregnancy


Pregnancy: ಗರ್ಭಾವಸ್ಥೆಯ ಸಮಯದಲ್ಲಿ ಎಷ್ಟು ಜಾಗ್ರತೆಯಿಂದಿದ್ದರೂ ಕಡಿಮೆಯೇ, ಈ ಸಂದರ್ಭದಲ್ಲಿ ಗರ್ಭಿಣಿಯರು ತಮ್ಮ ಆರೋಗ್ಯ ಕಾಳಜಿಯ ಜೊತೆಗೆ ತಮ್ಮ ದೇಹದ ತಾಪಮಾನ ಸರಿಯಾಗಿ ಕಾಯ್ದುಕೊಳ್ಳುವುದೂ ಮುಖ್ಯವಾಗುತ್ತದೆ.

ಗರ್ಭಾವಸ್ಥೆಯ ಸಮಯದಲ್ಲಿ ಎಷ್ಟು ಜಾಗ್ರತೆಯಿಂದಿದ್ದರೂ ಕಡಿಮೆಯೇ, ಈ ಸಂದರ್ಭದಲ್ಲಿ ಗರ್ಭಿಣಿಯರು ತಮ್ಮ ಆರೋಗ್ಯ ಕಾಳಜಿಯ ಜೊತೆಗೆ ತಮ್ಮ ದೇಹದ ತಾಪಮಾನ ಸರಿಯಾಗಿ ಕಾಯ್ದುಕೊಳ್ಳುವುದೂ ಮುಖ್ಯವಾಗುತ್ತದೆ. ಗರ್ಭಿಣಿಯರು ಬೇಸಿಗೆ(Summer) ಸಮಯದಲ್ಲಿ ತಮ್ಮ ದೇಹದ ಆರೋಗ್ಯಕ್ಕೆ ಪೂರಕವಾದ ಸಲಹೆಗಳನ್ನು ಅನುಸರಿಸುವುದು ಬಹಳ ಮುಖ್ಯವಾಗುತ್ತದೆ.

ಗರ್ಭಾವಸ್ಥೆಯ ಸಂದರ್ಭದಲ್ಲಿ ಎಷ್ಟು ಜೋಪಾನವಾಗಿದ್ದರೂ ಕಡಿಮೆಯೇ. ಏಕೆಂದರೆ ತಮ್ಮ ದೇಹದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಅದು ನೇರವಾಗಿ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ತಾವು ಸೇವಿಸುವ ಆಹಾರದ ಜೊತೆಗೆ ತಾವು ತೊಡುವ ಬಟ್ಟೆಗಳ ಬಗ್ಗೆಯೂ ಜಾಗೃತಿ ವಹಿಸಬೇಕಾದುದು ಮುಖ್ಯವಾಗುತ್ತದೆ.

ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಸಲಹೆ

ನಿಮಗೆ ಕಂಫರ್ಟ್​ ಎನಿಸುವ ಬಟ್ಟೆಗಳನ್ನು ತೊಡಿ: ಗರ್ಭದೊಳಗೆ ಮಗುವಿರುವ ಕಾರಣ ಪ್ರತಿ ತಿಂಗಳು ನಿಮ್ಮ ದೇಹ ಹೆಚ್ಚು ದಪ್ಪವಾಗುತ್ತಾ ಹೋಗುತ್ತದೆ. ಈ ಸಮಯದಲ್ಲಿ ನಿಮ್ಮ ದೇಹಕ್ಕೆ ಸರಿಹೊಂದುವಂತಹ ಹತ್ತಿ ಬಟ್ಟೆಗಳನ್ನು ಹೆಚ್ಚಾಗಿ ಬಳಸಿ. ಗಾಳಿಯ ಸಂವಹನ ಇರುವ ತೆಳ್ಳಗಿನ ಬಟ್ಟೆಗಳನ್ನು ಹೆಚ್ಚಾಗಿ ಹಾಕಿಕೊಳ್ಳಿ. ಚಪ್ಪಲಿಗಳನ್ನು ಹಾಕಿಕೊಳ್ಳಿ.

ಗರ್ಭಾವಸ್ಥೆಯ ಸಮಯದಲ್ಲಿ ತುಂಬಾ ಬಿಗಿಯಾದ ವಸ್ತ್ರಗಳನ್ನು ತೊಡುವುದರಿಂದ ದೇಹದ ಚರ್ಮದ ಮೇಲೆ ಬೆವರಿನ ತೇವಾಂಶ ಹೆಚ್ಚಾಗಿ ದೇಹಕ್ಕೆ ಇನ್ನಷ್ಟು ಬಿಸಿ ವಾತಾವರಣ ನಿರ್ಮಾಣವಾಗುತ್ತದೆ. ಜೊತೆಗೆ ಈ ಸಮಯದಲ್ಲಿ ಹಾರ್ಮೋನುಗಳ ವ್ಯತ್ಯಾಸದಿಂದ ಗರ್ಭಿಣಿಯರಿಗೆ ಬಹಳಷ್ಟು ಬೆವರಿನ ಅಂಶ ದೇಹದಿಂದ ಹೊರಬರುತ್ತದೆ.

ಹೆಚ್ಚು ನೀರನ್ನು ಕುಡಿಯಿರಿ: ಬೇಸಿಗೆಯಲ್ಲಿ ಅಧಿಕ ನೀರನ್ನು ಸೇವಿಸುವುದರ ಮೂಲಕ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹಾಗೂ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳುವುದು ಹೆಚ್ಚು ಮುಖ್ಯವಾಗುತ್ತದೆ. ಬಾಯಾರಿಕೆ ಆಗದೆ ಇದ್ದರೂ ಪದೇ ಪದೇ ನೀರು ಅಥವಾ ದ್ರವ ಪದಾರ್ಥಗಳನ್ನು ಸೇವಿಸುತ್ತಲೇ ಇರಬೇಕು.

ರಸ ಭರಿತ ಅಥವಾ ನೀರಿನಿಂದ ಕೂಡಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗದಂತೆ ತಡೆಯಬಹುದು. ಅಲ್ಲದೆ ದೇಹವು ತಂಪಾಗಿರುತ್ತದೆ. ಜೊತೆಗೆ ಪಚನ ಕ್ರಿಯೆಗಳು ಸುಲಭವಾಗಿ ನೆರವೇರುತ್ತವೆ.

ತಾಪಮಾನದಿಂದ ದೂರ ಉಳಿಯಲು ಸ್ನಾನ ಮಾಡಿ: ಸೆಕೆಯಿಂದ ದೂರ ಉಳಿಯಲು ಸ್ನಾನ ಮಾಡಿ. ಬೆಳಿಗ್ಗೆ ಎದ್ದ ಕೂಡಲೇ ಹಾಗೂ ರಾತ್ರಿ ಮಲಗುವ ಮುನ್ನ ಸ್ನಾನ ಮಾಡುವುದರಿಂದ ಇದು ನಿಮ್ಮನ್ನು ರಿಫ್ರೆಶ್ ಮಾಡುತ್ತದೆ.

ಹೆಚ್ಚು ಪ್ರಯಾಣ ಬೇಡ: ಮನೆಯಲ್ಲಿ ಹೆಚ್ಚು ಓಡಾಟದ ಕೆಲಸ ಮಾಡುವುದು, ಭಾರವಾದ ಚೀಲ ಅಥವಾ ವಸ್ತುವನ್ನು ಎತ್ತುವಂತಹ ಕೆಲಸವನ್ನು ಮಾಡಬಾರದು. ನಿಮಗೆ ಅಗತ್ಯ ವಸ್ತುಗಳನ್ನು ಎತ್ತುವಾಗ ಮನೆ ಮಂದಿಯ ಬಳಿ ಅಥವಾ ನಿಮ್ಮ ಹತ್ತಿರ ಇರುವ ವ್ಯಕ್ತಿಯಿಂದ ಸಹಾಯವನ್ನು ಪಡೆದುಕೊಳ್ಳಿ. ದೂರದ ಪ್ರಯಾಣ ಬೇಡ.

ವಿಶ್ರಾಂತಿ ಮುಖ್ಯ: ಒಮ್ಮೊಮ್ಮೆ ಮಾನಸಿಕ ಒತ್ತಡ, ಉದ್ವೇಗ ಉಂಟಾಗಬಹುದು, ಇವುಗಳನ್ನು ಪರಿಣಾಮಕಾರಿಯಾಗಿ ಇವುಗಳನ್ನು ನಿರ್ವಹಿಸುವಂತಹ ಛಲ ನಿಮ್ಮಲ್ಲಿ ಇರುತ್ತದೆ. ವಿಶ್ರಾಂತಿ ಎಂದರೆ ತಕ್ಷಣ ಮಲಗಿರಬೇಕು ಎಂದಲ್ಲ. ಕುಳಿತುಕೊಂಡು ಆರಾಮವಾಗಿ ಟಿವಿಯಲ್ಲಿ ಬರುವ ಮನಸ್ಸಿಗೆ ಹಿತವೆನಿಸುವ ಕಾರ್ಯ ಕ್ರಮಗಳನ್ನು ನೋಡುವುದು ಕೂಡ ಆಗಿರಬಹುದು

ಆಹಾರದ ಮೇಲೆ ಕಾಳಜಿ ವಹಿಸಿ: ತಡವಾಗಿ ಊಟ ಮಾಡದಿರಿ. ಲಘುವಾಗಿ ತಿನ್ನಿ.  ಬೆಳಗಿನ ಉಪಾಹಾರವು ಸಂಪೂರ್ಣ ಮತ್ತು ಪೌಷ್ಟಿಕವಾಗಿರಬೇಕು. ಗರ್ಭಾವಸ್ಥೆಯ ಸಮಯದಲ್ಲಿ ದಿನಕ್ಕೆ ಐದು ಬಾರಿ ಊಟ ಮಾಡುವುದು ಉತ್ತಮ. ಇವುಗಳಲ್ಲಿ ಕನಿಷ್ಠ ಒಂದು ಅಥವಾ ಎರಡು ಹಣ್ಣುಗಳು ಮತ್ತು ತರಕಾರಿಗಳು ಇರಬೇಕು.. ಪ್ರೋಟೀನ್ ಯುಕ್ತ ಆಹಾರ ಸೇವನೆ ಮಾಡುವುದನ್ನು ಮರೆಯದಿರಿ.

ಗರ್ಭಿಣಿಯರು ಅನುಭವಿಸುವ ತೊಂದರೆಗಳು

ಉಸಿರಾಟದ ತೊಂದರೆ
ಬೆಳೆಯುತ್ತಿರುವ ಗರ್ಭಾಶಯವು ಶ್ವಾಸಕೋಶವನ್ನು ಸಂಕುಚಿತಗೊಳಿಸುತ್ತದೆ. ಇದು ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ. ವಾತಾವರಣದಲ್ಲಿ ತಾಪಮಾನ ಹೆಚ್ಚಾದಾಗಲೂ ಗರ್ಭಿಣಿ ಮಹಿಳೆಯರಲ್ಲಿ ಉಸಿರುಗಟ್ಟುತ್ತಿರುವ ಭಾಸವಾಗುತ್ತದೆ. ಮುಖ್ಯವಾಗಿ ಮಲಗಿರುವ ಸಂದರ್ಭದಲ್ಲಿ ಉಸಿರಾಟ ಸಮಸ್ಯೆಯಾಗುತ್ತಿರುವುದು ಕಂಡು ಬರುತ್ತದೆ.

ವಾಕರಿಕೆ: ಶೇ.60-70ರಷ್ಟು ಗರ್ಭಿಣಿಯರು ಗರ್ಭಾವಸ್ಥೆಯ ಸಂದರ್ಭದಲ್ಲಿ ವಾಕರಿಕೆಯನ್ನು ಎದುರಿಸುತ್ತಾರೆ. ಅತಿಯಾದ ವಾಂತಿ ದೇಹ ನಿರ್ಜಲೀಕರಣ ಮತ್ತು ದೌರ್ಬಲ್ಯಕ್ಕೆ ಕಾರಣವಾಗಬಹುದು, ಕೆಲವೊಮ್ಮೆ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿಯನ್ನೂ ಎದುರು ಮಾಡಲಿದೆ. ಈ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು.

ಕಾಲು ಊತ: ಇದು ಅಧಿಕ ರಕ್ತದೊತ್ತಡದ ಸಂಕೇತವೂ ಆಗಿರಬಹುದು. ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ವಿಶ್ರಾಂತಿ ಬಳಿಕವೂ ಊತ ಕಡಿಮೆಯಾಗದಿದ್ದರೆ, ವೈದ್ಯರ ಭೇಟಿ ಮಾಡುವುದು ಮುಖ್ಯವಾಗುತ್ತದೆ.ಗರ್ಭಧಾರಣೆಯ ಮೊದಲ ಮೂರು ತಿಂಗಳ ನಂತರ ಪಾದಗಳು ಮತ್ತು ಕಾಲುಗಳಲ್ಲಿ ದ್ರವದ ಸಂಗ್ರಹವಾಗುತ್ತದೆ. ಇದರಿಂದ ಪಾದಗಳು, ಕಾಲುಗಳು, ಬೆರಳುಗಳು ಹಾಗೂ ಮುಖದಲ್ಲಿ ಹಠಾತ್ ಊತಗಳಾಗುತ್ತಿರುವುದು ಕಂಡು ಬರುತ್ತದೆ.

ಈ ಮೇಲಿನ ಲೇಖನವು ಟಿವಿ 9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನಾಧರಿಸಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *