Preity Zinta: ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳಿಗೆ ಪೋಷಕರಾದ ಪ್ರೀತಿ ಜಿಂಟಾ ದಂಪತಿ | Preity Zinta and Gene Goodenough welcomes twins Jai and Gia through surrogacy


Preity Zinta: ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳಿಗೆ ಪೋಷಕರಾದ ಪ್ರೀತಿ ಜಿಂಟಾ ದಂಪತಿ

ಪ್ರೀತಿ ಜಿಂಟಾ ಮತ್ತು ಜಿನ್ ಗುಡ್​ಎನಾಫ್

ಬಾಲಿವುಡ್ ನಟಿ ಪ್ರೀತಿ ಜಿಂಟಾ (Preity Zinta) ತಾಯಿಯಾಗಿದ್ದು, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಬಾಡಿಗೆ ತಾಯ್ತನದ (Surrogacy) ಮೂಲಕ ಪ್ರೀತಿ ಜಿಂಟಾ ಹಾಗೂ ಅವರ ಪತಿ ಜಿನ್ ಗುಡ್​ಎನಾಫ್ (Gene Goodenough) ಅವಳಿ- ಜವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ. ಮಕ್ಕಳಿಗೆ ಜೈ ಜಿಂಟಾ ಗುಡ್​​ಎನಾಫ್ (Jai Zinta Goodenough) ಹಾಗೂ ಜಿಯಾ ಜಿಂಟಾ ಗುಡ್​​ಎನಾಫ್ (Gia Zinta Goodenough) ಎಂದು ನಾಮಕರಣ ಮಾಡಲಾಗಿದೆ. ಈ ಕುರಿತಂತೆ ಬರೆದುಕೊಂಡಿರುವ ಪ್ರೀತಿ ಜಿಂಟಾ, ‘‘ಎಲ್ಲರಿಗೂ ನಮಸ್ಕಾರ, ಎಲ್ಲರೊಂದಿಗೆ ಈ ಸಂತಸದ ಸುದ್ದಿಯನ್ನು ಹಂಚಿಕೊಳ್ಳಲು ಖುಷಿಯಾಗುತ್ತಿದೆ. ಬಹಳ ಪ್ರೀತಿಯಿಂದ ನಾವು ಜೈ ಜಿಂಟಾ ಗುಡ್​​ಎನಾಫ್ ಹಾಗೂ ಜಿಯಾ ಜಿಂಟಾ ಗುಡ್​ಎನಾಫ್​​ರನ್ನು ಕುಟುಂಬಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ’’ ಎಂದು ಬರೆದಿದ್ದಾರೆ.

ಪ್ರೀತಿ ಜಿಂಟಾ ಹಂಚಿಕೊಂಡ ಪೋಸ್ಟ್:

ಜೀವನದ ಹೊಸ ಪಯಣದ ಕುರಿತಂತೆ ಸಂತಸ ಹಂಚಿಕೊಂಡಿರುವ ಪ್ರೀತಿ, ‘‘ಈ ಹೊಸ ಪಯಣಕ್ಕೆ ಬಹಳ ಕಾತರದಿಂದ ಕಾಯುತ್ತಿದ್ದೇವೆ. ಮಕ್ಕಳನ್ನು ಪಡೆಯಲು ನೆರವಾದ ವೈದ್ಯರು, ನರ್ಸ್ ಮತ್ತು ಬಾಡಿಗೆ ತಾಯಿಗೆ (Surrogate) ತುಂಬು ಹೃದಯದ ಕೃತಜ್ಞತೆಗಳು’’ ಎಂದು ತಿಳಿಸಿದ್ದಾರೆ.

ಪೋಷಕರಾಗಲು ನೆರವಾದವರಿಗೆ ಧನ್ಯವಾದ ಸಲ್ಲಿಸಿದ ಪ್ರೀತಿ ಜಿಂಟಾ ದಂಪತಿ:

ಪ್ರೀತಿ ಜಿಂಟಾ ಬಾಲಿವುಡ್​ಗೆ ಕಾಲಿಟ್ಟು ಈ ವರ್ಷದ ಆಗಸ್ಟ್​ಗೆ 23 ವರ್ಷಗಳು ಸಂದಿವೆ. ಜಿನ್ ಗುಡ್​​ಎನಾಫ್ ಅವರೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ನಂತರ ಪ್ರೀತಿ ಬೆಳ್ಳಿತೆರೆಯಿಂದ ದೂರ ಉಳಿದಿದ್ಧಾರೆ.  ಆದರೆ ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲರಾಗಿರುವ ಅವರು, ತಮ್ಮ ಕುಟುಂಬದ ಚಿತ್ರಗಳನ್ನು ಹಂಚಿಕೊಳ್ಳುತ್ತಾ, ಅಭಿಮಾನಿಗಳೊಂದಿಗೆ ಸತತ ಸಂಪರ್ಕದಲ್ಲಿರುತ್ತಾರೆ.

ಇದನ್ನೂ ಓದಿ:

ರಸ್ತೆ ಮಧ್ಯೆ ನಿಂತು ₹50,000ಕ್ಕೆ ಮಗುವನ್ನು ಮಾರುವುದಾಗಿ ಕೂಗಿದ ಪಾಕ್ ಪೊಲೀಸ್; ಹೃದಯ ಕಲುಕುವ ಈ ಘಟನೆ ಹಿಂದಿರುವ ಕತೆಯೇನು?

Shyam Singha Roy Teaser: ಶ್ಯಾಮ್ ಸಿಂಗಾ ರಾಯ್ ಟೀಸರ್ ರಿಲೀಸ್; ನಾನಿ, ಸಾಯಿ ಪಲ್ಲವಿ ನಟನೆಗೆ ಫ್ಯಾನ್ಸ್ ಫಿದಾ

TV9 Kannada


Leave a Reply

Your email address will not be published. Required fields are marked *