ರಾಜ್ಯಪಾಲರ ವಿನೂತನ ಉಪಕ್ರಮದಿಂದ, ಸಾಮಾನ್ಯ ಜನರಲ್ಲಿ ಸಾಂವಿಧಾನಿಕ ಅರಿವು ಮೂಡಿಸಲು ರಾಜಭವನದಲ್ಲಿ ಸಂವಿಧಾನ ಉದ್ಯಾನವನ್ನು ಸ್ಥಾಪಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ರಾಜಸ್ಥಾನ ಪಾತ್ರವಾಗಿದೆ.

ಜೈಪುರದಲ್ಲಿ ಸಂವಿಧಾನ ಉದ್ಯಾನ ಉದ್ಘಾಟಿಸಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು
ಜೈಪುರ: ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರು ಜನವರಿ 3 ರಂದು ರಾಜಭವನದಲ್ಲಿ ಹೊಸದಾಗಿ ನಿರ್ಮಿಸಲಾದ ಸಂವಿಧಾನ ಉದ್ಯಾನ (Constitution Park)ವನ್ನು ಉದ್ಘಾಟಿಸಲಿದ್ದಾರೆ. ಜೈಪುರ ಅಭಿವೃದ್ಧಿ ಪ್ರಾಧಿಕಾರವು 9 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಿರುವ ಈ ಉದ್ಯಾನವನವು ಸಂವಿಧಾನದ ರಚನೆಯಿಂದ ಅದರ ಅನುಷ್ಠಾನದವರೆಗಿನ ಪ್ರತಿಮೆಗಳು ಮತ್ತು ಚಿತ್ರಗಳ ಮೂಲಕ ಅದರ ಪ್ರಯಾಣವನ್ನು ಪ್ರದರ್ಶಿಸುತ್ತದೆ ಎಂದು ರಾಜಭವನದ ವಕ್ತಾರರು ತಿಳಿಸಿದ್ದಾರೆ. ರಾಜ್ಯಪಾಲರ ವಿನೂತನ ಉಪಕ್ರಮದಿಂದ, ಸಾಮಾನ್ಯ ಜನರಲ್ಲಿ ಸಾಂವಿಧಾನಿಕ ಅರಿವು ಮೂಡಿಸಲು ರಾಜಭವನದಲ್ಲಿ ಸಂವಿಧಾನ ಉದ್ಯಾನವನ್ನು ಸ್ಥಾಪಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ರಾಜಸ್ಥಾನ (Rajasthan) ಪಾತ್ರವಾಗಿದೆ.
ಕಾರ್ಯಕ್ರಮದಲ್ಲಿ ರಾಷ್ಟ್ರಪತಿಯವರು ಕಥೋಡಿ ಮತ್ತು ಸಹರಿಯಾ ಬುಡಕಟ್ಟು ಜನಾಂಗದವರೊಂದಿಗೆ ಸಂವಾದ ನಡೆಸಲಿದ್ದಾರೆ. ರಾಜ್ಯಪಾಲ ಕಲ್ರಾಜ್ ಮಿಶ್ರಾ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ವಿಧಾನಸಭಾಧ್ಯಕ್ಷ ಡಾ.ಸಿ.ಪಿ.ಜೋಶಿ, ನಗರಾಭಿವೃದ್ಧಿ ಮತ್ತು ವಸತಿ ಸಚಿವ ಶಾಂತಿ ಧರಿವಾಲ್ ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಿಶ್ರಾ, ಗೆಹ್ಲೋಟ್ ಮತ್ತು ಜೋಶಿ ಅವರು 2022ರ ಜನವರಿ 26 ರಂದು ಸಂವಿಧಾನ ಉದ್ಯಾನದ ಅಡಿಪಾಯವನ್ನು ಹಾಕಿದ್ದರು.