ಮದಗಜ.. ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಹುನಿರೀಕ್ಷಿತ ಸಿನಿಮಾ.. ಟೈಟಲ್ ಟ್ರ್ಯಾಕ್ ಹಾಗೂ ಜಬರ್ದಸ್ತ್ ಟ್ರೈಲರ್ನಿಂದ ಸಖತ್ ಸದ್ದು ಮಾಡ್ತಿದ್ದಾರೆ ರೋರಿಂಗ್ ಸ್ಟಾರ್ ಶ್ರೀಮುರಳಿ. ಮದಗಜ ಟ್ರೈಲರ್ ಲಾಂಚ್ ಇವೆಂಟ್ನಲ್ಲಿ ಒಂದು ಕುತೂಹಲದ ವಿಚಾರವನ್ನ ಹೊರ ಬಿಟ್ಟಿದ್ದಾರೆ ರೋರಿಂಗ್ ಸ್ಟಾರ್. ಹೊಸ ಪ್ರತಿಭೆಗಳಿಗೆ ಅದ್ಭುತ ವೇದಿಕೆಯನ್ನ ಕಲ್ಪಿಸಲು ಅಪ್ಪು ಸೃಷ್ಟಿ ಮಾಡಿರುವ ಪಿ.ಆರ್.ಕೆಯಲ್ಲಿ ರೋರಿಂಗ್ ಸ್ಟಾರ್ ಮಿಂಚು ಬರಲಿದೆ. ಈ ಬಗ್ಗೆ ಒಂದು ಸ್ಪೆಷಲ್ ಸ್ಟೋರಿ ನಿಮಗಾಗಿ.
ಎಲ್ಲರೂ ಅಪ್ಪನಂತೆ ಆಗಬೇಕು ಅನ್ಕೋಂಡ್ರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಮ್ಮನಂತೆ ಅನ್ನದಾತೆಯಾಗುವಂತಹ ಪ್ರೋಡ್ಯೂಸರ್ ಆಗಬೇಕು ಅಂದುಕೊಂಡವರು ಪುನೀತ್ ರಾಜ್ ಕುಮಾರ್. ಅದಂತೆ ನಿರ್ಮಾಪಕನಾಗಿ ಪ್ರೊಡಕ್ಷನ್ ಹೌಸ್ ಒಂದನ್ನ ಓಪನ್ ಮಾಡಿದ್ರು.. ಆ ಪ್ರೋಡಕ್ಷನ್ ಹೌಸೇ ಪಿ. ಆರ್.ಕೆ.. ಪಿ.ಆರ್.ಕೆಯನ್ನ. ಪುನೀತ್ ರಾಜ್ ಕುಮಾರ್ ಅಂತನೂ ಅನ್ಕೋ ಬಹುದು.. ಪಾರ್ವತಮ್ಮ ರಾಜ್ ಕುಮಾರ್ ಅಂತನೂ ಅನ್ಕೋ ಬಹುದು.
MADHAGAJA OFFICIAL TRAILER… https://t.co/QPxsuhSqT6 …pls watch,Share and support.Thank you . Goodday everyone 🙏🏼 pic.twitter.com/J6lgXi73LX
— #SRIIMURALI (@SRIMURALIII) November 20, 2021
ಹೊಸ ಹೊಸ ಪ್ರತಿಭೆಗಳಿಗೆ ರತ್ನಗಂಬಳಿಯ ಸ್ವಾಗತವನ್ನ ಕೊಟ್ಟು ಪ್ರತಿಭೆಗೆ ತಕ್ಕ ಅವಕಾಶದ ಬಂಡವಾಳ ಆಗುತ್ತಿದ್ದರು ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್.. ಈಗ ಅವರಿಲ್ಲದೆ ಅವರ ಕನಸನ್ನ ಮುಂದುವರೆಸಿಕೊಂಡು ಹೋಗುವ ಮನಸುಗಳ ಬೇಕಿದೆ.. ಪುನೀತ್ ರಾಜ್ ಕುಮಾರ್ ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅಪ್ಪು ಅವರ ಕನಸನ್ನ ಮುಂದುವರೆಸಲು ಹೊಸ ಹೊಸ ಪ್ರತಿಭೆಗಳಿಗೆ ಅವಕಾಶದ ದಾರಿ ದೀಪವಾಗಲು ನಿರ್ಧರಿಸಿದ್ದಾರೆ.
ರೈಮ್ಸ್ ಅನ್ನೋ ಸಿನಿಮಾದ ಆಡಿಯೋ ಲಾಂಚ್ ಶೀಘ್ರದಲ್ಲೆ ಪಿ.ಆರ್.ಕೆ ಆಡಿಯೋ ಬ್ಯಾನರ್ನಡಿ ಆಗಲಿದೆ.. ಈಗ ಮೇನ್ ವಿಷಯಕ್ಕೆ ಬಂದು ಬಿಡೋಣ.. ಪಿ.ಆರ್.ಕೆ ಬ್ಯಾನರ್ನಡಿ ರೋರಿಂಗ್ ಸ್ಟಾರ್ ಶ್ರೀಮುರಳಿ ಸಿನಿಮಾ ಬರುತ್ತಾ? ಈ ಬಗ್ಗೆ ರೋರಿಂಗ್ ಸ್ಟಾರ್ ಚಿತ್ರಪ್ರೇಮಿಗಳೇ ತಂಡದ ಜೊತೆಗೆ ಹೇಳಿದ್ದೇನು ಅನ್ನೋದನ್ನ ಎಳೆ ಎಳೆಯಾಗಿ ಬಿಚ್ಚಿಡ್ತಿವಿ.
Presenting to you… MADHAGAJA 🔱THEATRICAL TEASER… https://t.co/Y8V3wvXZLf #MadhagajaTheatricalTeaser #Madhagaja @umap30071 @SMaheshDirector @AshikaRanganath @RaviBasrur @IamJagguBhai #NaveenGDOP #JaiiiMadhagaja pic.twitter.com/RFNmTTM44k
— #SRIIMURALI (@SRIMURALIII) October 14, 2021
ಮದಗಜ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ನಿರೀಕ್ಷಿತ ಸಿನಿಮಾ.. ಮೊದಲ ಪೋಸ್ಟರ್ನಿಂದಲೇ ನಿರೀಕ್ಷೆ ಋಚಿಯನ್ನ ಹತ್ತಿಸಿದ್ದ ಮದಗಜ ಈಗ ಟೀಸರ್ , ಪೋಸ್ಟರ್ , ಸಾಂಗ್ಸ್ ಹಾಗೂ ಈಗ ಜಬರ್ದಸ್ತ್ ಟ್ರೈಲರ್ನಿಂದ ಕುತೂಹಲದ ಕೋಟೆಯೋಳ ಬೆಚ್ಚನೆ ಇದೆ.. ಮಹೇಶ್ ಕುಮಾರ್ ನಿರ್ದೇಶನದ ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ ಮದಗಜ ಸಿನಿಮಾದ ಟ್ರೈಲರ್ ಲಾಂಚ್ ಆಗಿದ್ದು ನಾಡಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ.
ನೋಡ ನೋಡುತ್ತಿದಂಗೆ ಸಿ.ಎಮ್ ಅವರಿಂದ ಲಾಂಚ್ ಆದ ಮದಗಜ ಟ್ರೈಲರ್ ಲಕ್ಷ ಲಕ್ಷ ವೀಕ್ಷಣೆಯನ್ನ ಪಡೆಯುತ್ತಿದೆ.. ಮದಗಜ ಸಿನಿಮಾದ ಟ್ರೈಲರ್ ಲಾಂಚ್ ಇವೆಂಟ್ನಲ್ಲಿ ಅಪ್ಪು ಅವರ ನೆನಪಿನ ಸ್ಮರಣೆ ಮನಮುಟ್ಟುವ ಹಾಗೆಯೇ ನಡೆಯಿತು.. ಪುನೀತ್ ರಾಜ್ ಕುಮಾರ್ ಅವರ ಭಾವ ಚಿತ್ರಕ್ಕೆ ಶ್ರೀಮುರಳಿ ಮುತ್ತಿಟ್ಟು ಮುದ್ದು ಮಾವನ ರಾಜಕುಮಾರ ಚಿತ್ರ ಹಾಡನ್ನ ಹಾಡಿ ಕಾರ್ಯಕ್ರಮವನ್ನ ಶುರು ಮಾಡಿದ್ದು ನೆರದವರ ಮನದಲ್ಲಿ ಅಪ್ಪು ನೆನಪಿನ ದೀಪವನ್ನ ಪ್ರಜ್ವಲಿಸುವಂತೆ ಮಾಡಿತ್ತು.
ಡಾ.ರಾಜ್ ಕುಮಾರ್ ಕುಟುಂಬ ಯುವರತ್ನನನ್ನ ಕಳೆದುಕೊಂಡು ನೋವಿನಲ್ಲಿದೆ. ಆದ್ರೆ ಕರ್ತವ್ಯವನ್ನ ಮರೆಯ ಬಾರದು.. ನಮ್ಮನ ನಂಬಿ ಹಣ ಹೂಡಿದ ನಿರ್ಮಾಪರಿಗೆ ಲಾಸ್ ಆಗಬಾರದು ಎಂಬುವ ಕಾರಣಕ್ಕೆ ಮದಗಜ ಸಿನಿಮಾದ ಪ್ರೋಮೋಷನ್ ಆಕ್ಟಿವಿಟಿಗೆ ಧುಮುಖಿದ್ದಾರೆ ಶ್ರೀಮುರಳಿ.. ಈ ಸಂದರ್ಭದಲ್ಲಿ ಅಪ್ಪು ಮಾಮನ ಕನಸನ್ನ ನಾವು ನನಸು ಮಾಡಬೇಕು.. ಪಿ.ಆರ್.ಕೆ ನಮ್ದು ಪಿ.ಆರ್.ಕೆಯಲ್ಲಿ ನಾನು ಸಿನಿಮಾ ಮಾಡ್ತಿನಿ ಎಂದು ಭರವಸೆಯ ಮಾತುಗಳನ್ನ ಆಡಿದ್ದಾರೆ ಶ್ರೀಮುರಳಿ.
ಡೌಟೇ ಇಲ್ಲ.. ಪಿ.ಆರ್.ಕೆ ಜೊತೆ ನಾವು ಇರ್ತಿವಿ ಅನ್ನೋ ಸಂದೇಶವನ್ನ ರೋರಿಂಗ್ ಸ್ಟಾರ್ ಶ್ರೀಮುರಳಿ ಸಾರಿದ್ದಾರೆ. ಮುಂಬವರುವ ಡಿಸೆಂಬರ್ 3ನೇ ತಾರೀಖ್ ಪ್ರೇಕ್ಷಕರ ಮುಂದೆ ‘ಮದಗಜ’ನ ಆಗಮನ ಆಗಲಿದೆ.