Pro Kabaddi 2022: ಬೆಂಗಳೂರು ಬುಲ್ಸ್ ವಿರುದ್ದ ಬೆಂಗಾಲ್ ವಾರಿಯರ್ಸ್​ಗೆ ರೋಚಕ ಜಯ | PKL 8: Nabibakhsh’s freak raid helps Bengal Warriors beat Bengaluru Bulls


Pro Kabaddi 2022: ಬೆಂಗಳೂರು ಬುಲ್ಸ್ ವಿರುದ್ದ ಬೆಂಗಾಲ್ ವಾರಿಯರ್ಸ್​ಗೆ ರೋಚಕ ಜಯ

PKL 8

ಪ್ರೋ ಕಬಡ್ಡಿ ಲೀಗ್​ನ 67ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ದ ಬೆಂಗಾಲ್ ವಾರಿಯರ್ಸ್ ರೋಚಕ ಜಯ ಸಾಧಿಸಿದೆ. ಭರ್ಜರಿ ಪೈಪೋಟಿಗೆ ಕಾರಣವಾಗಿದ್ದ ಈ ಪಂದ್ಯದ ಆರಂಭದಲ್ಲಿ ಬೆಂಗಾಲ್ ವಾರಿಯರ್ಸ್ ಮೇಲುಗೈ ಸಾಧಿಸಿತ್ತು. ಅದರಂತೆ ಬ್ಯಾಕ್ ಟು ಬ್ಯಾಕ್ ಪಾಯಿಂಟ್​ ಕಲೆಹಾಕುವ ಮೂಲಕ ಆರಂಭದಲ್ಲೇ 5 ಪಾಯಿಂಟ್​ಗಳಿಸಿತು. ಈ ವೇಳೆ ಹಿಂದೆ ಉಳಿದಿದ್ದ ಬೆಂಗಳೂರು ಬುಲ್ಸ್ ಆ ಬಳಿಕ ಕಂಬ್ಯಾಕ್ ಮಾಡುವಲ್ಲಿ ಯಶಸ್ವಿಯಾದರು. ಅದರಂತೆ ತಂಡದ ಉತ್ತಮ ಹೊಂದಾಣಿಕೆಯ ಆಟದಿಂದಾಗಿ ಮೊದಲಾರ್ಧ ಮುಕ್ತಾಯದ ವೇಳೆಗೆ ಬೆಂಗಳೂರು ಬುಲ್ಸ್ ತಂಡವು 13 ಪಾಯಿಂಟ್ ಕಲೆಹಾಕಿತು. ಈ ವೇಳೆಗೆ ಬೆಂಗಾಲ್ ವಾರಿಯರ್ಸ್ ಗಳಿಸಿದ್ದು 14 ಪಾಯಿಂಟ್ ಮಾತ್ರ.

1 ಪಾಯಿಂಟ್ ಮುನ್ನಡೆ ಪಡೆದಿದ್ದ ಬೆಂಗಾಲ್ ವಾರಿಯರ್ಸ್​ ವಿರುದ್ದ ದ್ವಿತಿಯಾರ್ಧದಲ್ಲಿ ಬೆಂಗಳೂರು ಬುಲ್ಸ್​ ಆರಂಭದಲ್ಲೇ ಶಾಕ್ ನೀಡಿತು. ನಾಯಕ ಪವನ್ ಕುಮಾರ್ ಶೆಹ್ರಾವತ್ ಅತ್ಯುತ್ತಮ ರೈಡಿಂಗ್ ಮೂಲಕ ಬ್ಯಾಕ್ ಟು ಬ್ಯಾಕ್ ಪಾಯಿಂಟ್​ಗಳಿಸಿದರು. ಪರಿಣಾಮ ಬೆಂಗಾಲ್ ತಂಡ ಆಲೌಟ್ ಆಯಿತು.

ಇದರೊಂದಿಗೆ ಬೆಂಗಳೂರು ಬುಲ್ಸ್ ತಂಡ ಮುನ್ನಡೆ ಪಡೆಯಿತು. ಒಂದು ಹಂತದಲ್ಲಿ ಬೆಂಗಳೂರು ಬುಲ್ಸ್ ತಂಡವು 27 ಅಂಕ ಪಡೆದಿದ್ದರೆ, ಬೆಂಗಾಲ್ ವಾರಿಯರ್ಸ್ ಗಳಿಸಿದ್ದು 21 ಅಂಕ ಮಾತ್ರ. 6 ಅಂಕಗಳ ಮುನ್ನಡೆಯೊಂದಿಗೆ ಬೆಂಗಳೂರು ಬುಲ್ಸ್ ಹೋರಾಟ ಮುಂದುವರೆಸಿತು. ಆದರೆ ಈ ಹಂತದಲ್ಲಿ ಕಂಬ್ಯಾಕ್ ಮಾಡಿ ಬೆಂಗಾಲ್ ವಾರಿಯರ್ಸ್ ಪರ ಸುಖೇಶ್ ಹೆಗ್ಡೆ, ನಬಿಭಕ್ಷ್ ಬ್ಯಾಕ್ ಟು ಬ್ಯಾಕ್ ಪಾಯಿಂಟ್ ಕಲೆಹಾಕಿದರು. ಪರಿಣಾಮ ಬೆಂಗಳೂರು ಬುಲ್ಸ್ 30 ಅಂಕಗಳಿಸುವಷ್ಟರಲ್ಲಿ ಬೆಂಗಾಲ್ ವಾರಿಯರ್ಸ್ 32 ಪಾಯಿಂಟ್​ಗಳಿಸಿತು.

ಕೊನೆಯ 5 ನಿಮಿಷಗಳಿರುವಾಗ 6 ಪಾಯಿಂಟ್ ಮುನ್ನಡೆ ಪಡೆದ ಬೆಂಗಾಲ್ ವಾರಿಯರ್ಸ್ ಮತ್ತೊಮ್ಮೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಕೊನೆಯ ಹಂತದಲ್ಲಿ ಬೆಂಗಳೂರು ಬುಲ್ಸ್ ಕಂಬ್ಯಾಕ್ ಮಾಡುವ ಪ್ರಯತ್ನ ಮಾಡಿದರೂ ಫಲ ನೀಡಲಿಲ್ಲ. ಅಂತಿಮವಾಗಿ ಬೆಂಗಾಲ್ ವಾರಿಯರ್ಸ್ ತಂಡವು 1 ಅಂಕದಿಂದ ರೋಚಕ ಜಯ ಸಾಧಿಸಿತು.

TV9 Kannada


Leave a Reply

Your email address will not be published. Required fields are marked *