PSI ಹಗರಣದಲ್ಲಿ ಸಚಿವರು, ಅಧಿಕಾರಿಗಳು ಶಾಮೀಲಾಗಿದ್ದಾರೆ: ಅಧ್ಯಕ್ಷ ಡಿ.ಕೆ.ಶಿವಕುಮಾರ್ | Ministers and officers involde the PSI scam: President DK Shivakumar


PSI ಹಗರಣದಲ್ಲಿ ಸಚಿವರು, ಅಧಿಕಾರಿಗಳು ಶಾಮೀಲಾಗಿದ್ದಾರೆ: ಅಧ್ಯಕ್ಷ ಡಿ.ಕೆ.ಶಿವಕುಮಾರ್

DK Shivakumar

ಪಿಎಸ್‌ಐ ನೇಮಕಾತಿ ಹಗರಣದಲ್ಲಿ ದರ್ಶನ್‌ ಗೌಡ ಬಂಧನವಾಗಿದ್ದು, ಈ ಕುರಿತಾಗಿ ಟಿವಿ 9ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jun 06, 2022 | 12:32 PM
ರಾಮನಗರ: ಪಿಎಸ್​ಐ ಹಗರಣದಲ್ಲಿ ಏನು ಸತ್ಯ ಇದೆ ಅದನ್ನು ತಿಳಿಸಿದ್ದೇವೆ. ದರ್ಶನ್​ಗೌಡಗೆ ನೋಟಿಸ್ ಕೊಟ್ಟಿದ್ದರು ವಿಚಾರಣೆ ಮಾಡಿದ್ದರು. ವಿಚಾರಣೆ ಸಂದರ್ಭದಲ್ಲಿ ಸಚಿವರ ಪ್ರಭಾವದಿಂದ ಬಿಟ್ಟಿದ್ದರು. ಮತ್ತೆ ವಿಚಾರಣೆ ಮಾಡಿ ಅವರನ್ನ ಕರೆದುಕೊಂಡು ಹೋಗಿದ್ದಾರೆ. ಬರೀ ಇದು ಒಂದೇ ಅಲ್ಲ ನಮ್ಮ ಬಳಿ ಸಾಕಷ್ಟು ಮಾಹಿತಿಯಿದೆ. PSI ಹಗರಣದಲ್ಲಿ ಸಚಿವರು, ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಟಿವಿ 9ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದರು. ಹಗರಣಕ್ಕೆ ಕಾರಣ ಕರ್ತರಾದವರ ವಿರುದ್ಧ ಕೇಸ್ ಹಾಕಬೇಕು. ಸರ್ಕಾರ ಕೇಸ್​ ಹಾಕದಿದ್ದರೆ ನಾವು ಸುದ್ದಿಗೋಷ್ಠಿ ನಡೆಸುತ್ತೇವೆ. ಮುಖ್ಯಮಂತ್ರಿಗಳು ಯಾರನ್ನು ರಕ್ಷಣೆ ಮಾಡಬೇಕು ಮಾಡಲಿ, ನೋಡೋಣ ಆಮೇಲೆ ಮಾತನಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

TV9 Kannada


Leave a Reply

Your email address will not be published.