PSI Recruitment Scam: ಕಲಬುರಗಿ ಕೋರ್ಟ್​ಗೆ 6 ಪ್ರತ್ಯೇಕ ಚಾರ್ಜ್‌ಶೀಟ್​ಗಳನ್ನು ಸಲ್ಲಿಸಿದ ಸಿಐಡಿ – PSI Recruitment Scam: CID Submitted six separate Charge sheet to Kalaburagi court


545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದ  ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ, ಮತ್ತೆ ಆರು ಪ್ರತ್ಯೇಕ ಚಾರ್ಜ್‌ಶೀಟ್​ಗಳನ್ನು ಕಲಬುರಗಿ 3ನೇ ಜೆಎಂಎಫ್‌ಸಿ ಕೋರ್ಟ್‌ಗೆ ಸಲ್ಲಿಸಿದೆ.

PSI Recruitment Scam: ಕಲಬುರಗಿ ಕೋರ್ಟ್​ಗೆ 6 ಪ್ರತ್ಯೇಕ ಚಾರ್ಜ್‌ಶೀಟ್​ಗಳನ್ನು ಸಲ್ಲಿಸಿದ ಸಿಐಡಿ

ಸಾಂಧರ್ಬಿಕ ಚಿತ್ರ

ಕಲಬುರಗಿ: 545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದ  ಅಕ್ರಮ ಪ್ರಕರಣಕ್ಕೆ (PSI Recruitment Scam) ಸಂಬಂಧಿಸಿದಂತೆ ಸಿಐಡಿ (CID), ಮತ್ತೆ ಆರು ಪ್ರತ್ಯೇಕ ಚಾರ್ಜ್‌ಶೀಟ್​ಗಳನ್ನು ಕಲಬುರಗಿ (Kalaburagi) 3ನೇ ಜೆಎಂಎಫ್‌ಸಿ ಕೋರ್ಟ್‌ಗೆ ಸಲ್ಲಿಸಿದೆ. ಕಲಬುರಗಿ ನಗರದ ಕಲಬುರಗಿಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಹಾಗೂ ಅಶೋಕ್ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ಚಾರ್ಜ್‌ಶೀಟ್​ನ್ನು ಸಿಐಡಿ ನ್ಯಾಯಾಲಯಕ್ಕೆ ಸಲ್ಲಿಸಿದೆ. ಇನ್ನು ಪ್ರಕರಣದಲ್ಲಿ ತೆಲೆ ಮೆರೆಸಿಕೊಂಡ ಉಳಿದ ಆರೋಪಿಗಳಿಗಾಗಿ ಸಿಐಡಿ ಶೋಧ ಕಾರ್ಯ ಮುಂದುವರೆಸಿದೆ.

ಅಶೋಕ್ ನಗರ ಪೊಲೀಸ್ ಠಾಣೆ ಕ್ರೈಂ ನಂಬರ್ 96/22 ಸಂಬಂಧ 788 ಪುಟ, ಕ್ರೈ ನಂಬರ್ 97/22 ಸಂಬಂಧ 1318 ಪುಟ, ಕ್ರೈಂ ನಂಬರ್ 98/22 ರ ಕೇಸ್ ಸಂಬಂಧ 1048 ಪುಟ, ಕ್ರೈಂ ನಂಬರ್ 99/22 ಸಂಬಂಧ 788 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಕ್ರೈಂ ನಂಬರ್ 57/22 ಸಂಬಂಧ 888 ಪುಟಗಳ ಚಾರ್ಜ್ ಶೀಟ್​ನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.