545 ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್ ಬೆಂಬಲಿಗರಿಂದ ಮತ್ತೆ 3 ಆಡಿಯೋ ಬಿಡುಗಡೆ ಮಾಡಲಾಗಿದೆ.

ರುದ್ರಗೌಡ ಪಾಟೀಲ್ (ಎಡಚಿತ್ರ) ಪೊಲೀಸ್ ಟೋಪಿ (ಬಲಚಿತ್ರ) ಸಾಂಧರ್ಬಿಕ ಚಿತ್ರ
ಕಲಬುರಗಿ: 545 ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ (PSI recruitment Scam) ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್ (Rudragouda Patil) ಬೆಂಬಲಿಗರಿಂದ ಮತ್ತೆ 3 ಆಡಿಯೋ ಬಿಡುಗಡೆ ಮಾಡಲಾಗಿದೆ. ರುದ್ರಗೌಡ ಪಾಟೀಲ್ ಸಿಐಡಿ (CID) ಕಸ್ಟಡಿಯಲ್ಲಿರುವಾಗ ಸಿಐಡಿ ತನಿಖೆ ವೇಳೆ ಕದ್ದು ಡಿವೈಸ್ ಬಳಸಿ ಸಿಐಡಿ ಅಧಿಕಾರಿಗಳ ಹಣ ರಿಕವರಿ ಪ್ರಶ್ನೆಗಳನ್ನೆ ರೇಕಾಡ್೯ ಮಾಡಿದ್ದಾನೆ. ಇದೀಗ ಈ ಆಡಿಯೋಗಳನ್ನು ರುದ್ರಗೌಡ ಬಿಡುಗಡೆ ಮಾಡುತ್ತಿದ್ದಾನೆ.
ಅಷ್ಟಕ್ಕೂ ರುದ್ರಗೌಡ ರೆಕಾರ್ಡ್ ಮಾಡಿದ್ದು ಹೇಗೆ?
ರುದ್ರಗೌಡ ಸಿಐಡಿ ಕಸ್ಟಡಿಯಲ್ಲಿರುವಾಗ, ವಿಚಾರಣೆ ವೇಳೆ ಪದೇ ಪದೇ ಬಾತ್ ರೂಮ್ ನೆಪ ಹೇಳಿ ಸಿಐಡಿ ಕಚೇರಿಯ ಹೊರ ಹೋಗುತ್ತಿದ್ದನು. ಈ ವೇಳೆ ಸ್ನೇಹಿತರಿಂದ ಡಿವೈಸ್ ತರಿಸಿಕೊಂಡು ಗೌಪ್ಯವಾಗಿ ರೆಕಾರ್ಡ್ ಮಾಡಿಕೊಂಡಿದ್ದಾನೆ.
ತಾಜಾ ಸುದ್ದಿ