PSU Privatisation: ಪ್ರಸಕ್ತ ಹಣಕಾಸು ವರ್ಷದಲ್ಲಿ ಐದಾರು ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣ ಎಂದ ಪಾಂಡೆ | 5 To 6 Central PSU Likely To Privatise Current Financial Year According To Dipam Secretary Tuhin Kanta Pandey


PSU Privatisation: ಪ್ರಸಕ್ತ ಹಣಕಾಸು ವರ್ಷದಲ್ಲಿ ಐದಾರು ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣ ಎಂದ ಪಾಂಡೆ

ಸಾಂದರ್ಭಿಕ ಚಿತ್ರ

ಕೇಂದ್ರ ಸರ್ಕಾರವು ಐದರಿಂದ ಆರು ಕೇಂದ್ರ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಖಾಸಗೀಕರಣ ಮಾಡಲಾಗುವುದು ಎಂದು ಹೂಡಿಕೆ ಹಾಗೂ ಸಾರ್ವಜನಿಕ ಆಸ್ತಿ ನಿರ್ವಹಣೆ (Dipam) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಹೇಳಿದ್ದಾರೆ. ಭಾರತ್ ಅರ್ಥ್ ಮೂವರ್ಸ್, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ, ಪವನ್ ಹನ್ಸ್, ಸೆಂಟ್ರಲ್ ಎಲೆಕ್ಟ್ರಾನಿಕ್ಸ್, ನೀಲಾಂಚಲ್ ಇಸ್ಪಾಟ್ ನಿಗಮ್ ಇವುಗಳಿಗೆ ಜನವರಿಯಲ್ಲಿ ಹಣಕಾಸಿನ ಬಿಡ್ ನಡೆಯಲಿದೆ. ಮತ್ತು ಈ ವಹಿವಾಟು ಮಾರ್ಚ್ ಅಂತ್ಯದ ಹೊತ್ತಿಗೆ ಪೂರ್ಣಗೊಳ್ಳಬಹುದು ಎಂದು ಪಾಂಡೆ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಡಿಸೆಂಬರ್​ನಲ್ಲಿ ಟಾಟಾಗೆ ಏರ್​ ಇಂಡಿಯಾ ವರ್ಗಾವಣೆ
ಏರ್​ ಇಂಡಿಯಾದ ಖಾಸಗೀಕರಣ ಡಿಸೆಂಬರ್​ ಹೊತ್ತಿಗೆ ಪೂರ್ಣಗೊಳ್ಳುವ ವಿಶ್ವಾಸ ಸರ್ಕಾರಕ್ಕೆ ಇದೆ. ಹತ್ತೊಂಬತ್ತು ವರ್ಷಗಳ ನಂತರ ಈ ವರ್ಷ ಐದಾರು ಖಾಸಗೀಕರಣ ಆಗುವ ಸಾಧ್ಯತೆ ಇದೆ ಎಂದು ಪಾಂಡೆ ಹೇಳಿರುವುದಾಗಿ ವರದಿ ಆಗಿದೆ. ಏರ್​ ಇಂಡಿಯಾದ ಖಾಸಗೀಕರಣಕ್ಕಾಗಿ ಸತತ ಪ್ರಯತ್ನ ನಡೆಸಿದ ನಂತರ ಕಳೆದ ತಿಂಗಳು ಯಶಸ್ವಿಯಾಗಿ ಮಾರಾಟ ಮಾಡಲಾಯಿತು. ಏರ್​ ಇಂಡಿಯಾವನ್ನು 18,000 ಕೋಟಿ ರೂಪಾಯಿಗೆ ಟಾಟಾ ಸಮೂಹಕ್ಕೆ ಮಾರಲಾಯಿತು. ಏರ್​ ಇಂಡಿಯಾ, ಏರ್​ ಇಂಡಿಯಾ ಎಕ್ಸ್​ಪ್ರೆಸ್​ ಲಿಮಿಟೆಡ್ ಮತ್ತು ಏರ್​ ಇಂಡಿಯಾ SATS ಏರ್​ಪೋರ್ಟ್​ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (AISATS)ನಲ್ಲಿನ ಸರ್ಕಾರದ ಪಾಲನ್ನು ಮಾರಾಟ ಮಾಡಲಾಗಿದೆ.

ಫಾಂಡೆ ಹೇಳಿರುವ ಪ್ರಕಾರ, ಸರ್ಕಾರದ ಸಂಪೂರ್ಣ ಗಮನವು ಟಾಟಾಗೆ ಹೇಗೆ ಹಾಗೂ ಎಷ್ಟು ಶೀಘ್ರವಾಗಿ ಏರ್​ ಇಂಡಿಯಾವನ್ನು ವರ್ಗಾವಣೆ ಮಾಡುವುದು ಎಂಬ ಕಡೆಗಿದೆ. ಅದರಲ್ಲೂ ಇದಕ್ಕಾಗಿ ಡಿಸೆಂಬರ್​ನ ಗಡುವು ಇದೆ. ಈಗಾಗಲೇ ಎಲ್ಲ ಮಂಜೂರಾತಿಯನ್ನು ನೀಡಲಾಗಿದೆ.

ಎಲ್​ಐಸಿ ಐಪಿಒ
ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಎಲ್​ಐಸಿ ಐಪಿಒ ಆಗಬಹುದು ಎಂದು ಕೂಡ ಪಾಂಡೆ ಹೇಳಿದ್ದಾರೆ. ಎಲ್​ಐಸಿಯು ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ಹಣಕಾಸು ಸಂಸ್ಥೆ. ಈವರೆಗೆ ಮಾರುಕಟ್ಟೆಯಿಂದ ದೂರವೇ ಉಳಿದಿತ್ತು.ಇದರ ಲಿಸ್ಟಿಂಗ್ ಬಂಡವಾಳ ಮಾರುಕಟ್ಟೆಗೆ ಬಹಳ ಮುಖ್ಯವಾದ ಘಟನೆ ಎಂದು ಅವರು ಹೇಳಿದ್ದಾರೆ.

ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಅಜಯ್ ಸೇಠ್ ಮಾತನಾಡಿ, ಖಾಸಗಿ ಹೂಡಿಕೆಯಿಂದ ಆರ್ಥಿಕ ಬೆಳವಣಿಗೆಗೆ ಚಾಲನೆ ದೊರೆಯುತ್ತದೆ. ಆರ್ಥಿಕತೆಯಲ್ಲಿ ಖಾಸಗಿ ವಲಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಸರ್ಕಾರವು ಅನುಕೂಲ ಮಾಡಿಕೊಡುವ ಪಾತ್ರ ವಹಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: Raghuram Rajan: ಖಾಸಗೀಕರಣದ ಬದಲು ಆಡಳಿತ ಸುಧಾರಿಸಿ, ಉತ್ತಮ ನಿಯಮ ರೂಪಿಸಿ ಎಂದ ರಘುರಾಮ್ ರಾಜನ್

TV9 Kannada


Leave a Reply

Your email address will not be published. Required fields are marked *