ಬೆಂಗಳೂರು: ಆತ್ಮಹತ್ಯೆ ನಿರ್ಧಾರ ಮಾಡದಂತೆ ಅಭಿಮಾನಿಗಳಲ್ಲಿ ಶಿವಣ್ಣ ಮನವಿ ಮಾಡಿದ್ದಾರೆ. ಅಪ್ಪು ಇರದ ನೋವು ನಮ್ಮೆಲ್ಲರಲ್ಲೂ ಇದೆ. ಅದನ್ನ ಒಪ್ಪಿ ಮುಂದೆ ಸಾಗಬೇಕು. ಅಪ್ಪು ಮಾಡುತ್ತಿದ್ದ ಸಮಾಜಮುಖಿ ಕಾರ್ಯಗಳನ್ನು ಮುಂದುವರೆಸೋಣ. ಆ ಮೂಲಕ ಅಪ್ಪುವನ್ನ ಜೀವಂತವಾಗಿರಿಸೋಣ. ನಿಮ್ಮ ಕುಟುಂಬಕ್ಕೆ ನೀವು ಮುಖ್ಯ, ನಮಗೆ ನೀವು ಮುಖ್ಯ. ದಯವಿಟ್ಟು ಆತ್ಮಹತ್ಯೆಯಂತಹ ನಿರ್ಧಾರ ಮಾಡಬೇಡಿ’’ ಎಂದು ಶಿವರಾಜ್ ಕುಮಾರ್ ಮನವಿ ಮಾಡಿದ್ದಾರೆ. ವೆಸ್ಟ್ ಆಫ್ ಕಾರ್ಡ್ ರಸ್ತೆಗೆ ಪುನೀತ್ ಹೆಸರು ನಾಮಕರಣ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ಖಂಡಿತ ಅಂತಹ ಅಭಿಯಾನಗಳಿಗೆ ಬೆಂಬಲಿಸೋಣ. ಅಪ್ಪು ಮಾಡ್ತಿದ್ದ ಸೋಶಿಯಲ್ ಸರ್ವೀಸ್ ನಾವು ಮುಂದುವರೆಸೋಣ ಎಂದು ನುಡಿದಿದ್ದಾರೆ.
ಅಪ್ಪು ಸಾವಿನ ಬಗ್ಗೆ ತನಿಖೆ ಮಾಡುವಂತೆ ದೂರು ನೀಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು, ಅವನೇ ಇಲ್ಲದ ಮೇಲೆ ಈಗ ಯಾಕೆ ಅದೆಲ್ಲ, ದಯವಿಟ್ಟು ಬೇಡ. ಈಗ ಅದೆಲ್ಲವನ್ನ ಮಾತನಾಡಿ ಪ್ರಯೋಜನವಿಲ್ಲ, ಅದೆಲ್ಲವನ್ನ ಬಿಟ್ಟು ಮುಂದೆ ಸಾಗಬೇಕಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: