Puneeth Rajkumar: ‘ಇಂದಿರಾ’ ಆದ ಅನಿತಾ ಭಟ್; ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದ ಪುನೀತ್ | Anitha Bhat presents and starring in a new Kannada Movie Indira motion poster released by Puneeth Rajkumar

Puneeth Rajkumar: ‘ಇಂದಿರಾ’ ಆದ ಅನಿತಾ ಭಟ್; ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದ ಪುನೀತ್

‘ಇಂದಿರಾ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ಪುನೀತ್ ರಾಜಕುಮಾರ್

ಕನ್ನಡ ಚಿತ್ರರಂಗ ಕೊರೊನಾ ಬಳಿಕ ಹೊಸ ಹುರುಪಿನಿಂದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಇದರೊಂದಿಗೆ ಚಿತ್ರಮಂದಿರಗಳು ಕೂಡ 100 ಪ್ರತಿಶತ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದ್ದು, ಚಿತ್ರರಂಗಕ್ಕೆ ಬಹುದೊಡ್ಡ ಚೇತರಿಕೆ ನೀಡಿದೆ. ಇದರೊಂದಿಗೆ ಕನ್ನಡದಲ್ಲಿ ಹೊಸಬರ ಪ್ರಯತ್ನಗಳೂ ನಿರಂತರವಾಗಿ ನಡೆಯುತ್ತಿದ್ದು, ವಿಭಿನ್ನ ಚಿತ್ರಗಳತ್ತ ಮುಖಮಾಡುತ್ತಿದ್ದಾರೆ. ಚಿತ್ರರಂಗ ಚೇತರಿಸಿಕೊಂಡಿರುವುದು ಇಂತಹ ಚಿತ್ರಗಳಿಗೆ ಬಹುದೊಡ್ಡ ಪ್ಲಸ್ ಪಾಯಿಂಟ್. ಇದೀಗ ಅದೇ ದಿಕ್ಕಿನತ್ತ ಮತ್ತೊಂದು ತಂಡ ಮುಂದಡಿಯಿಟ್ಟಿದೆ. ನಟಿ ಅನಿತಾ ಭಟ್ ನಟನೆಯ ‘ಇಂದಿರಾ’ ಚಿತ್ರ ಅನೌನ್ಸ್ ಆಗಿದ್ದು, ಪುನೀತ್ ರಾಜಕುಮಾರ್ ಟೈಟಲ್ ರಿವೀಲ್ ಮಾಡಿದ್ದಾರೆ.

ಪುನೀತ್ ರಾಜಕುಮಾರ್ ಫರ್ಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದು, ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಅನಿತಾ ಭಟ್ ಈಗಾಗಲೇ ತಮ್ಮ ಭಿನ್ನ ಬಗೆಯ ಪಾತ್ರ ಪೋಷಣೆಯಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಅವರು ಅನಿತಾ ಭಟ್ ಕ್ರಿಯೇಷನ್ಸ್​​ ಬ್ಯಾನರ್​ನಲ್ಲಿ ಇದನ್ನು ಪ್ರಸ್ತುತಪಡಿಸುತ್ತಿದ್ದಾರೆ.

ಪುನೀತ್ ಟೈಟಲ್ ರಿವೀಲ್ ಮಾಡಿದ ವಿಡಿಯೊ ಇಲ್ಲಿದೆ:

‘ಇಂದಿರಾ’ ಚಿತ್ರದಲ್ಲಿ ಮೊಹಿನುದ್ದೀನ್ ಶಫಿ, ನೀತು ಶೆಟ್ಟಿ, ಡಿ.ಜೆ ಚಕ್ರವರ್ತಿ, ರೆಹಮಾನ್ ಹಾಸನ್ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ಅನಿತಾ ಭಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರವು ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗಲಿದ್ದು, ‘ಎ ಡಾಟ್ ಟಾಕೀಸ್’ ನಿರ್ಮಾಣ ಮಾಡಲಿದೆ.

ಚಿತ್ರದ ಮೋಷನ್ ಪೋಸ್ಟರ್ ಇಲ್ಲಿದೆ:

ಚಿತ್ರದ ಮೋಷನ್ ಪೋಸ್ಟರನ್ನು ಅನಿತಾ ಭಟ್ ಕ್ರಿಯೇಷನ್ಸ್ ಯುಟ್ಯೂಬ್ ಚಾನಲ್ ಇಂದ ಬಿಡುಗಡೆ ಮಾಡಲಾಗಿದೆ. ಮೋಷನ್ ಪೋಸ್ಟರ್​ನಲ್ಲಿ ಚಿತ್ರತಂಡ ಕತೆಯ ಕುರಿತ ಯಾವ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಇದರೊಂದಿಗೆ ಚಿತ್ರದ ಕುರಿತ ಮತ್ತಷ್ಟು ಮಾಹಿತಿಗಳನ್ನು ಚಿತ್ರತಂಡ ಇನ್ನಷ್ಟೇ ತಿಳಿಸಬೇಕಿದೆ.

ಇದನ್ನೂ ಓದಿ:

KGF Chapter 2: ‘ಕೆಜಿಎಫ್​​ 2’ ಚಿತ್ರೀಕರಣದ​ ಫೋಟೋ ವೈರಲ್; ಅಪ್​ಡೇಟ್​ಗಾಗಿ ಕಾದು ಕುಳಿತ ಯಶ್​ ಫ್ಯಾನ್ಸ್​

Aryan Khan: ಆರ್ಥರ್ ಜೈಲಿಗೆ ಆರ್ಯನ್ ಖಾನ್ ಹಾಗೂ ಇತರ ಆರೋಪಿಗಳು

Pawana Gowda: ಸಾಂಪ್ರದಾಯಿಕ ದಿರಿಸಿನಲ್ಲಿ ನಟಿ ಪಾವನಾ ಗೌಡ ಫೋಟೋ ಶೂಟ್; ಚಿತ್ರಗಳು ಇಲ್ಲಿವೆ

TV9 Kannada

Leave a comment

Your email address will not be published. Required fields are marked *