Puneeth Rajkumar: ತಮ್ಮ ತಂದೆಯ ಸ್ನೇಹಿತರೊಂದಿಗೂ ಅವಿನಾಭಾವ ಸಂಬಂಧ ಹೊಂದಿದ್ದ ಪುನೀತ್ | Puneeth Rajkumar have a close bond between Tipatur Ramaswamy here is the photos


ತಿಪಟೂರು: ನಟ ಪುನೀತ್ ರಾಜಕುಮಾರ್ ಸರಳ ಹಾಗೂ ಸ್ನೇಹಮಯ ವ್ಯಕ್ತಿತ್ವ ಎಲ್ಲರಿಗೂ ತಿಳಿದಿರುವಂಥದ್ದು. ಅವರ ತಮ್ಮ ತಂದೆಯ ಸ್ನೇಹಿತರೊಂದಿಗೆ ಬಹಳ ಆತ್ಮೀಯವಾದ ಸ್ನೇಹ ಸಂಬಂಧವನ್ನು ಹೊಂದಿದ್ದರು. ಅಂಥಹ ಸ್ನೇಹದಲ್ಲಿ ತಿಪಟೂರಿನ ರಾಮಸ್ವಾಮಿಯವರೊಂದಿಗಿನ ಸ್ನೇಹವೂ ಒಂದು. ಅಪ್ಪು ಅವರು ತಿಪಟೂರಿನ ರಾಮಸ್ವಾಮಿಯವರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ತಮ್ಮ ತಂದೆ ರಾಜಕುಮಾರ್​ರವರ ಸ್ನೇಹಿತರಾಗಿರುವ ರಾಮಸ್ವಾಮಿಯವರ ಮನೆಗೆ ಪುನೀತ್ ಆಗಾಗ ಭೇಟಿ ಕೂಡ ನೀಡುತ್ತಿದ್ದರು. ಶಿವಮೊಗ್ಗ ಕಡೆ ಬಂದಾಗಲೆಲ್ಲಾ ಹಾಗೂ ತಮ್ಮ ಮನೆಯಲ್ಲಿ ಶುಭಕಾರ್ಯ ನಡೆದರೆ ರಾಮಸ್ವಾಮಿ ಮನೆಗೆ ಅಪ್ಪು ಭೇಟಿ ನೀಡುತ್ತಿದ್ದರು. ಭೇಟಿಯ ವೇಳೆ ಅವರ ಪತ್ನಿ ಅಶ್ವಿನಿಯವರೂ ಇರುತ್ತಿದ್ದರು. ತನ್ನ ತಂದೆಯ ಕಾಲದ ಸ್ನೇಹಿತರನ್ನು ಪುನೀತ್ ಆತ್ಮಿಯತೆಯಿಂದ ನೋಡಿಕೊಂಡಿದ್ದರು.

ಇದನ್ನೂ ಓದಿ:

‘ಪುನೀತ್ ಇಲ್ಲದಿದ್ದಾಗ ದೂರು ಏಕೆ? ದಯವಿಟ್ಟು ಬೇಡ’: ಶಿವರಾಜ್​ಕುಮಾರ್​ ಮನವಿ

Modi in Kedarnath ಕೇದಾರನಾಥದಲ್ಲಿ ಶ್ರೀ ಆದಿ ಶಂಕರಾಚಾರ್ಯರ ಪ್ರತಿಮೆ ಅನಾವರಣ ಮಾಡಿದ ನರೇಂದ್ರ ಮೋದಿ

TV9 Kannada


Leave a Reply

Your email address will not be published. Required fields are marked *