Puneeth Rajkumar: ಪುನೀತ್​ ಕಣ್ಣುಗಳು ಇನ್ನೂ ಹತ್ತು ಜನಕ್ಕೆ ದೃಷ್ಟಿ ನೀಡುವ ಸಾಧ್ಯತೆ; ನಾರಾಯಣ ನೇತ್ರಾಲಯದಿಂದ ವಿನೂತನ ಪ್ರಯೋಗ | Puneeth Rajkumar eyes may help to 10 people to regain eye sight reports


Puneeth Rajkumar: ಪುನೀತ್​ ಕಣ್ಣುಗಳು ಇನ್ನೂ ಹತ್ತು ಜನಕ್ಕೆ ದೃಷ್ಟಿ ನೀಡುವ ಸಾಧ್ಯತೆ; ನಾರಾಯಣ ನೇತ್ರಾಲಯದಿಂದ ವಿನೂತನ ಪ್ರಯೋಗ

ಪುನೀತ್ ರಾಜ್​ಕುಮಾರ್

ನಟ ಪುನೀತ್ ರಾಜ್​ಕುಮಾರ್ ಅವರ ನಿಧನದ ನಂತರ ನೇತ್ರದಾನ ಮಾಡಲಾಗಿತ್ತು. ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದ ಪುನೀತ್​ರಿಂದ ನಾಲ್ವರಿಗೆ ದೃಷ್ಟಿ ಬಂದಿದೆ ಎಂದು ವೈದ್ಯರು ತಿಳಿಸಿದ್ದರು. ಇದೀಗ ನಾರಾಯಣ ನೇತ್ರಾಲಯವು ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದು, ಪುನೀತ್ ರಾಜ್ ಕುಮಾರ್ ಕಣ್ಣಿನಿಂದ ಇನ್ನೂ 10 ಜನಕ್ಕೆ ದೃಷ್ಟಿ ನೀಡಲು ಮುಂದಾಗಿದೆ. ಇದೇ ಮೊದಲ ಬಾರಿಗೆ ಒಬ್ಬ ವ್ಯಕ್ತಿಯಾ ಕಾರ್ನಿಯಾ ಹಾಗೂ ಸ್ಟೆಮ್ ಸೆಲ್ ಎರಡನ್ನು ಬಳಸಿ ಅಂಧರಿಗೆ ದೃಷ್ಟಿ ನೀಡಲು ನಾರಾಯಣ ನೇತ್ರಾಲಯವು ಮುಂದಾಗಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದು, ಯಶಸ್ವಿಯಾದರೆ ‌10 ದಿನದಲ್ಲಿ 10 ಕ್ಕೂ ಹೆಚ್ಚು ಮಂದಿಗೆ ದೃಷ್ಟಿ ಬರಲಿದೆ. ಸ್ಟೆಮ್ ಸೆಲ್ ಗಳಿಂದ ಸ್ಟೇಮ್ ಸೆಲ್ ಥರಫಿ ನಡೆಸಿದರೆ ಮತ್ತೆ ದೃಷ್ಟಿ ಬರಲಿದ್ದು, ರಾಜ್ಯದ ಮಟ್ಟಿಗೆ ಇದು ಹೊಸ ದಾಖಲೆಯಾಗಲಿದೆ.

ಈ ಪ್ರಕ್ರಿಯೆ ಹೇಗೆ ಎನ್ನುವುದನ್ನ ಹೇಗೆ ಎಂದು ನೋಡುವುದಾದರೆ, ನಾರಾಯಣ ನೇತ್ರಲಯದಲ್ಲಿ ಪುನೀತ್ ಕಣ್ಣಿನ ಸ್ಟೆಮ್ ಸೆಲ್ ಗಳನ್ನ ಅಭಿವೃದ್ಧಿ ಮಾಡುತ್ತಿದ್ದು, ಸ್ಟೆಮ್ ಸೆಲ್​ಗಳು ಮಲ್ಟಿಪಲ್ ಆಗುತ್ತಿವೆ. ಇದಕ್ಕೆ ಸ್ವಲ್ಪ ಸಮಯ ಹಿಡಿಯುತ್ತಿದ್ದು, ಪೂರ್ಣ ಪ್ರಮಾಣದಲ್ಲಿ ಸ್ಟೆಮ್ ಸೆಲ್​ಗಳು ಅಭಿವೃದ್ಧಿ ಹೊಂದಿದ ಬಳಿಕ, ಸ್ಟೆಮ್ ಸೆಲ್‌ನಿಂದಾ ದೃಷ್ಟಿ ಕಳೆದುಕೊಂಡಿದ್ದ ಅಂಧರಿಗೆ ಕಸಿ ಮಾಡಬಹುದಾಗಿದೆ. ಸ್ಟೆಮ್ ಸೆಲ್ ಥೆರಫಿ ಎಂದರೆ, ಪಟಾಕಿ ಸಿಡಿತದಿಂದಾಗಿ ಅಥವಾ ವಂಶವಾಹಿನಿಯಿಂದಾಗಿ ಹಲವು ಜನರಿಗೆ ಅಂಧತ್ವ ಸಮಸ್ಯೆ ಇರುತ್ತದೆ. ಇಂಥಹವರಿಗೆ ಸ್ಟೆಮ್ ಸೆಲ್ ಆಳವಡಿಕೆ ಮಾಡುವುದರಿಂದ ದೃಷ್ಟಿ ನೀಡಲು ಸಾಧ್ಯವಿದೆ. ಇದೀಗ ನಾರಾಯಣ ನೇತ್ರಾಲಯವು ಈ ಪ್ರಕ್ರಿಯೆಗೆ ಮುಂದಾಗಿದೆ.

ಪುನೀತ್​ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಹೇಳಿದ್ದೇನು?
ಪುನೀತ್ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯರಾದ ಡಾ.ಭುಜಂಗ ಶೆಟ್ಟಿ ಈ ಕುರಿತು ಮಾಹಿತಿ ನೀಡಿದ್ದಾರೆ. ನಾರಾಯಣ ನೇತ್ರಾಲಯದಿಂದ ಅಪರೂಪದ ಸಾಧನೆ ಮಾಡಲಾಗಿದ್ದು, ಪುನೀತ್ ರಾಜ್ ಕುಮಾರ್ ಅವರ ಕಾರ್ನಿಯಾದಿಂದ ಈಗಾಗಲೇ ನಾಲ್ಕು ಜನರಿಗೆ ದೃಷ್ಟಿ ನೀಡಲಾಗಿದೆ. ಈಗ ಅವರ ಸ್ಟೆಮ್ ಸೆಲ್​ಗಳಿಂದ 5 ರಿಂದ 10 ಜನರಿಗೆ ದೃಷ್ಟಿ ನೀಡಬಹುದು. ಪುನೀತ್ ಕಣ್ಣಿನ ಸ್ಟೆಮ್ ಸೆಲ್​ಗಳನ್ನ ಲ್ಯಾಬೊರೇಟರಿಗಳಲ್ಲಿ ಇಡಲಾಗಿದ್ದು, ವೃದ್ದಿ ಮಾಡಲಾಗುತ್ತಿದೆ. ಕಣ್ಣಿನ ಬಿಳಿ ಗುಡ್ಡೆಯಿಂದ ಈ ಸ್ಟೆಮ್ ಸೆಲ್​ಗಳನ್ನ ಸಂಗ್ರಹಮಾಡಲಾಗಿದೆ. ಯಾರಿಗೆ ಬಿಳಿ ಗುಡ್ಡೆ ಸಮಸ್ಯೆ ಇರುವವರಿಗೆ, ಆ್ಯಸಿಡ್ ಬಿದ್ದು ಹಾನಿಯಾಗಿರುವವರಿಗೆ, ಕಣ್ಣಿಗೆ ಹಾನಿಯಾಗಿರುವವರಿಗೆ ಅದನ್ನ ಅಳವಡಿಸಬಹುದು.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಈ ಪ್ರಯೋಗ ಮಾಡಲಾಗುತ್ತಿದೆ. ಪುನೀತ್ ಅವರ ಕಣ್ಣಿನಿಂದ ತೆಗೆದ ಸ್ಟೆಮ್ ಸೆಲ್​ಗಳು ಮಾತ್ರ ಉಳಿದಿವೆ. ಈ ಹಿಂದೆ ಸ್ಟೆಮ್ ಗಳು ಅಳವಡಿಕೆ ಮಾಡಿದ್ದೇವೆ. ಆದರೆ ಇಷ್ಟೊಂದು ಜನರಿಗೆ ಅಳವಡಿಕೆ ಮಾಡಿರಲಿಲ್ಲ ಎಂದು ನಾರಾಯಣ ನೇತ್ರಾಲಯದ ಮುಖ್ಯಸ್ಥರಾದ ಡಾ. ಭುಜಂಗ ಶೆಟ್ಟಿ ನುಡಿದಿದ್ದಾರೆ.

ಇದನ್ನೂ ಓದಿ:

ಪುನೀತ್ ರಾಜ್‍ಕುಮಾರ್ ದಾರಿ ಹಿಡಿದ ಅಭಿಮಾನಿಗಳು, ಗಜೇಂದ್ರಗಡ ತಾಂಡದ 40 ಮಂದಿ ಅಪ್ಪು ಅಭಿಮಾನಿಗಳಿಂದ ನೇತ್ರದಾನ

ಪುನೀತ ನಮನ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲ; ಹಾಗಾದರೆ ವೀಕ್ಷಣೆ ಹೇಗೆ? ಇಲ್ಲಿದೆ ಮಾಹಿತಿ

TV9 Kannada


Leave a Reply

Your email address will not be published.