Puneeth Rajkumar: ಪುನೀತ್ ಕಾಣಿಸಿಕೊಂಡಿದ್ದ ‘ಗಂಧದ ಗುಡಿ’ ಬಿಡುಗಡೆ ಯಾವಾಗ?; ಇಲ್ಲಿದೆ ಮಾಹಿತಿ | Puneeth Rajkumar starring Gandhada Gudi may release after Puneeth 11th day rituals says sources


Puneeth Rajkumar: ಪುನೀತ್ ಕಾಣಿಸಿಕೊಂಡಿದ್ದ ‘ಗಂಧದ ಗುಡಿ’ ಬಿಡುಗಡೆ ಯಾವಾಗ?; ಇಲ್ಲಿದೆ ಮಾಹಿತಿ

‘ಗಂಧದ ಗುಡಿ’ಯ ಮೊದಲ ಪೋಸ್ಟರ್

ನಟ ಪುನೀತ್ ರಾಜಕುಮಾರ್ ಕಾಣಿಸಿಕೊಂಡಿದ್ದ ರಾಜ್ಯದ ವನ್ಯಸಂಪತ್ತಿನ ಕುರಿತಾದ ಚಿತ್ರವೊಂದನ್ನು ನವೆಂಬರ್ 1ರಂದು ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆ ಚಿತ್ರಕ್ಕಾಗಿ ಲಾಕ್​ಡೌನ್ ವೇಳೆ 2 ತಿಂಗಳು ಪುನೀತ್ ಕಾಡು ಸುತ್ತಿದ್ದರು. ಆ ಸಮಯದಲ್ಲಿ ಕಾಡಿನಲ್ಲಿ ಕಳೆದ ಕ್ಷಣಗಳನ್ನು ಚಿತ್ರೀಕರಣ ಮಾಡಲಾಗಿತ್ತು. ಅದನ್ನು ನವೆಂಬರ್ 1 ರಂದು ಬಿಡುಗಡೆ ಮಾಡಲು ತೀರ್ಮಾನಿಸಿ, ಒಂದು ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗಿತ್ತು. ನಮ್ಮ ನಾಡಿನ ಕಾಡುಗಳು, ವನ್ಯಜೀವಿ ಸಂಪತ್ತನ್ನು ಕುರಿತ ಚಿತ್ರ ಅದಾಗಿದ್ದು, ‘ಗಂಧದ ಗುಡಿ’ ಎಂದು ಹೆಸರಿಡಲು ಉದ್ದೇಶಿಸಲಾಗಿತ್ತು. 90 ನಿಮಿಷಗಳ ಆ ಚಿತ್ರವನ್ನು ರಾಜ್ಯೋತ್ಸವದ ದಿನ ಬಿಡುಗಡೆ ಮಾಡುವ ಕನಸನ್ನು ಪುನೀತ್ ಕಂಡಿದ್ದರು. ಆದರೆ ಆ ಕನಸು ನನಸಾಗುವ ಮುನ್ನವೇ ಪುನೀತ್ ನಿಧನ ಹೊಂದಿದ್ದರು. ಇದೀಗ ಪುನೀತ್ ರಾಜಕುಮಾರ್ ಆಪ್ತವಲಯದಿಂದ ಬಂದಿರುವ ಮಾಹಿತಿಯ ಪ್ರಕಾರ, ಅಪ್ಪು ಅವರ 11 ದಿನದ ಕಾರ್ಯ ಮುಗಿದ ನಂತರ ರಿಲೀಸ್​ಗೆ ಚಿಂತನೆ ನಡೆಸಲಾಗಿದೆ. ಪುನೀತ್ ಪತ್ನಿ ಅಶ್ವಿನಿ ಅವರೊಂದಿಗೆ ಚರ್ಚಿಸಿ, ಬಳಿಕ ಬಿಡುಗಡೆ ಕುರಿತು ಯೋಜಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.

ನಟ ಪುನೀತ್ ಮನೆಗೆ ಪ್ರಿಯಾಮಣಿ ಭೇಟಿ:
ನಟ ಪುನೀತ್ ರಾಜ್​ಕುಮಾರ್​ ಮನೆಗೆ ಪ್ರಿಯಾಮಣಿ ಭೇಟಿ ನೀಡಿ ಪತ್ನಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಪ್ರಿಯಾಮಣಿ ಅವರು ಪುನೀತ್ ಜೊತೆ, ರಾಮ್, ಅಣ್ಣಾಬಾಂಡ್ ಸಿನಿಮಾದಲ್ಲಿ ನಟಿಸಿದ್ದರು. ಪುನೀತ್​ ನಿಧನದ ಸುದ್ದಿ ತಿಳಿದು ಪ್ರಿಯಾ ಕಂಬನಿ ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಮಣಿ ಕಂಬನಿ ಮಿಡಿದಿದ್ದರು.

ಇದನ್ನೂ ಓದಿ:

Puneeth Rajkumar: ಅನಧಿಕೃತವಾಗಿ ಪುನೀತ್ ಪುತ್ಥಳಿ ಪ್ರತಿಷ್ಠಾಪಿಸಬೇಡಿ, ಅನುಮತಿ ಪಡೆಯಿರಿ: ಅಭಿಮಾನಿಗಳಿಗೆ ಬಿಬಿಎಂಪಿ ಸೂಚನೆ

Puneeth Rajkumar: ಪುನೀತ್​ಗೆ ಪದ್ಮ ಪ್ರಶಸ್ತಿ ನೀಡಲು ಅಭಿಮಾನಿಗಳ ಒತ್ತಾಯ; ಅಗತ್ಯ ಕ್ರಮಕ್ಕೆ ಮುಂದಾದ ಸರ್ಕಾರ

TV9 Kannada


Leave a Reply

Your email address will not be published. Required fields are marked *