ಸಂಚಾರಿ ವಿಜಯ್, ಪುನೀತ್ ರಾಜಕುಮಾರ್
ಬೆಂಗಳೂರು: ರಾಜ್ಯದಲ್ಲಿ ಪುನೀತ್ ರಾಜಕುಮಾರ್ ಹಾಗೂ ಸಂಚಾರಿ ವಿಜಯ್ ನೇತ್ರದಾನ ಮಾಡಿದ ನಂತರ ಜನರಲ್ಲಿ ಈ ಕುರಿತು ಜಾಗೃತಿ ಹೆಚ್ಚಾಗಿದೆ. ಪರಿಣಾಮವಾಗಿ, ನೇತ್ರದಾನಕ್ಕೆ ಮುಂದಾಗುತ್ತಿರುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ಈ ಕುರಿತಂತೆ ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಡಾ.ಸುಜಾತಾ ಹೇಳಿಕೆ ನೀಡಿದ್ದಾರೆ. ‘‘ರಾಜ್ಯದಲ್ಲಿ ನೇತ್ರದಾನ ಮಾಡುವವರ ಸಂಖ್ಯೆ ಸಂಚಾರಿ ವಿಜಯ್, ಪುನಿತ್ ನಿಧನದ ಬಳಿಕ ಹೆಚ್ಚಾಗಿದೆ. ನೇತ್ರದಾನ ಮಾಡಲು ಯುವಕರು ಮುಂದೆ ಬರುತ್ತಿದ್ದಾರೆ. ಇದರೊಂದಿಗೆ ನಾವು ಕೂಡ ಪಾಕ್ಷಿಕ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಪರಿಣಾಮವಾಗಿ ನೇತ್ರದಾನ ಮಾಡುವವರ ಸಂಖ್ಯೆ ಶೇ.20-30ರಷ್ಟು ಹೆಚ್ಚಳವಾಗಿದೆ’’ ಎಂದು ಅವರು ತಿಳಿಸಿದ್ದಾರೆ.
ನಟ ಪುನೀತ್ ರಾಜಕುಮಾರ್ ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು. ಪುನೀತ್ ಕಣ್ಣುಗಳಿಂದ ಒಟ್ಟು ನಾಲ್ಕು ಮಂದಿಗೆ ದೃಷ್ಟಿ ಬಂದಿತ್ತು. ಡಾ.ರಾಜಕುಮಾರ್ ಕೂಡ ನೇತ್ರದಾನ ಮಾಡಿ, ಇಬ್ಬರಿಗೆ ದೃಷ್ಟಿ ಒದಗಿಸಿದ್ದರು. ಆಧುನಿಕ ತಂತ್ರಜ್ಞಾನದ ಸಹಾಯದಿಂದ ಪುನೀತ್ ನೇತ್ರಗಳಿಂದ ನಾಲ್ವರಿಗೆ ದೃಷ್ಟಿ ಒದಗಿಸಲಾಗಿತ್ತು. ಇದು ಅಭಿಮಾನಿಗಳಿಗೆ ಹಾಗೂ ಜನರಿಗೆ ಬಹುದೊಡ್ಡ ಮಟ್ಟದಲ್ಲಿ ಪ್ರೇರಣೆ ನೀಡಿದ್ದು, ಸ್ವಯಂಪ್ರೇರಿತವಾಗಿ ನೇತ್ರದಾನಕ್ಕೆ ಮುಂದಾಗುತ್ತಿದ್ದಾರೆ.
ದಾವಣಗೆರೆ: ನೇತ್ರದಾನಕ್ಕೆ ವಾಗ್ದಾನ ಮಾಡಿದ 30 ಜನ ಪುನೀತ್ ಅಭಿಮಾನಿಗಳು
ದಾವಣಗೆರೆ: ನಟ ಪುನೀತ್ ರಾಜ್ಕುಮಾರ್ಗೆ ವಿಶಿಷ್ಟ ರೀತಿಯ ಗೌರವ ಅರ್ಪಿಸಲು ಅಭಿಮಾನಿಗಳು ಮುಂದಾಗಿದ್ದಾರೆ. ದಾವಣಗೆರೆ ತಾಲೂಕಿನ ಚಟ್ಟೋಬನಹಳ್ಳಿ ತಾಂಡದಲ್ಲಿ ನಾಳೆ ಪುನೀತ್ ನೆನಪು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಅಭಿಮಾನಿಗಳಿಂದ ನೇತ್ರದಾನಕ್ಕೆ ವಾಗ್ದಾನ ಮಾಡಲಾಗುತ್ತದೆ. ಚಟ್ಟೋಬನಹಳ್ಳಿ ತಾಂಡಾದ ಸೇವಾಲಾಲ್ ಸಂಘದಿಂದ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಕಾರ್ಯಕ್ರಮದಲ್ಲಿ 30 ಜನ ಪುನೀತ್ ಅಭಿಮಾನಿಗಳು ನೇತ್ರದಾನಕ್ಕೆ ವಾಗ್ದಾನ ಮಾಡಲಿದ್ದಾರೆ.
ಇದನ್ನೂ ಓದಿ:
‘ಸಮಾಜ ಸೇವೆ ಮಾಡಿದ ಅಪ್ಪು ಯಾವ ದೇವರಿಗೂ ಕಮ್ಮಿ ಇಲ್ಲ’; ಸಮಾಧಿ ಬಳಿ ಮದುವೆ ಆಗಲು ಬಂದ ಪ್ರೇಮಿಗಳ ಮಾತು
Puneeth Rajkumar: ಪುನೀತ್ ಕಾಣಿಸಿಕೊಂಡಿದ್ದ ‘ಗಂಧದ ಗುಡಿ’ ಬಿಡುಗಡೆ ಯಾವಾಗ?; ಇಲ್ಲಿದೆ ಮಾಹಿತಿ