ಪುನೀತ್ ಸಮಾಧಿಯ ಚಿತ್ರ
ಬೆಂಗಳೂರು: ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿ ನಟ ಪುನೀತ್ ಸಮಾಧಿ ದರ್ಶನಕ್ಕೆ ವೀಕೆಂಡ್ ಆಗಿರುವ ಕಾರಣ ಇಂದು ರಾಜ್ಯದ ವಿವಿಧ ಭಾಗದಿಂದ ಜನರು ಆಗಮಿಸಿದ್ದಾರೆ. ಕಿಲೋ ಮೀಟರ್ಗಟ್ಟಲೆ ಸಾಲು ನಿರ್ಮಾಣವಾಗಿದ್ದು, ಜನರು ಸರದಿ ಸಾಲಿನಲ್ಲಿ ಕಾಯುತ್ತಿದ್ದಾರೆ. ಹೆಚ್ಚು ಜನರು ಆಗಮಿಸಿರುವ ಕಾರಣ, ಪುನೀತ್ ಸಮಾಧಿ ದರ್ಶನಕ್ಕೆ 1 ಗಂಟೆ ಸಮಯ ವಿಸ್ತರಣೆ ಮಾಡಲಾಗಿದೆ. ಇದುವರೆಗೆ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿತ್ತು. ಇಂದು ಸಂಜೆ 7 ಗಂಟೆವರೆಗೆ ಸಮಾಧಿ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಾಳೆ ನಟ ಪುನೀತ್‌ರ 11ನೇ ದಿನದ ಕಾರ್ಯದ ಹಿನ್ನೆಲೆಯಲ್ಲಿ ನಾಳೆ ಅಪ್ಪು ಕುಟುಂಬಸ್ಥರು ಸಮಾಧಿ ಸ್ಥಳಕ್ಕೆ ಬರಲಿದ್ದಾರೆ. ಹೀಗಾಗಿ ನಾಳೆ ಸಾರ್ವಜನಿಕರಿಗೆ ಸಮಾಧಿ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಪುನೀತ್ ಕಾರ್ಯ ಮುಗಿದ ನಂತರ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ:
ನಟ ಪುನೀತ್ಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಗಣ್ಯರ ಒತ್ತಾಯ; ದನಿಗೂಡಿಸಿದ ಆನಂದ್ ಸಿಂಗ್, ಬಿಸಿ ಪಾಟೀಲ್, ನಟ ಪ್ರೇಮ್
ರಿಲೀಸ್ಗೂ ಮೊದಲೇ ಸಂಕಷ್ಟಕ್ಕೆ ಸಿಲುಕಿದ ‘ಪುಷ್ಪ’; ಚಿಂತೆಗೀಡಾದ ಅಲ್ಲು ಅರ್ಜುನ್?