ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನವೆಂಬರ್ 16ರಂದು ಆಯೋಜಿಸುತ್ತಿರುವ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಖ್ಯಾತ ತಾರೆಯರು, ಗಣ್ಯರು ಭಾಗಿಯಾಗಲಿದ್ದಾರೆ. ಡಾ.ರಾಜಕುಮಾರ್ ಕುಟುಂಬಸ್ಥರು ಹಾಗೂ ಕನ್ನಡ ಚಿತ್ರರಂಗ ಇದರಲ್ಲಿ ಭಾಗಿಯಾಗಲಿದೆ. ಸುಮಾರು ನಾಲ್ಕರಿಂದ ಐದು ಗಂಟೆಗಳ ಕಾಲ ನಡೆಯುವ ಈ ಕಾರ್ಯಕ್ರಮವನ್ನು ವಿಶೇಷವಾಗಿ ಆಯೋಜಿಸಲು ಯೋಜನೆ ರೂಪಿಸಲಾಗುತ್ತಿದೆ. ಖ್ಯಾತ ಸಾಹಿತಿ ವಿ.ನಾಗೇಂದ್ರ ಪುನೀತ್ ಕುರಿತು ವಿಶೇಷ ಗೀತೆಯೊಂದನ್ನು ರಚಿಸಿದ್ದು, ಅದನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ.
ಟಿವಿ9ನೊಂದಿಗೆ ಮಾತನಾಡಿರುವ ನಾಗೇಂದ್ರ ಪ್ರಸಾದ್, ಹಾಡಿನ ಮೊದಲೆರಡು ಸಾಲುಗಳನ್ನು ಹಂಚಿಕೊಂಡಿದ್ದಾರೆ. ‘ಮುತ್ತು ರಾಜ ಹೆತ್ತ ಮುತ್ತು ಎತ್ತ ಹೋದೆಯೋ’ ಅನ್ನೋ ಹಾಡಿನ ಮೂಲಕ ಚಿತ್ರ ಮಂದಿರದ ಖಾಲಿ ಸೀಟುಗಳು ನಿಮ್ಮನ್ನ ಕೇಳುತ್ತಿವೆ ಅಪ್ಪು ಅನ್ನೋ ಪರಿಕಲ್ಪನೆಯಲ್ಲಿ ಹಾಡು ರಚಿಸಲಾಗಿದೆ.
ಇದನ್ನೂ ಓದಿ:
ಪುನೀತ್ಗೆ ಪದ್ಮಶ್ರೀ, ಡಾ. ರಾಜ್ಕುಮಾರ್ಗೆ ಭಾರತ ರತ್ನ ಗೌರವ ನೀಡಬೇಕು: ಎಂಪಿ ರೇಣುಕಾಚಾರ್ಯ ಹೇಳಿಕೆ
ಪುನೀತ್ ಸಮಾಧಿ ಬಳಿ ಬಂದು ಹಾಡು ಹೇಳಿದ ಮಕ್ಕಳು; ಪುಟ್ಟ ಹೃದಯಗಳಿಗೆ ಅಪ್ಪು ಎಂದರೆ ಪಂಚಪ್ರಾಣ