Puneeth Rajkumar: ಮರಳು ಶಿಲ್ಪ ರಚಿಸಿ ಪುನೀತ್​ ರಾಜ್​ಕುಮಾರ್​ಗೆ ನಮನ | Puneeth Rajkumar Sand Art At Mangalore Photo goes viral


ಸ್ಯಾಂಡಲ್​ವುಡ್​ ಖ್ಯಾತ ನಟ ಪುನೀತ್​ ರಾಜ್​ಕುಮಾರ್​ ನಿಧನ ಹೊಂದಿರುವ ವಿಚಾರ ಇಡೀ ದಕ್ಷಿಣ ಭಾರತದ ಚಿತ್ರರಂಗಕ್ಕೆ ಶಾಕ್​ ನೀಡಿದೆ. ಪುನೀತ್ ಕುಟುಂಬಕ್ಕೆ ಸಾಂತ್ವನ ಹೇಳೋಕೆ ಬೇರೆ ಚಿತ್ರರಂಗದ ಅನೇಕ ಸ್ಟಾರ್​ಗಳು ಆಗಮಿಸುತ್ತಿದ್ದಾರೆ. ಈ ಮೂಲಕ ಪುನೀತ್ ಬಗ್ಗೆ ಇರುವ ಅಭಿಮಾನ ಹೊರ ಹಾಕುತ್ತಿದ್ದಾರೆ. ಈಗ ಪುನೀತ್ ರಾಜ್​ಕುಮಾರ್​​ಗೆ ಮರಳು ಶಿಲ್ಪದ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಗಿದೆ. ಮಂಗಳೂರಿನ ಪಣಂಬೂರು ಬೀಚ್​ನಲ್ಲಿ ಮರಳನಲ್ಲಿ ಪುನೀತ್ ಶಿಲ್ಪ ರಚನೆ ಮಾಡಲಾಗಿದೆ. ಮರಳು ಶಿಲ್ಪ ಕಲಾವಿದ ಹರೀಶ್ ಆಚಾರ್ಯ ಅವರಯ ಈ ಮರಳು ಶಿಲ್ಪ ರಚನೆ ಮಾಡಿದ್ದಾರೆ.

ಪುನೀತ್​ ರಾಜ್​ಕುಮಾರ್​ ಅವರ ಮೇಲೆ ಜನರು ಇಟ್ಟಿದ್ದ ಅಭಿಮಾನಕ್ಕೆ ಸಾಟಿಯೇ ಇಲ್ಲ. ಅವರು ನಿಧನರಾದ ಬಳಿಕ 25 ಲಕ್ಷಕ್ಕೂ ಅಧಿಕ ಜನರು ಬೆಂಗಳೂರಿನ ಕಂಠೀರವ ಸ್ಟೇಡಿಯಂಗೆ ಬಂದು ಅಂತಿಮ ದರ್ಶನ ಪಡೆದಿದ್ದರು. ಈಗ ಅಪ್ಪು ಸಮಾಧಿಗೆ ಭೇಟಿ ನೀಡುವವರ ಸಂಖ್ಯೆ ಕೂಡ ದೊಡ್ಡದಿದೆ. ಪ್ರತಿ ದಿನ 20 ಸಾವಿರಕ್ಕೂ ಅಧಿಕ ಜನರು ಕಂಠೀರವ ಸ್ಟುಡಿಯೋ ಆವರಣಕ್ಕೆ ಬಂದು ಪುನೀತ್​ ರಾಜ್​ಕುಮಾರ್​ ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಮಳೆಯ ಹಾವಳಿ ಹೆಚ್ಚಾಗಿದೆ. ಹಾಗಿದ್ದರೂ ಕೂಡ ಅಭಿಮಾನಿಗಳು ಬಗ್ಗುತ್ತಿಲ್ಲ. ಮಳೆಯ ನಡುವೆಯೂ ಸಾಲಿನಲ್ಲಿ ನಿಂತು ತಮ್ಮ ನೆಚ್ಚಿನ ನಟನ ಸಮಾಧಿಗೆ ಸಮಸ್ಕರಿಸುತ್ತಿದ್ದಾರೆ.

ಇದನ್ನೂ ಓದಿ: ಪುನೀತ್​ ರಾಜ್​ಕುಮಾರ್​ ಸಮಾಧಿಗೆ ಪೂಜೆ ಸಲ್ಲಿಸಿ, ಗಳಗಳನೆ ಅತ್ತ ಕಾಲಿವುಡ್​ ನಟ ಸಿದ್ದಾರ್ಥ್​

TV9 Kannada


Leave a Reply

Your email address will not be published. Required fields are marked *