Puneeth Rajkumar: ಸೂರ್ಯ- ಚಂದ್ರರು ಇರುವವರೆಗೆ ಅಪ್ಪು ನೆನಪಿರುತ್ತಾರೆ; ಶಾಸಕ ರಮೇಶ್ ಜಾರಕಿಹೊಳಿ ಕಂಬನಿ | BJP MLA Ramesh Jarakiholi pays tribute to Puneeth Rajkumar


ಬೆಳಗಾವಿ: ಸೂರ್ಯ- ಚಂದ್ರರು ಇರುವವರೆಗೆ ಅಪ್ಪು ನೆನಪಿರುತ್ತಾರೆ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ನುಡಿದಿದ್ಧಾರೆ. ಬೆಳಗಾವಿ ತಾಲೂಕಿನ ಹುದಲಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದ ಅಪ್ಪುಗೆ ನುಡಿ ಗೀತನಮನ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪುನೀತ್ ರಾಜಕುಮಾರ್ ನೆನೆದು ಭಾವುಕರಾದ ರಮೇಶ್ ಜಾರಕಿಹೊಳಿ, ಪುನೀತ್ ರಾಜಕುಮಾರ್ ಇಷ್ಟು ಸಣ್ಣ ವಯಸ್ಸಿನಲ್ಲಿ ನಮ್ಮನ್ನ ಅಗಲಿದ್ದಾರೆಂದರೆ ನಂಬಲು ಸಾಧ್ಯವಿಲ್ಲ. ಇಷ್ಟು ಸಣ್ಣ ವಯಸ್ಸಿನಲ್ಲಿ ದೊಡ್ಡ ಕಲಾವಿದನನ್ನು ಕಳೆದುಕೊಂಡಿದ್ದೇವೆ‌. ಇದರಿಂದ ನಮ್ಮ ಚಿತ್ರರಂದ ಬಡವಾಗಿದೆ. ಸೂರ್ಯಚಂದ್ರ ಇರೋವರೆಗೂ ಅವರ ನೆನಪು ಸದಾಕಾಲ ಇರುತ್ತೆ. ಪುನೀತ್ ರಾಜಕುಮಾರ್ ಹಿರಿಯರಿಗೆ ತುಂಬಾ ಗೌರವಿಸುತ್ತಿದ್ದರು ಎಂದು ಹೇಳಿದ್ದಾರೆ.

ಪುನೀತ್ ಜೊತೆಗಿನ ನೆನಪುಗಳನ್ನು ಸ್ಮರಿಸಿಕೊಂಡ ಜಾರಕಿಹೊಳಿ, 1992 ರ ಡಿಸೆಂಬರ್ 6ರಂದು ಗೋಕಾಕ್‌‌ನ ನಮ್ಮ ನಿವಾಸಕ್ಕೆ ರಾಜಕುಮಾರ್ ಇಡೀ ಕುಟುಂಬ ಬಂದಿತ್ತು. ಆಗ ಪುನೀತ್ ರಾಜಕುಮಾರ್ ಗೆ 16 ರಿಂದ 17 ವಯಸ್ಸಿರಬೇಕು. ನಮ್ಮ ತಂದೆ ತಾಯಿ ಕಾಲಿಗೆ ಹಣೆ ಹಚ್ಚಿ ನಮಸ್ಕಾರ ಮಾಡಿದ್ದರು. ಪುನೀತ್ ರಾಜಕುಮಾರ್ ಬಗ್ಗೆ ಮಾತನಾಡಬೇಕಂದ್ರೆ ತುಂಬಾ ದುಃಖ ಆಗುತ್ತಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಜಾರಕಿಹೊಳಿ ನುಡಿದಿದ್ದಾರೆ.

ಶಿವರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅಭಿಮಾ‌ನಿಗಳ ಸಂಘದಿಂದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಿತ್ತೂರು ಕಲ್ಮಠದ ರಾಜಯೋಗೀಂದ್ರ ಸ್ವಾಮೀಜಿ, ಲಖನ್ ಜಾರಕಿಹೊಳಿ ಸೇರಿ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ:

ರಶ್ಮಿಕಾ ಕೈ ಚರ್ಮದ ಬಣ್ಣ ಚೇಂಜ್​ ಆಗಿದ್ದೇಕೆ? ಪರದೆ ಹಿಂದಿನ ಕಹಾನಿ ಬಿಚ್ಚಿಟ್ಟ ಒಂದು ಫೋಟೋ

ಬಸ್ ಮೇಲಿನ ಪುನೀತ್ ಭಾವಚಿತ್ರಕ್ಕೆ ಮುತ್ತು ಕೊಟ್ಟಿದ್ದ ಅಜ್ಜಿ ಹೇಳಿದ್ದೇನು?

TV9 Kannada


Leave a Reply

Your email address will not be published. Required fields are marked *