ನವದೆಹಲಿ: ದೇಶದ ಮೂರು ಯೂನಿವರ್ಸಿಟಿಗಳು QS ವರ್ಲ್ಡ್ ಯೂನಿವರ್ಸಿಟಿ ಱಂಕಿಂಗ್ 2022ರ 200 ಅತ್ಯುನ್ನತ ಯೂನಿವರ್ಸಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. IISc ಬೆಂಗಳೂರು, IIT ಬಾಂಬೆ, ಮತ್ತು IIT ದೆಹಲಿ ಈ ಪಟ್ಟಿಯಲ್ಲಿ ಸ್ಥಾನ ಗಟ್ಟಿಸಿಕೊಂಡಿವೆ. ಅದ್ರಲ್ಲೂ ಬೆಂಗಳೂರಿನ IISc ಯೂನಿವರ್ಸಿಟಿ ಸಂಶೋಧನೆಗಾಗಿ ನಂಬರ್​​ 1 ಸ್ಥಾನ ಪಡೆದುಕೊಂಡಿದೆ.

Quacquarelli Symonds ಲಿಮಿಟೆಡ್ ವರ್ಷಕ್ಕೊಮ್ಮೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸರ್ವೇ ನಡೆಸಿ ಅತ್ಯುತ್ತಮ ಯೂನಿವರ್ಸಿಟಿಗಳನ್ನ ಪಟ್ಟಿ ಮಾಡಿ ಅವುಗಳಲ್ಲಿ ನೀಡಲಾಗುತ್ತಿರುವ ಶಿಕ್ಷಣ, ಸಂಶೋಧನೆ ಸೇರಿದಂತೆ ಹಲವು ವಿಚಾರಗಳ ಆಧಾರದ ಮೇಲೆ ಱಂಕಿಂಗ್ ನೀಡುತ್ತದೆ.

ದೇಶದ ಮೂರು ಯೂನಿವರ್ಸಿಟಿಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​​ ಮಾಡಿ ಅಭಿನಂದನೆ ಹೇಳಿದ್ದಾರೆ. ಅಲ್ಲದೇ ದೇಶದಲ್ಲಿ ಹೆಚ್ಚಿನ ಯೂನಿವರ್ಸಿಟಿಗಳು ಇಂಥ ಸಾಧನೆಗಳನ್ನು ಮಾಡುವಂತೆ ನೋಡಿಕೊಳ್ಳಲಾಗುವುದು. ಜೊತೆಗೆ ಯುವಕರಿಗೆ ಬೌದ್ಧಿಕತೆಯನ್ನು ಹೆಚ್ಚಿಸುವ ಪ್ರಯತ್ನಗಳನ್ನ ನಡೆಸಲಾಗುವುದು ಎಂದಿದ್ದಾರೆ.

The post QS ವರ್ಲ್ಡ್ ಯೂನಿವರ್ಸಿಟಿ ಱಂಕಿಂಗ್​ನಲ್ಲಿ ‘ಬೆಂಗಳೂರು IISc’ಗೆ ನಂಬರ್​ 1 ಸ್ಥಾನ appeared first on News First Kannada.

Source: newsfirstlive.com

Source link