Quad summit ಕ್ವಾಡ್ ಶೃಂಗಸಭೆಗೆ ಮುನ್ನ ಜಪಾನ್​​ನಲ್ಲಿ ಉದ್ಯಮಿಗಳನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ | Narendra Modi meets top business leaders on Day 1 Japan visit ahead of Quad summit 2022


Quad summit ಕ್ವಾಡ್ ಶೃಂಗಸಭೆಗೆ ಮುನ್ನ ಜಪಾನ್​​ನಲ್ಲಿ ಉದ್ಯಮಿಗಳನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ

ತಡಶಿ ಯಾನೈ ಜೊತೆ ಪ್ರಧಾನಿ ಮೋದಿ

Image Credit source: Twitter

ಪ್ರಧಾನಿ ಮೋದಿ ಮತ್ತು ಎನ್‌ಇಸಿ ಮುಖ್ಯಸ್ಥರು ಭಾರತದಲ್ಲಿ ಕೈಗಾರಿಕಾ ಅಭಿವೃದ್ಧಿ, ತೆರಿಗೆ ಮತ್ತು ಕಾರ್ಮಿಕ ಸೇರಿದಂತೆ ವ್ಯಾಪಾರವನ್ನು ಸುಲಭಗೊಳಿಸಲು ಕೈಗೊಳ್ಳಲಾಗುತ್ತಿರುವ ಹಲವಾರು ಸುಧಾರಣೆಗಳ ಕುರಿತು ಚರ್ಚಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ (Narendra Modi) ತಮ್ಮ ಎರಡು ದಿನಗಳ ಜಪಾನ್ (Japan) ಪ್ರವಾಸದ ಮೊದಲ ದಿನದಂದು ಅಲ್ಲಿನ ಅಗ್ರ ಗಣ್ಯ ಉದ್ಯಮಿಗಳನ್ನು ಭೇಟಿಯಾದರು. ಕ್ವಾಡ್ ಶೃಂಗಸಭೆ 2022ರ (Quad Summit 2022)ಮೊದಲು ಮೋದಿ ಜಾಗತಿಕ ಮನ್ನಣೆಯನ್ನು ಗಳಿಸಿದ ಜಪಾನಿನ ಪ್ರಮುಖ ಸಂಸ್ಥೆಗಳ ಸಿಇಒಗಳನ್ನು ಭೇಟಿ ಮಾಡಿದರು. ಟೋಕಿಯೊದಲ್ಲಿ ಎನ್‌ಇಸಿ ಕಾರ್ಪೊರೇಷನ್ ಅಧ್ಯಕ್ಷ ಡಾ ನೊಬುಹಿರೊ ಎಂಡೊ ಅವರನ್ನು ಪ್ರಧಾನಿ ಮೋದಿ ಭೇಟಿ ಮಾಡಿದ್ದು ಸಂವಾದದ ಸಮಯದಲ್ಲಿ ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಎನ್​​ಇಸಿ ಪಾತ್ರವನ್ನು ಶ್ಲಾಘಿಸಿದರು. ಅವರು ಭಾರತದಲ್ಲಿ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿನ ಅವಕಾಶಗಳನ್ನು ಚರ್ಚಿಸಿದರು ಎಂದು ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಎನ್‌ಇಸಿ ಮುಖ್ಯಸ್ಥರು ಭಾರತದಲ್ಲಿ ಕೈಗಾರಿಕಾ ಅಭಿವೃದ್ಧಿ, ತೆರಿಗೆ ಮತ್ತು ಕಾರ್ಮಿಕ ಸೇರಿದಂತೆ ವ್ಯಾಪಾರವನ್ನು ಸುಲಭಗೊಳಿಸಲು ಕೈಗೊಳ್ಳಲಾಗುತ್ತಿರುವ ಹಲವಾರು ಸುಧಾರಣೆಗಳ ಕುರಿತು ಚರ್ಚಿಸಿದ್ದಾರೆ. “ಇಂದು ನಮಗೆ ಪ್ರಧಾನಿ ಮೋದಿಯವರೊಂದಿಗೆ ಚರ್ಚಿಸಲು ಉತ್ತಮ ಅವಕಾಶ ಸಿಕ್ಕಿದೆ. ಡಿಎಕ್ಸ್ ಅನ್ನು ಹೇಗೆ ಅಳವಡಿಸಬೇಕು ಮತ್ತು ಸ್ಮಾರ್ಟ್ ಸಿಟಿಗಳಿಗೆ ಹೇಗೆ ಕೊಡುಗೆ ನೀಡಬೇಕು ಎಂಬುದರ ಕುರಿತು ನಾವು ಮಾತನಾಡಿದ್ದೇವೆ. ಪ್ರಸ್ತುತ ಸರ್ಕಾರವು ಶಿಕ್ಷಣ ಮತ್ತು ಇತರ ಕ್ಷೇತ್ರಗಳಲ್ಲಿನ ಯೋಜನೆಗಳನ್ನು ಹೊಂದಿದೆ ಎಂದು ಎಂಡೋ ಪ್ರಧಾನ ಮಂತ್ರಿ ಮೋದಿ ಜತೆಗಿನ ಭೇಟಿ ನಂತರ ಹೇಳಿದ್ದಾರೆ.

(ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)

TV9 Kannada


Leave a Reply

Your email address will not be published. Required fields are marked *