Queen Elizabeth II Funeral: ಬ್ರಿಟನ್ ರಾಣಿ ಎಲಿಜಬೆತ್ II ಅಂತ್ಯಕ್ರಿಯೆ ಲೈವ್: ಜಗತ್ತಿನ ಅರ್ಧಕ್ಕಿಂತಲೂ ಹೆಚ್ಚಿನ ಮಂದಿಯಿಂದ ವೀಕ್ಷಣೆ | Queen Elizabeth II funeral: How many people watched on television?


ಬ್ರಿಟನ್ ಇತಿಹಾಸದಲ್ಲೇ ಸುದೀರ್ಘ ವರ್ಷಗಳ ಕಾಲ ಆಳ್ವಿಕೆ ನಡೆಸಿದ ಖ್ಯಾತಿ ಗಳಿಸಿದ್ದ ರಾಣಿ ಎಲಿಜಬೆತ್ II ವಯೋಸಹಜ ಅನಾರೋಗ್ಯದಿಂದ ಬಳಲಿ ಕೊನೆಯುಸಿರೆಳೆದಿದ್ದರು.

ಬ್ರಿಟನ್ ಇತಿಹಾಸದಲ್ಲೇ ಸುದೀರ್ಘ ವರ್ಷಗಳ ಕಾಲ ಆಳ್ವಿಕೆ ನಡೆಸಿದ ಖ್ಯಾತಿ ಗಳಿಸಿದ್ದ ರಾಣಿ ಎಲಿಜಬೆತ್ II ವಯೋಸಹಜ ಅನಾರೋಗ್ಯದಿಂದ ಬಳಲಿ ಕೊನೆಯುಸಿರೆಳೆದಿದ್ದರು. ಅವರ ಅಂತ್ಯಕ್ರಿಯೆಯ ಪ್ರಸಾರವನ್ನು 4.1 ಬಿಲಿಯನ್ ಮಂದಿ ಅಂದರೆ ಜಗತ್ತಿನ ಅರ್ಧಕ್ಕಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ರಾಣಿ ಎಲಿಜಬೆತ್ II ರ ಅಂತ್ಯಕ್ರಿಯೆ ಸೆಪ್ಟೆಂಬರ್ 19ರಂದು ಸೋಮವಾರ ನೆರವೇರಿದೆ. ಅಂತ್ಯಕ್ರಿಯೆಯನ್ನು ನೇರ ಪ್ರಸಾರ ಮಾಡಲಾಗಿತ್ತು.
ಒಂದು ಅಂದಾಜಿನ ಪ್ರಕಾರ, ಅಂತ್ಯಕ್ರಿಯೆಯನ್ನು ಸುಮಾರು 420 ಕೋಟಿ ಜನರು ವೀಕ್ಷಿಸಿದ್ದಾರೆ ಎಂದು ಅಂದಾಜಿಸಲಾಗಿದೆ.

ಎಂದಿಗೂ ರಾಜಮನೆತನದ ವಿವಾಹಗಳು ಮತ್ತು ಅಂತ್ಯಕ್ರಿಯೆ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯುತ್ತವೆ. ಈ ಹಿಂದೆ 1997ರಲ್ಲಿ ರಾಜಕಉಮಾರಿ ಡಯಾನಾ ಅವರು ಮೃತಪಟ್ಟಿದ್ದರು, ಅಂದು ಅವರ ಅಂತ್ಯಕ್ರಿಯೆಯನ್ನು 2.5 ಬಿಲಿಯನ್ ಮಂದಿ ವೀಕ್ಷಿಸಿದ್ದರು ಎಂದು ಎನ್​ಬಿಸಿ ನ್ಯೂಸ್ ವರದಿ ಮಾಡಿತ್ತು.

ಇದೀಗ ನ್ಯೂಸ್​ವೀಕ್ ಪ್ರಕಾರ ರಾಣಿ ಎಲಿಜಬೆತ್ II ಅಂತ್ಯಕ್ರಿಯೆಯನ್ನು ಬರೋಬ್ಬರಿ 410 ಕೋಟಿ ಮಂದಿ ವೀಕ್ಷಿಸಿದ್ದಾರೆ ಎನ್ನಲಾಗಿದೆ.
ಬಿಬಿಸಿ ಪ್ರಕಾರ, 1981 ರಲ್ಲಿ ಪ್ರಿನ್ಸ್ ಚಾರ್ಲ್ಸ್-ಈಗ ಕಿಂಗ್ ಚಾರ್ಲ್ಸ್ III ರೊಂದಿಗಿನ ಡಯಾನಾ ಅವರ ವಿವಾಹ ವಿವಾಹವು 74 ದೇಶಗಳಲ್ಲಿ 750 ಮಿಲಿಯನ್ ಪ್ರೇಕ್ಷಕರನ್ನು ಕಂಡಿತ್ತು.

ಏತನ್ಮಧ್ಯೆ, 2011 ರಲ್ಲಿ ಪ್ರಿನ್ಸ್ ವಿಲಿಯಂ ಮತ್ತು ಕೇಟ್ ಮಿಡಲ್ಟನ್ ಅವರ ವಿವಾಹವು ವಿಶ್ವಾದ್ಯಂತ 162 ಮಿಲಿಯನ್ ವೀಕ್ಷಕರನ್ನು ಗಳಿಸಿತು.
ರಾಣಿ ಎಲಿಜಬೆತ್ II ರ ಅಂತ್ಯಕ್ರಿಯೆಯು WatchTVAbroad.com ನಲ್ಲಿ ನೇರ ಪ್ರಸಾರ ಕಂಡಿತ್ತು.

ರಾಣಿ ಎಲಿಜಬೆತ್ II ಗೆ 96 ವರ್ಷ ವಯಸ್ಸಾಗಿತ್ತು. ಅರಸೊತ್ತಿಗೆಗೆ ವಾರಸುದಾರರಾದ ಪ್ರಿನ್ಸ್ ಚಾರ್ಲ್ಸ್ ಸೇರಿದಂತೆ ನಾಲ್ವರು ಮಕ್ಕಳು ಮತ್ತು ಹಲವು ಮೊಮ್ಮಕ್ಕಳನ್ನು ಅವರು ಅಗಲಿದ್ದರು..

1952ರಲ್ಲಿ ಬ್ರಿಟನ್ ರಾಣಿಯಾಗಿ ಆಡಳಿತದ ಚುಕ್ಕಾಣಿ ಹಿಡಿದಿದ್ದ ಅವರು 70 ವರ್ಷಗಳಷ್ಟು ಸುದೀರ್ಘ ಕಾಲ ಸಿಂಹಾಸನ ಅಲಂಕರಿಸಿದ್ದರು. ಬ್ರಿಟನ್ ಅರಸೊತ್ತಿಗೆಯಲ್ಲಿ ಅತೀ ಹೆಚ್ಚು ಕಾಲ ಇದ್ದ ದಾಖಲೆ ಅವರದ್ದು. ವಿಕ್ಟೋರಿಯಾ ರಾಣಿಯ ದಾಖಲೆಯನ್ನೂ ಅವರು ಮುರಿದಿದ್ದರು.

ರಾಣಿ ವಿಕ್ಟೋರಿಯಾ 63 ವರ್ಷಗಳ ಕಾಲ ರಾಣಿಯಾಗಿ ದಾಖಲೆ ಮಾಡಿದ್ದರು. ಇತಿಹಾಸದಲ್ಲಿ ಅತಿ ಹೆಚ್ಚು ವರ್ಷ ಆಳ್ವಿಕೆ ನಡೆಸಿದ ಅರಸರ ಪಟ್ಟಿಯಲ್ಲಿ ಎರಡನೇ ಎಲಿಜಬೆತ್ ಎರಡನೇ ಸ್ಥಾನ ಪಡೆಯುತ್ತಾರೆ. ಬ್ರಿಟನ್ ರಾಣಿಯಾಗಿ 70 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ಲಾಟಿನಂ ಜುಬಿಲಿ ಆಚರಣೆ ಮಾಡಲಾಗಿತ್ತು.

ಇತರೆ ದೇಶಗಳ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.