Queen Elizabeth II: Queen Elizabeth II: ಕಿಂಗ್ ಚಾರ್ಲ್ಸ್ ಭೇಟಿ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು | Queen Elizabeth II: President Draupadi Murmu meets King Charles III


ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ (ಸೆಪ್ಟೆಂಬರ್ 18) ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ಕಿಂಗ್ ಚಾರ್ಲ್ಸ್ III ಅವರನ್ನು ಭೇಟಿಯಾದರು.ಇಂದು ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ರಾಣಿ ಎಲಿಜಬೆತ್ II ಅವರ ರಾಜ ಮನೆತನದ ವಿಧಿ ವಿಧಾನದ ಮೂಲಕ ಮತ್ತು ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಯ ನಡೆಯಲಿದೆ

Queen Elizabeth II: Queen Elizabeth II: ಕಿಂಗ್ ಚಾರ್ಲ್ಸ್ ಭೇಟಿ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

President Draupadi Murmu meets King Charles III

ಲಂಡನ್‌: ಇಂದು ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ರಾಣಿ ಎಲಿಜಬೆತ್ II ಅವರ ರಾಜ ಮನೆತನದ ವಿಧಿ ವಿಧಾನದ ಮೂಲಕ ಮತ್ತು ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಯ ನಡೆಯಲಿದೆ, ಈ ಮುನ್ನ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ (ಸೆಪ್ಟೆಂಬರ್ 18) ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ಕಿಂಗ್ ಚಾರ್ಲ್ಸ್ III ಅವರನ್ನು ಭೇಟಿಯಾದರು.

ದ್ರೌಪದಿ ಮುರ್ಮು ಅವರು ರಾಣಿ ಎಲಿಜಬೆತ್ II ರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಮತ್ತು ಭಾರತ ಸರ್ಕಾರದ ಪರವಾಗಿ ಸಂತಾಪ ಸೂಚಿಸಲು ಶನಿವಾರ ಸಂಜೆ (ಸೆಪ್ಟೆಂಬರ್ 17) ಲಂಡನ್‌ಗೆ ಆಗಮಿಸಿದರು. ಅಂತ್ಯಕ್ರಿಯೆಯಲ್ಲಿ ವಿಶ್ವ ನಾಯಕರು, ರಾಜವಂಶಸ್ಥರು ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ. ರಾಣಿ ಎಲಿಜಬೆತ್ II ಅವರ ವಿಶ್ವದಾದ್ಯಂತ ಅನೇಕ ಜನರು ಈ ಕಾರ್ಯಕ್ರಮವನ್ನು ಮಾಧ್ಯಮದ ಮೂಲಕ ವಿಕ್ಷೇಣೆ ಮಾಡಲಿದ್ದಾರೆ. ಈ ಕಾರ್ಯದಲ್ಲಿ ವಿದೇಶಿ ರಾಜಮನೆತನದವರು ಮತ್ತು ವಿಶ್ವ ನಾಯಕರು ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.

ಸೋಮವಾರ ನಡೆಯಲಿರುವ ರಾಣಿ ಎಲಿಜಬೆತ್ ಅವರ ಅಂತ್ಯಕ್ರಿಯೆಗಾಗಿ ಯುಎಸ್ ಅಧ್ಯಕ್ಷ ಜೋ ಬಿಡನ್ ಲಂಡನ್‌ಗೆ ಆಗಮಿಸಿದ್ದಾರೆ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಇತರ ಕೆಲವು ನಾಯಕರು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಇಟಲಿಯ ಅಧ್ಯಕ್ಷ ಸರ್ಗಿಯೋ ಮ್ಯಾಟರೆಲ್ಲಾ, ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್, ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್, ವೈಸ್ ಚೀನಾದ ಅಧ್ಯಕ್ಷ ವಾಂಗ್ ಕಿಶನ್ ಮತ್ತು ನ್ಯಾಟೋದ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಇತರರು ಭಾಗವಹಿಸಲಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.